ಎಪಿಸೋಡ್ ಒಂದಕ್ಕೆ ಇಷ್ಟು ಚಾರ್ಚ್ ಮಾಡ್ತಾರಾ ಈ ಕಿರುತೆರೆ ನಟಿ?
ಅಕ್ಟೋಬರ್ 4, 1980 ರಂದು ಜನಿಸಿದ ಶ್ವೇತಾ ತಿವಾರಿ ಅವರು ಭಾರತೀಯ ದೂರದರ್ಶನದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ನಟಿಯರಲ್ಲೊಬ್ಬರು. ಇಷ್ಟು ವರ್ಷಗಳ ನಂತರವೂ, ಏಕ್ತಾ ಕಪೂರ್ ಅವರ ಸಿರಿಯಲ್ ಕಸೌಟಿ ಜಿಂದಗಿ ಕೇ ಯ 'ಪ್ರೇರಣಾ ಶರ್ಮಾ' ಪಾತ್ರದಿಂದ ಅವರನ್ನು ಇನ್ನೂ ಫ್ಯಾನ್ಸ್ ನೆನಪಿಸಿಕೊಳ್ಳುತ್ತಾರೆ. ಹಿಂದಿ ದೂರದರ್ಶನದಲ್ಲಿ ಅವರ ಯಶಸ್ಸು ಭೋಜ್‌ಪುರಿ ಸಿನಿಮಾದಲ್ಲಿಯೂ ಹೆಸರು ಮಾಡಲು ಸಹಾಯ ಮಾಡಿತು. ಶ್ವೇತಾ ತಿವಾರಿ ಹಿಂದಿ ದೂರದರ್ಶನ, ಭೋಜ್‌ಪುರಿ ಸಿನಿಮಾ, ಪಾಕಿಸ್ತಾನಿ ದೂರದರ್ಶನ, ಮರಾಠಿ ಸಿನಿಮಾ ಮತ್ತು ಪಂಜಾಬಿ ಸಿನಿಮಾಗಳಲ್ಲಿ ನಟಿಯಾಗಿ ಕೆಲಸ ಮಾಡಿದ್ದಾರೆ. ವಿವಿಧ ಭಾಷೆಗಳ ಮೇಲಿನ ಹಿಡಿತದಿಂದ, ಶ್ವೇತಾ ತಿವಾರಿ ಭಾರತದಲ್ಲಿಯೇ ಮನೆಮಾತಾಗಿದ್ದಾರೆ. ಆಕೆಯ ನಟನೆಯ ಜೊತೆಗೆ ಅವರ ಮೋಡಿ ಮಾಡುವ ಫ್ಯಾಷನ್ ಸೆನ್ಸ್‌ನಿಂದ ಸದಾ ಸುದ್ದಿಯಲ್ಲಿರತ್ತಾರೆ. ಶ್ವೇತಾ ಅವರ ನಿವ್ವಳ ಮೌಲ್ಯ, ಕಾರು ಸಂಗ್ರಹಣೆ ವಿವರ ಇಲ್ಲಿದೆ.

43 ವರ್ಷದ ಶ್ವೇತಾ ತಿವಾರಿ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಬೆರಗುಗೊಳಿಸುವ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅವರ ಫ್ಯಾಷನ್ ಮತ್ತು ಸೌಂದರ್ಯದಿಂದ ಸಾಕಷ್ಟು ಫ್ಯಾನ್ ಫಾಲೋವರ್ಸ್ ಅನ್ನು ಹೊಂದಿದ್ದಾರೆ.
ಎರಡು ಬಾರಿ ತಾಯಿಯಾದರೂ, ಶ್ವೇತಾ ತಿವಾರಿ ಇನ್ನೂ ಭಾರತದ ಅತ್ಯಂತ ಫಿಟ್ ಮತ್ತು ಅತ್ಯಂತ ಹಾಟ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಜೊತೆಗೆ ಶ್ವೇತಾ ಶ್ರೀಮಂತ ನಟಿ ಕೂಡ ಹೌದು
ನಟಿ ಶ್ವೇತಾ ತಿವಾರಿ ಅವರು ವಿವಿಧ ಮಾಧ್ಯಮಗಳಲ್ಲಿ ಸಾಕಷ್ಟು ಕೆಲಸ ಮಾಡುತ್ತಾರೆ. ಚಲನಚಿತ್ರಗಳಲ್ಲಿ ಕೆಲಸ ಮಾಡುವುದರಿಂದ ಹಿಡಿದು ದೂರದರ್ಶನ ಕಾರ್ಯಕ್ರಮಗಳು ಮತ್ತು ವೆಬ್ ಸರಣಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ವರದಿಗಳ ಪ್ರಕಾರ, ಶ್ವೇತಾ ತಿವಾರಿ ಅವರು ದೂರದರ್ಶನ ಕಾರ್ಯಕ್ರಮದ ಒಂದು ಸಂಚಿಕೆಗೆ ಸುಮಾರು 3 ಲಕ್ಷ ರೂ. ಚಾರ್ಜ್ ಮಾಡುತ್ತಾರೆ.
ಶ್ವೇತಾ ಅವರ ತಿಂಗಳ ಆದಾಯ ಬ್ರಾಂಡ್ ಎಡಾರ್ಸ್‌ಮೆಂಟ್‌ಗಳು, ಈವೆಂಟ್‌ಗಳು, ಸಹಯೋಗ ಮತ್ತು ಚಲನಚಿತ್ರಗಳು ಅಥವಾ ವೆಬ್ ಸರಣಿಗಳಲ್ಲಿ ಕೆಲಸ ಮಾಡುವುದು ಸೇರಿದಂತೆ ಸುಮಾರು 60 ಲಕ್ಷ ದುಡಿಯುತ್ತಾರೆ.
ಶ್ವೇತಾ ತಿವಾರಿ ಕಾರು ಪ್ರೇಮಿ ಮತ್ತು ಅವರ ಗ್ಯಾರೇಜ್‌ನಲ್ಲಿ ಸುಮಾರು ರೂ. 47 ರಿಂದ ರೂ. 48 ಲಕ್ಷ.ರೂ ಬೆಲೆಯ ಐಷಾರಾಮಿ ಆಡಿ A4,1.38 ಕೋಟಿಯ BMW 7 ಸರಣಿ 730 d ಮತ್ತು ಹ್ಯುಂಡೈ ಸ್ಯಾಂಟ್ರೋ ಇದೆ.
ಮುಂಬೈನ ಕಂಡಿವಲಿ ಪ್ರದೇಶದ ಐಷಾರಾಮಿ ಬಹು ಮಹಡಿ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಶ್ವೇತಾ ಅವರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಆಗಾಗ ಅವರ ಸುಂದರವಾದ ಅಪಾರ್ಟ್ಮೆಂಟ್‌ನ ಒಳನೋಟವನ್ನು ನೀಡುತ್ತದೆ.
ಹಲವಾರು ವರದಿಗಳ ಪ್ರಕಾರ, ಶ್ವೇತಾ ಅವರ ವಾರ್ಷಿಕ ಆದಾಯ ಸುಮಾರು ರೂ. 10 ಕೋಟಿ. ನಟಿ ಇನ್ನೂ ವೃತ್ತಿಪರ ರಂಗದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ಮತ್ತು ಶ್ವೇತಾ ಅವರ ನಿವ್ವಳ ಮೌಲ್ಯವು ಸುಮಾರು ರೂ. 81 ಕೋಟಿ ಎನ್ನಲಾಗಿದೆ.