ಸೀತಾರಾಮ ನಟಿ ವೈಷ್ಣವಿ ಗೌಡ ಚಾರ್ಮ್ ಕಡಿಮೆಯಾಗಿದೆ ಎಂದ ಫ್ಯಾನ್ಸ್!
ಕನ್ನಡ ಕಿರುತೆರೆಯ ಸೀತಾರಾಮ ಸೀರಿಯಲ್ನಲ್ಲಿ ಸೀತೆಯಾಗಿ ಮಿಂಚುತ್ತಿರುವ ವೈಷ್ಣವಿ ಗೌಡ ಕೆಂಪು ಗುಲಾಬಿ ಬಣ್ಣದ ಸೀರೆಯನ್ನು ಧರಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಸಖತ್ ಪೋಸ್ ಕೊಟ್ಟಿದ್ದಾರೆ. ಸೀರೆಯಲ್ಲಿರೋ ವೈಷ್ಣವಿಯನ್ನು ಕಂಡು ಅಭಿಮಾನಿಗಳು ಹಾರ್ಟ್ ಇಮೋಜಿಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಕನ್ನಡ ಕಿರುತೆರೆಗೆ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿಯಾಗಿ ಬಂದ ವೈಷ್ಣವಿ ಗೌಡ ಅವರು ಹಲವು ವರ್ಷಗಳಿಂದ ತಮ್ಮ ಸೌಂದರ್ಯ ಹಾಗೂ ಮುಗ್ದತೆಯ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.
ಕೆಂಪು ಸೀರೆಯಲ್ಲಿ ನಟಿ ವೈಷ್ಣವಿಗೌಡ ಅವರನ್ನು ನೋಡಿದರೆ ದಿ ರೋಸ್ ಈಸ್ ರೆಡ್, ವೈಷ್ಣವಿಗೌಡ ಸ್ಯಾರಿ ಲುಕಿಂಗ್ ಈಸ್ ವೆರಿಗುಡ್ ಎಂದು ಹಾಡು ಹೇಳಬೇಕೆನಿಸುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿರುವ ವೈಷ್ಣವಿ ಗೌಡ ಅವರು ತಮ್ಮ ಫೋಟೋಗಳನ್ನು ಇನ್ಸ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಗುಲಾಬಿ ಸ್ಯಾರಿ ಆನ್ ರೇನಿ ಡೇ (Gulabi saree on a rainy day 🌧️) ಎಂದು ಟ್ಯಾಗ್ಲೈನ್ ಬರೆದುಕೊಂಡಿದ್ದಾರೆ.
ವೈಷ್ಣವಿ ಗೌಡ ನಟಿಸಿರುವ ಎಲ್ಲ ಧಾರಾವಾಹಿಗಳಲ್ಲಿ ಸಾಂಪ್ರದಾಯಿಕ ಉಡುಗೆಗಳಲ್ಲಿಯೇ ಕಾಣಿಸಿಕೊಂಡಿದ್ದಾರೆ. ಸ್ವತಃ ವೈಷ್ಣವಿ ಅವರು ರಿಯಲ್ ಲೈಫ್ನಲ್ಲೂ ಸೀರೆಯನ್ನು ಇಷ್ಟಪಡುತ್ತಾರೆ.
ಸೀರೆ ಪ್ರಿಯೆ ವೈಷ್ಣವಿ ಕನಿಷ್ಠ 15 ದಿನಗಳಿಗೊಮ್ಮೆ ಆದರೂ ಬಣ್ಣ ಬಣ್ಣದ ಸೀರೆಯನ್ನುಟ್ಟು ಫೋಟೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣಗಳಿಗೆ ಹಂಚಿಕೊಳ್ಳುತ್ತಾರೆ.
ವೈಷ್ಣವಿ ಗೌಡ (Vaishnavi Gowda) ಅವರಿಗೆ ನೀವು ಧಾರಾವಾಹಿಯಲ್ಲಿ ರಾಮ್ ಅವರನ್ನು ಮದುವೆ ಮಾಡಿಕೊಳ್ಳಬೇಡಿ. ಯಾಕೆಂದರೆ ನಾನು ನಿಜವಾಗಿಯೂ ರಾಮ್ ಅವರನ್ನು ಲವ್ ಮಾಡ್ತಿದ್ದೇನೆ ಎಂದು ಕಾಮೆಂಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಕೆಲವು ಅಭಿಮಾನಿಗಳು ವೈಷ್ಣವಿ ಗೌಡ ಅವರೇ ನೀವು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿದ್ದಾಗ ನಿಮ್ಮ ಮುಖದಲ್ಲಿದ್ದ ಚಾರ್ಮ್ ಈಗ ಕಡಿಮೆಯಾಗಿದೆ. ಯಾಕೆ, ನಿಮ್ಮ ಅಂತರಾಳದಲ್ಲಿ ಏನಾದರೂ ನೋವು ಇಟ್ಟುಕೊಂಡು ಕೊರಗುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ವೈಷ್ಣವಿ ಅವರ ಫೋಟೋಗಳನ್ನು ನೋಡಿದ ನೆಟ್ಟಿಗನೊಬ್ಬ ನೀವು ಹಳೆಯ ಸಿನಿಮಾ ಹೀರೋಯಿನ್ಗಳಂತೆ ಡ್ರೆಸ್ ಮಾಡಿಕೊಳ್ಳುತ್ತೀರಿ. ಆದರೂ ನೋಡಲು ತುಂಬಾ ಮುದ್ದಾಗಿ ಕಾಣಿಸುತ್ತೀರಿ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ನೆಟ್ಟಿಗ ವಾವ್ ಜಾರ್ಜಿಯಸ್ ಬ್ಯೂಟಿ... ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ರೇನಿಡೇ ಎಂದು ಬರೆದುಕೊಂಡಿದ್ದಕ್ಕೆ ರಿಪ್ಲೈ ಮಾಡಿದ ನೆಟ್ಟಿಗ 'ಮುದ್ದಾದ ಬೊಂಬೆ ಹುಡುಗಿ ಸೀರೆ ಒದ್ದೆಯಾಗದಂತೆ ಮಳೆ ನಿಂತೇ ಹೋಗಿದೆ. ಈ ಬೊಂಬೆಗೆ ದೃಷ್ಟಿ ಆಗುತ್ತದೆ ಎಂದು ಕಾಂಎಂಟ್ ಮಾಡಿದ್ದಾರೆ.