ಮಂತ್ರಾಲಯದ ರಾಯರ ಪವಾಡದಿಂದಲೇ ಮದುವೆಯಾಯ್ತು: Suhana Syed ಎಂದೂ ಹೇಳಿರದ ರಿಯಲ್ ಕಥೆ
Suhana Syed Marriage: ಸರಿಗಮಪ ಶೋ ಖ್ಯಾತಿಯ ಸುಹಾನಾ ಸೈಯದ್ ಅವರು ನಿತಿನ್ ಶಿವಾಂಶ್ ಎನ್ನುವವರನ್ನು ಮದುವೆಯಾಗಿದ್ದಾರೆ. ಇವರಿಬ್ಬರ ಧರ್ಮ ಬೇರೆ ಬೇರೆ. ಹೀಗಾಗಿ ಕುಟುಂಬಸ್ಥರನ್ನು ಒಪ್ಪಿಸಿ ಮದುವೆಯಾಗೋದು ಸುಲಭ ಆಗಿರಲಿಲ್ಲ. ಆದರೆ ಇದಕ್ಕೆ ಕಾರಣ ರಾಯರಂತೆ.

ಮಂತ್ರಾಲಯಕ್ಕೆ ಭೇಟಿ ಕೊಟ್ಟರು
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳಿಂದಲೇ ನನಗೆ ಮದುವೆ ಆಗಿದೆ ಎಂದು ಸುಹಾನಾ ಸೈಯದ್ ಅವರು ಹೇಳಿಕೊಂಡಿದ್ದಾರೆ. ಪತಿಯ ಜೊತೆಗೆ ಮಂತ್ರಾಲಯಕ್ಕೆ ಭೇಟಿ ಕೊಟ್ಟಿರುವ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಪ್ರಾರ್ಥಿಸುತ್ತಿದ್ದೆ
ಪ್ರತಿ ಬಾರಿ ನಾನು ಮಂತ್ರಾಲಯಕ್ಕೆ ಬಂದಾಗ, ನಮ್ಮಿಬ್ಬರ ಕುಟುಂಬಗಳ ಆಶೀರ್ವಾದದೊಂದಿಗೆ ನಮ್ಮ ಮದುವೆ ನಡೆಯಬೇಕು ಎಂದು ಪ್ರಾರ್ಥಿಸುತ್ತಿದ್ದೆ. ಈ ಒಂದು ಪವಾಡ ಆಗಲಿ ಎಂದು ಬೇಡುತ್ತಿದ್ದೆ ಎಂದು ಸುಹಾನಾ ಸೈಯದ್ ಅವರು ಬರೆದುಕೊಂಡಿದ್ದಾರೆ.
ಒಂದು ದಿನ ಮದುವೆಯಾಗತ್ತೆ ಎಂದುಕೊಂಡಿದ್ದೆ
ಒಂದು ದಿನ ನಾನು ನಿತಿನ್ ಶಿವಾಂಶ್ ಜೊತೆಗೆ ಇಲ್ಲಿಗೆ ಬರುತ್ತೇನೆ ಎಂಬ ಭರವಸೆಯೊಂದಿಗೆ ಕಣ್ಣೀರು ಹಾಕಿಕೊಂಡು ಹೊರಡುತ್ತಿದ್ದೆ. ಮದುವೆಯಾದೆವು, ಆಶೀರ್ವಾದ ಸಿಕ್ಕಿತು, ಜೊತೆಯಾಗಿದ್ದೇವೆ. ಇಂದು... ನಾವಿಲ್ಲಿ ಇದ್ದೇವೆ. ಈ ಪ್ರಾರ್ಥನೆಗೆ ಉತ್ತರ ದೊರೆತಿದ್ದಕ್ಕೆ ಪದಗಳಲ್ಲಿ ಹೇಳಲಾಗದಷ್ಟು ಕೃತಜ್ಞಳಾಗಿದ್ದೇನೆ ಎಂದು ಸುಹಾನಾ ಹೇಳಿದ್ದಾರೆ.
