ವಿಡಿಯೋ ಲೀಕ್ ಬಳಿಕ ಸಾರ್ವಜನಿಕವಾಗಿ ಕಾಣಿಸಿದ ನಟಿ ಶ್ರುತಿ!
ನಟಿ ಶ್ರುತಿ ನಾರಾಯಣನ್ ವಿಡಿಯೋ ಲೀಕ್ ವಿವಾದದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಮುಂಬರುವ ಚಿತ್ರ 'ಗಟ್ಸ್' ಪ್ರಚಾರದಲ್ಲಿ ಶಾಂತ ಮತ್ತು ಆತ್ಮವಿಶ್ವಾಸದಿಂದ ಭಾಗವಹಿಸಿದ್ದಾರೆ. ನೆಗೆಟಿವ್ ಮಾತುಗಳಿಗೆ ತಲೆಕೆಡಿಸಿಕೊಳ್ಳದೆ ಆತ್ಮವಿಶ್ವಾಸದಿಂದ ಕಾಣಿಸಿಕೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ದಕ್ಷಿಣ ಭಾರತದ ನಟಿ ತಮಿಳಿನ ಶ್ರುತಿ ನಾರಾಯಣನ್ ವಿಡಿಯೋ ಲೀಕ್ ವಿವಾದದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಕಾಸ್ಟಿಂಗ್ ಕೌಚ್ ವಿಡಿಯೋ ವೈರಲ್ ಆದ ಬಳಿಕ ನಟಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಕಾಸ್ಟಿಂಗ್ ಕೌಚ್ ವಿಡಿಯೋ ವಿವಾದದ ನಂತರ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಶ್ರುತಿ ನಾರಾಯಣನ್ ಅವರ ಲೀಕ್ ವೀಡಿಯೊ ಬಗ್ಗೆ ತನಿಖೆ ನಡೆಯುತ್ತಿದ್ದು, ಇದು ಖಾಸಗಿ ಆಡಿಷನ್‌ನದ್ದಾಗಿದೆ ಎಂದು ವರದಿಯಾಗಿತ್ತು. ಆದರೆ ಅಧಿಕೃತವಾಗಿ ಇಲ್ಲಿವರೆಗೆ ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ದೃಢೀಕರಿಸಲಾಗಿಲ್ಲ. ಕಳೆದ ಮಾರ್ಚ್ ಕೊನೆವಾರದಲ್ಲಿ ನಟಿಯ 14 ನಿಮಿಷದ ವಿಡಿಯೋ ವೈರಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಸಿತ್ತು.
ಇದೀಗ ನಟಿ ಎಲ್ಲಾ ನೆಗೆಟಿವ್ ಮಾತುಗಳಿಗೆ ತಲೆಕೆಡಿಸಿಕೊಳ್ಳದೆ. ಆತ್ಮವಿಶ್ವಾಸದಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಮುಂಬರುವ ಚಿತ್ರ 'ಗಟ್ಸ್' ಪ್ರಚಾರಕ್ಕಾಗಿ ಹೊರಗೆ ಬಂದಾಗ ಶಾಂತ ಮತ್ತು ಆತ್ಮವಿಶ್ವಾಸದಿಂದ ಕಾಣಿಸಿಕೊಂಡರು. ಸರಳವಾದ ನೀಲಿ ಬಣ್ಣದ ಹಗುರವಾದ ಸೀರೆಯನ್ನು ಧರಿಸಿ, ಓಪನ್ ಹೇರ್ ಬಿಟ್ಟಿದ್ದರು. ಶಾಂತ ನಗುವಿನೊಂದಿಗೆ ಮಾಧ್ಯಮವನ್ನು ಎದರುಗೊಂಡರು.
ಕಾಸ್ಟಿಂಗ್ ಕೌಚ್ ವೀಡಿಯೊ ಲೀಕ್ ಆದ ನಟಿ ಶ್ರುತಿ ನಾರಾಯಣನ್ ಅವರ ಚಂದದ 10 ಫೋಟೊಗಳು!
