ವೈವಾಹಿಕ ಜೀವನಕ್ಕೆ ಕಾಲಿಟ್ಟ ಶ್ರೀರಸ್ತು ಶುಭಮಸ್ತು ನಟಿ ದೀಪಾ ಕಟ್ಟೆ
ಝೀ ಕನ್ನಡದಲ್ಲಿ ಸದ್ಯ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಸೀರಿಯಲ್ ಸೇರಿ, ಹಲವಾರು ಸೀರಿಯಲ್ ಗಳಲ್ಲಿ ಮಿಂಚಿದ್ದ ನಟಿ ದೀಪಾ ಕಟ್ಟೆ ಇದೀಗ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ಕಿರುತೆರೆಯಲ್ಲಿ ನಾಯಕಿ ಪಾತ್ರದಲ್ಲೂ, ಖಳನಾಯಕಿ ಪಾತ್ರದಲ್ಲೂ ನಟಿಸಿ ಜನಮನ ಗೆದ್ದಿರುವ ನಟಿ ದೀಪಾ ಕಟ್ಟೆ (Deepa Katte) ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.
ಝೀ ಕನ್ನಡದಲ್ಲಿ ಪ್ರಸಾರದವಾಗುತ್ತಿರುವ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ತುಳಸಿ ಪುತ್ರಿ ಸಂಧ್ಯಾ ಪಾತ್ರ ನಿರ್ವಹಿಸುತ್ತಿರುವ ನಟಿ ದೀಪಾ ಕಟ್ಟೆ ಸೀರಿಯಲ್ ನಲ್ಲಿ ಸೊಕ್ಕಿನ ಹುಡುಗಿಯಾಗಿ, ಮನೆ ಬಿಟ್ಟು ಓಡಿ ಹೋದಳು ಅಂತಾನೆ ಫೇಮಸ್ ಆಗಿದ್ದಾರೆ.
ಈ ಮಲೆನಾಡಿನ ಬೆಡಗಿ ದೀಪಾ ಕಟ್ಟೆ ಐಟಿ ಉದ್ಯೋಗಿ ರಕ್ಷಿತ್ ಯಡಪಡಿತ್ತಾಯ ಅವರ ಜೊತೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ (married life) ಕಾಲಿಟ್ಟಿದ್ದು, ಮದುವೆ ಸಮಾರಂಭ, ಅರಿಶಿನ, ಮೆಹೆಂದಿ ಶಾಸ್ತ್ರದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಕೃಷ್ಣಾನುಗ್ರಹ ಸಭಾ ಭವನದಲ್ಲಿ ದೀಪಾ ಕಟ್ಟೆ - ರಕ್ಷಿತ್ ಅವರ ವಿವಾಹ, ಆತ್ಮೀಯ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಡೆಯಿತು.
ದೀಪಾ ಕಟ್ಟೆ - ರಕ್ಷಿತ್ ವೈವಾಹಿಕ ಜೀವನಕ್ಕೆ ಶುಭ ಕೋರಲು ಸೀರಿಯಲ್ ತಾರೆಯರು ಸಹ ತೆರಳಿದ್ದರು. ಮಿಥುನ ರಾಶಿ ಸೀರಿಯಲ್ ನಟ ನಟಿಯರಾದ ವೈಷ್ಣವಿ, ಯಧು ಮೊದಲಾದವರು ತೆರಳಿ ನವ ಜೋಡಿಗೆ ಶುಭ ಕೋರಿದ್ದಾರೆ.
ಮಲೆನಾಡ ಬೆಡಗಿ ದೀಪಾ ಕಟ್ಟೆ ಇಂಜಿನಿಯರ್ ಆಗಿದ್ದು, ಐಟಿ ಕಂಪನಿಯಲ್ಲಿ (IT company) ಕೆಲಸ ಮಾಡುತ್ತಿದ್ದರು, ಆದರೆ ನಟನೆಯಲ್ಲಿ ಆಸಕ್ತಿ ಇದ್ದ ಅವರು ಬಳಿಕ ಕಿರುತೆರೆಗೆ ನಿರೂಪಕಿಯಾಗಿ ಎಂಟ್ರಿ ಕೊಟ್ಟರು. ಬಳಿಕ ಸಾಕಷ್ಟು ಸೀರಿಯಲ್ ನಲ್ಲಿ ನಟಿಸಿದ್ದಾರೆ.
ದೀಪಾ ಸದ್ಯ ‘ಶ್ರೀರಸ್ತು ಶುಭಮಸ್ತು’, ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಇವರು ಈ ಹಿಂದೆ ಮಿಥುನ ರಾಶಿ, ಹಿಟ್ಲರ್ ಕಲ್ಯಾಣ, ಜೀವ ಹೂವಾಗಿದೆ’ ಮುಂತಾದ ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದಾರೆ. ನಟಿಯ ವೈವಾಹಿಕ ಜೀವನ ಶುಭವಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.