ಸಾಮಾಜಿಕ ಗಡಿಗಳನ್ನು ಮೀರಿ ನಿಂತಿದೆ
ಸುಹಾನಾ ಅವರ ಪೋಸ್ಟ್ ನೋಡಿ ಅನೇಕರು ಕಾಮೆಂಟ್ ಮಾಡಿದ್ದಾರೆ. “ನಿಮ್ಮ ಜೋಡಿಯು ಎಲ್ಲ ಸಾಮಾಜಿಕ ಗಡಿಗಳನ್ನು ಮೀರಿ ನಿಂತಿದೆ. ಪ್ರಬುದ್ಧ ವಿಚಾರಗಳಿಗೆ ಒಂದು ಉತ್ತಮ ಉದಾಹರಣೆಯಾಗಿದೆ. ನೀವಿಬ್ಬರೂ ಪರಸ್ಪರರ ಧರ್ಮ ಮತ್ತು ಸಂಪ್ರದಾಯಗಳ ಬಗ್ಗೆ ಇಟ್ಟುಕೊಂಡಿರುವ ಗೌರವ ನನಗೆ ನಿಜವಾಗಿಯೂ ಇಷ್ಟವಾಯಿತು. ಇದು ಕೇವಲ ಪ್ರದರ್ಶನಕ್ಕಾಗಿ ಮಾಡುತ್ತಿರುವುದಲ್ಲ, ಅದು ಒಂದು ಸತ್ಯವಾಗಿದೆ” ಎಂದು ಓರ್ವರು ಕಾಮೆಂಟ್ ಮಾಡಿದ್ದಾರೆ.
ವೀಕ್ಷಕರ ಅಭಿಪ್ರಾಯ ಏನು?
- ಮನುಷ್ಯ ಧರ್ಮ ಅನ್ನೋ ಪದಕ್ಕೆ ಒಂದು ಒಳ್ಳೆಯ ದಿನಗಳು ಬಂದಿವೆ ಅನಿಸುತ್ತದೆ, ಮಾನವ ಧರ್ಮ ಗೆದ್ದಂತಿದೆ, ಒಳ್ಳೆಯದಾಗಲಿ
- ಜಾತಿ ಧರ್ಮ ಪ್ರೀತಿಗೆ ಶರಣಾದಾಗ
- ತನ್ನ ಧರ್ಮದ ವಿದಿ ವಿಧಾನಗಳನ್ನು ಪಾಲಿಸುತ್ತಾ ಇತರ ಧರ್ಮಗಳನ್ನು ಗೌರವಿಸುವ ಮೂಲಕ ಮತ ಸೌಹಾರ್ದತೆ ಸಾಧ್ಯ
- ಮನುಷ್ಯತ್ವದ ಧರ್ಮದ ಮುಂದೆ- ಯಾವ ಧರ್ಮವು ಇಲ್ಲಾ.
- ಧರ್ಮಗಳು ಹೀಗಿದ್ದರೂ ಚೆಂದ, ಯಾವುದೇ ಒತ್ತಡ, ನಿಯಂತ್ರಣ, ಬಲವಂತ, ಕಡಿವಾಣ,ಕಟ್ಟುಪಾಡಿಲ್ಲದ ಸ್ವಸ್ಥ ಬದುಕು ಬಾಳಬಹುದು
- ಹಿಂದೂ ಮುಸ್ಲಿಂ ಕ್ರಿಸ್ತೀಯನ್ ಎಲ್ಲಾ ಧರ್ಮಗಳ ಸಂದೇಶ ಒಂದೆ ಹೆಸರು ಬೇರೆಬೇರೆ ಅಷ್ಟೆ.
- ರಾಯರಿದ್ದಾರೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ರಾಯರ ಕೃಪಾ ಕಟಾಕ್ಷ ಸಂಪೂರ್ಣ ಲಭಿಸಲಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