ಕೆಲವು ಟೀಕೆಗಳ ನಡುವೆ, ಬಹುತೇಕ ಮಂದಿ ಅವರ ಬಲವಾದ ಇಚ್ಛಾಶಕ್ತಿಯನ್ನು ಶ್ಲಾಘಿಸುತ್ತಿದ್ದಾರೆ. ಸಾಮಾಜಿಕ ತಾಣದ ಬಳಕೆದಾರರೊಬ್ಬರು ತುಂಬಾ ಬಲಿಷ್ಠ ಮಹಿಳೆ ಎಂದು ಬರೆದಿದ್ದಾರೆ. ಮತ್ತೊಂದು ಕಾಮೆಂಟ್ "ಆತ್ಮವಿಶ್ವಾಸ" ಎಂದು ಬರೆಯಲಾಗಿದೆ. ಮೂರನೇ ಕಾಮೆಂಟ್ "ಬಲವಾಗಿರಿ; ಆಶೀರ್ವಾದ ಇರಲಿದೆ" ಎಂದು ಬರೆಯಲಾಗಿದೆ. ವೀಡಿಯೊ ಸಮಸ್ಯೆಯನ್ನು ಹುಟ್ಟುಹಾಕಿದೆ ಆದರೆ ಸತ್ಯಾಸತ್ಯತೆ ಇನ್ನೂ ಪರಿಶೀಲನೆಯಲ್ಲಿದೆ. ವಿವಾದದ ಸಮಯದಲ್ಲಿ ನಟಿಯ ಇನ್‌ಸ್ಟಾಗ್ರಾಮ್ ಖಾತೆ ಖಾಸಗಿಯಾಗಿದ್ದರೂ, ಅವರು ಇತ್ತೀಚೆಗೆ ತಮ್ಮ ಖಾತೆಯನ್ನು ಸಾರ್ವಜನಿಕಗೊಳಿಸಿದ್ದಾರೆ ಮತ್ತು ಫೋಟೋ ಹಂಚಿಕೊಂಡಿದ್ದಾರೆ.
14 ನಿಮಿಷ ವಿಡಿಯೋ ಲೀಕ್ ಬೆನ್ನಲ್ಲೇ ನಟಿ ಶ್ರುತಿ ನಾರಾಯಣನ್ ಮೊದಲ ಪೋಸ್ಟ್, ನೋ ಕಮೆಂಟ್ಸ್
ಸೋರಿಕೆಯಾದ ಕಾಸ್ಟಿಂಗ್ ಕೌಚ್ ವೀಡಿಯೊ ತೀವ್ರ ಊಹಾಪೋಹಗಳಿಗೆ ಕಾರಣವಾಯಿತು. ತಮಿಳು ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌಚ್ ಕುರಿತ ವಿಡಿಯೋ ಇದಾಗಿದೆ ಎಂದು ಬಾರೀ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಶ್ರುತಿ ನಾರಾಯಣ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಬೇಸರ ಹೊರ ಹಾಕಿ ತಮಿಳು ಚಿತ್ರರಂಗದ ಅಸಲಿ ಮುಖ ಎಂದಿದ್ದರು. ಇದಾದ ಬಳಿಕ ನಟಿ ಶ್ರುತಿ ನಾರಾಯಣ್ ಇನ್‌ಸ್ಟಾಗ್ರಾಂ ಮೂಲಕ ಪೋಸ್ಟ್ ಹಂಚಿಕೊಂಡು ಕಾಮೆಂಟ್‌ಗಳನ್ನು ಆಫ್ ಮಾಡಿದ್ದರು. ಆಕೆಯ ಹೊಸ ಫೋಟೋಗಳಿಗೆ ಕ್ಲಿಕ್ ಮಾಡಿದ ತಕ್ಷಣ ನೋ ಕಾಮೆಂಟ್ಸ್ ಎಂದು ತೋರಿಸುತ್ತಿತ್ತು.
