ಅಮೂಲ್ಯ ಹುಟ್ಟುಹಬ್ಬಕ್ಕೆ ಜಗವೇ ನೀನು ಗೆಳತಿಯೇ ಎಂದ ನಿರಂಜನ್… ಲವ್ ಕನ್ಫರ್ಮ್ ಎಂದ ಫ್ಯಾನ್ಸ್
ಕಮಲಿ ಸೀರಿಯಲ್ ಮೂಲಕ ಗಮನ ಸೆಳೆದ ಜೋಡಿ ಕಮಲಿ ಹಾಗೂ ರಿಷಿ ಖ್ಯಾತಿಯ ಅಮೂಲ್ಯ ಓಂಕಾರ್ ಹಾಗೂ ನಿರಂಜನ್ ಪ್ರೀತಿ ಮಾಡುತ್ತಿರೋ ವಿಷ್ಯ ಮತ್ತೆ ದೃಢವಾಗಿದೆ.
ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿದ್ದ ಕಮಲಿ ಸೀರಿಯಲ್ ಯಾರಿಗೆ ತಾನೆ ನೆನಪಿಲ್ಲ ಹೇಳಿ. ಟಾಪ್ ಧಾರಾವಾಹಿಗಳಲ್ಲಿ ಒಂದಾಗಿದ್ದ ಈ ಸೀರಿಯಲ್ ಬಹು ಜನರ ಮೆಚ್ಚಿನ ಸೀರಿಯಲ್ ಗಳಲ್ಲಿ ಒಂದಾಗಿತ್ತು. ಗ್ರಾಮದಿಂದ ಬರುವ ಹುಡುಗಿ ಕಮಲಿಯ ಕಥೆ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಅಷ್ಟೇ ಅಲ್ಲದೇ ಸ್ಟೂಡೆಂಟ್ ಆಗಿದ್ದ ಕಮಲಿ ಹಾಗೂ ರಿಷಿ ಸರ್ ಜೋಡಿಯನ್ನು, ಇವರಿಬ್ಬರ ರೋಮ್ಯಾಂಟಿಕ್ ಲವ್ ಸ್ಟೋರಿಯನ್ನು (romantic love story) ಜನ ಇಷ್ಟಪಟ್ಟಿದ್ದರು. ಅಷ್ಟೇ ಅಲ್ಲ ಇವರು ನಿಜವಾಗಿಯೂ ಜೋಡಿಯಾಗಿದ್ರೆ ಎಷ್ಟು ಚೆಂದ ಅಂತಾನೂ ಹೇಳಿದ್ರು. ಅದೀಗ ನಿಜವಾದಂತಿದೆ.
ಅಭಿಮಾನಿಗಳ ಹಾರೈಕೆಯಂತೆ ಈ ಕಮಲಿ ರಿಷಿ ಸರ್ (Kamali and Rishi Sir) ಜೋಡಿ ರಿಯಲ್ ಲೈಫಲ್ಲೂ ಲವ್ವಲ್ಲಿ ಬಿದ್ದಿರುವ ವಿಷಯ ತೆಲುಗು ಕಾರ್ಯಕ್ರಮದ ವೇದಿಕೆ ಮೇಲೆ ಕಳೆದ ತಿಂಗಳಷ್ಟೇ ರಿವೀಲ್ ಆಗಿತ್ತು.ಕಾರ್ಯಕ್ರಮದಲ್ಲಿ ನಿರೂಪಕಿ ಅಮೂಲ್ಯ ಬಳಿ ನಿಮ್ಮ ಫೋನ್ ನಲ್ಲಿ ನಿರಂಜನ್ ಹೆಸರು ಏನಂತ ಇದೆ ಎಂದು ಕೇಳಿದಾಗ, ನನ್ನ ಟಾಮ್ ಅಂತ ಅಮೂಲ್ಯ ಸೇವ್ ಮಾಡಿದ್ದಾರೆ.
ನಿರಂಜನ್ (Niranjan) ಕೂಡ ತೆಲುಗು ಸೀರಿಯಲ್ ಗಳಲ್ಲಿ ನಟಿಸಿದ್ದು, ನಿರಂಜನ್ ಗೆ ಕಾಲ್ ಮಾಡೋದಕ್ಕೆ ನಿರೂಪಕಿ ತಿಳಿಸಿದಾಗ, ಅಮೂಲ್ಯ ಕಾಲ್ ಮಾಡುತ್ತಿದ್ದಂತೆ, ಪ್ರೋಗ್ರಾಮ್ ನಲ್ಲಿದ್ದೇನೆ, ಫೋನ್ ಸ್ಪೀಕರ್ ನಲ್ಲಿದೆ ಎಂದಿದ್ದಾರೆ. ಆವಾಗಲೇ ಎಲ್ಲರಿಗೂ ಡೌಟ್ ಬಂದಿದೆ. ಬಳಿಕ ಇಬ್ಬರು ಹೇಗಿದ್ದೀರಾ? ಚೆನ್ನಾಗಿದ್ದೀರಾ ಎಂದು ಮಾತನಾಡಿದ್ದಾರೆ. ಆವಾಗ ನಿರೂಪಕಿ ಶ್ರೀಮುಖಿ ಬಳಿ ನಿರಂಜನ್ ಹೇಗಿದ್ದೀರಾ ಅಂತ ಕೇಳಿದಾಗ, ಶ್ರೀಮುಖಿ ನಾನು ಚೆನ್ನಾಗಿದ್ದೆ, ಆದರೆ ಈವಾಗ ಚೆನ್ನಾಗಿಲ್ಲ, ಇಷ್ಟು ದೊಡ್ಡ ನ್ಯೂಸ್ ನೀವು ಹೇಗೆ ಹೈಡ್ ಮಾಡಿ ಇಟ್ಟಿದ್ದೀರಿ ಇಷ್ಟು ದಿನ ಎಂದು ಕೇಳಿದ್ದಾರೆ. ಅದಕ್ಕೆ ಅಮೂಲ್ಯ (Amulya Omkar) ನಾಚಿಕೆಯಿಂದ ಮುಖ ಮುಚ್ಚಿಕೊಂಡರೆ, ನಿರಂಜನ್ ಜೋರಾಗಿ ನಕ್ಕಿದ್ದಾರೆ.
ಇದಿಷ್ಟೇ ಅಲ್ಲದೇ ಇತ್ತೀಚೆಗೆ ವೈರಲ್ ಆಗಿರುವ ವಿಡೀಯೋದಲ್ಲಿ ಅಮೂಲ್ಯ ನಟಿಸುತ್ತಿದ್ದ ತೆಲುಗು ಸೀರಿಯಲ್ ಸೆಟ್ ನಲ್ಲಿ ಅಮೂಲ್ಯ ಕೈಗೆ ಪೆಟ್ಟಾಗಿ ರಕ್ತ ಬಂದಿದೆ ಎಂದು ಪ್ರಾಂಕ್ ಮಾಡಿದ್ದರು, ಆದರೆ ಅಮೂಲ್ಯಗೆ ಪೆಟ್ಟಾಗಿದೆ ಎಂದು ತಿಳಿಯುತ್ತಿದ್ದಂತೆ, ಬೇರೆ ಕಡೆ ಶೂಟಿಂಗ್ ನಲ್ಲಿದ್ದ ನಿರಂಜನ್ ಓಡೋಡಿ ಬಂದಿದ್ದಾರೆ. ಇದು ಸಹ ಇವರಿಬ್ಬರು ಲವ್ ಮಾಡ್ತಿದ್ದಾರೆ ಅನ್ನೋದನ್ನು ಸೂಚಿಸುತ್ತೆ.
ಅಷ್ಟೇ ಅಲ್ಲ ನಿರಂಜನ್ ಇನ್’ಸ್ಟಾಗ್ರಾಂನಲ್ಲಿ (Instagram) ಫಾಲೋ ಮಾಡ್ತಿರೋದು ಕೇವಲ ಅಮೂಲ್ಯಾರನ್ನು ಮಾತ್ರ. ಜೊತೆ ಇತ್ತೀಚೆಗೆ ಬಾಲಿವುಡ್ ನಟ ಸೋನು ಸೂದ್ ಜೊತೆಗೂ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡು ಜನರಿಗೆ ಶಾಕ್ ನೀಡಿದ್ದರು. ಇದೀಗ ಮತ್ತೊಮ್ಮೆ ಅಮೂಲ್ಯ ಹುಟ್ಟುಹಬ್ಬದ ದಿನ ಇವರಿಬ್ಬರು ಲವ್ ಮಾಡ್ತಿರೋದು ಕನ್’ಫರ್ಮ್ ಆಗಿದೆ.
ನಟ ನಿರಂಜನ್ ತಮ್ಮ ಇನ್’ಸ್ಟಾಗ್ರಾಂ ಸ್ಟೋರಿಯಲ್ಲಿ ಅಮೂಲ್ಯ ಅವರ ಫೋಟೊ ಒಂದನ್ನು ಹಾಕಿ, ಹಿನ್ನೆಲೆಯಲ್ಲಿ ಜಗವೇ ನೀನು ಗೆಳೆತಿಯೇ ಹಾಡನ್ನು ಹಾಕಿದ್ದಾರೆ, ಜೊತೆಗೆ ವಿಶ್ ಯೂ ಬ್ಯೂಟಿಫುಲ್ ಇಯರ್ ಅಹೆಡ್, ಹ್ಯಾಪಿ ಬರ್ತಡೇ ಮುದ್ದು (Happy birthday muddu) ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಇವರಿಬ್ಬರು ಲವ್ ಮಾಡ್ತಿರೋದು ಸತ್ಯ ಎಂದಿದ್ದಾರೆ. ಇವರಿಬ್ಬರೂ ನ್ಯೂ ಇಯರ್, ಬರ್ತ್ ಡೇ ಎಲ್ಲವನ್ನೂ ಜೊತೆಯಾಗಿಯೇ ಸೆಲೆಬ್ರೇಟ್ ಮಾಡಿದ್ದಾರೆ.