ಇದರ ಮಧ್ಯೆ ನಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಹೃದಯಸ್ಪರ್ಶಿ ಸಂದೇಶದಲ್ಲಿ ಈ ವಿವಾದವು ತನಗೆ ಮತ್ತು ತನ್ನ ಕುಟುಂಬಕ್ಕೆ ಉಂಟು ಮಾಡಿದ ನೋವನ್ನು ಹೇಳಿಕೊಂಡಿದ್ದಾರೆ. ಇಂದು AI- ರಚಿತವಾದ ವೀಡಿಯೊಗಳನ್ನು ಎಷ್ಟು ಸುಲಭವಾಗಿ ರಚಿಸಬಹುದು ಎಂಬುದರ ಕುರಿತು ಪ್ರಭಾವಿಯೊಬ್ಬರು ಚರ್ಚಿಸುವ ರೀಲ್ಸ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಇದು ವೈರಲ್ ವೀಡಿಯೊಗಳು ಅಧಿಕೃತವಾಗಿಲ್ಲದಿರಬಹುದು ಎಂಬ ಸಂದೇಶ ಸಾರಿದಂತಿದೆ.
ನಿಮಗೆಲ್ಲಾ, ಈ ಎಲ್ಲಾ ವಿಷಯಗಳನ್ನು ನನ್ನ ಮೇಲೆ ಹರಡುವುದು ಕೇವಲ ತಮಾಷೆ ಮತ್ತು ಮೋಜಿನ ವಿಷಯ. ಆದರೆ ನನಗೆ ಮತ್ತು ನನ್ನ ಆಪ್ತರಿಗೆ, ಇದು ನಮಗೆ ತುಂಬಾ ಕಠಿಣ ಪರಿಸ್ಥಿತಿ. ವಿಶೇಷವಾಗಿ ನನಗೆ, ಇದು ತುಂಬಾ ಕಷ್ಟಕರ ಸಮಯ, ಮತ್ತು ಇದನ್ನು ನಿಭಾಯಿಸುವುದು ಕಷ್ಟಕರವಾದ ಪರಿಸ್ಥಿತಿ" ಎಂದು ಶ್ರುತಿ ತಾನು ಅನುಭವಿಸುತ್ತಿರುವ ಭಾವನಾತ್ಮಕ ಒತ್ತಡದ ಬಗ್ಗೆ ಹೇಳಿದ್ದಾರೆ.
ಅವರು ಸಹಾನುಭೂತಿಯ ಅಗತ್ಯವನ್ನು ವ್ಯಕ್ತಪಡಿಸಿದರು. ತಾನೂ ಭಾವನೆಗಳನ್ನು ಹೊಂದಿರುವ ಮನುಷ್ಯ ಎಂದು ತಮ್ಮ ಅನುಯಾಯಿಗಳಿಗೆ ನೆನಪಿಸಿದರು. "ನಾನು ಕೂಡ ಒಬ್ಬ ಹುಡುಗಿ, ಮತ್ತು ನನಗೂ ಭಾವನೆಗಳಿವೆ. ನನ್ನ ಆಪ್ತರಿಗೂ ಭಾವನೆಗಳಿವೆ, ಮತ್ತು ನೀವು ಅದನ್ನು ಇನ್ನಷ್ಟು ಹದಗೆಡಿಸುತ್ತಿದ್ದೀರಿ" ಎಂದು ಶ್ರುತಿ ಹೇಳಿದರು, ಹಾನಿಕಾರಕ ವಿಷಯವನ್ನು ಹರಡುವುದನ್ನು ನಿಲ್ಲಿಸುವಂತೆ ಜನರನ್ನು ಬೇಡಿಕೊಂಡರು