ಕೆಂಪು ಸೀರೆಯುಟ್ಟು ಹೇ ಲವರ್ಸ್ ಎಂದು ವ್ಯಾಲಂಟೈನ್ಸ್ ಡೇ ವಿಶ್ ಮಾಡಿದ ಸಾರಾ ಅಣ್ಣಯ್ಯ!
ಅಮೃತಧಾರೆ ಸೀರಿಯಲ್ ಬೆಡಗಿ ಸಾರಾ ಅಣ್ಣಯ್ಯ ಕೆಂಪು ಸೀರೆಯುಟ್ಟು ವಿವಿಧ ಪೋಸ್ ನೀಡಿ ಫೋಟೋ ತೆಗೆಸಿಕೊಂಡು ಪ್ರೇಮಿಗಳ ದಿನದಂದು ಫೋಟೋ ಪೋಸ್ಟ್ ಮಾಡಿದ್ದಾರೆ.
ಕನ್ನಡತಿ, ನಮ್ಮ ಲಚ್ಚಿ ಬಳಿಕ ಇದೀಗ ಅಮೃತಧಾರೆ ಸೀರಿಯಲ್ ನಲ್ಲಿ ಗೌತಮ್ ತಂಗಿ ಮಹಿಮಾ ಆಗಿ ನಟಿಸುತ್ತಿರುವ ನಟಿ ಸಾರಾ ಅಣ್ಣಯ್ಯ (Sara Anaiah) ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್.
ಈ ಬೆಡಗಿ ಪ್ರತಿದಿನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (social media) ಒಂದಲ್ಲ ಒಂದು ವಿಡೀಯೋ, ಫೋಟೋ, ರೀಲ್ಸ್ ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಆ ಮೂಲಕ ಸಾರಾ ಅಭಿಮಾನಿಗಳು ಜೊತೆ ಕನೆಕ್ಟ್ ಆಗಿದ್ದಾರೆ.
ಪ್ರೇಮಿಗಳ ದಿನವಾದ (Valentines Day) ಇಂದು ಸಾರಾ ಸೀರಿಯಲ್ ಸೆಟ್ ನಲ್ಲಿ ಕೆಂಪು ಸೀರೆಯುಟ್ಟು ವಿವಿಧ ಪೋಸ್ ಕೊಟ್ಟು ಫೋಟೋ ಶೇರ್ ಮಾಡಿದ್ದು, ಹೇ ಲವರ್ಸ್ ಎಂದು ಕ್ಯಾಪ್ಶನ್ ಬೇರೆ ಹಾಕಿದ್ದಾರೆ.
ಸಾರಾ ಫೋಟೋಗೆ ಅವರ ಗೆಳತಿ ಭಾಗ್ಯಲಕ್ಷ್ಮೀ ಖ್ಯಾತಿಯ ಕಾವ್ಯಾ ಗೌಡ (Kavya Gowda) ಯೆಸ್ ಲವರ್ ಎಂದು ಎಂದು ಕಾಮೆಂಟ್ ಮಾಡಿದ್ದು, ಅದಕ್ಕೆ ಸಾರಾ ನನ್ನ ಬಳಿ ಬಾ ಬೇಬಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಕೆಂಪು ಸೀರೆ ಜೊತೆಗೆ ಅದಕ್ಕೆ ಮ್ಯಾಚ್ ಆಗುವ ಗೋಲ್ಡನ್ ಈಯರಿಂಗ್ಸ್, ನೆಕ್ ಪೀಸ್ ಮತ್ತು ಬಳೆ ಧರಿಸಿರುವ ಸಾರಾ ಅಣ್ಣಯ್ಯ ತುಂಬಾನೆ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಇವರ ಫೋಟೋಗೆ ಜನರು ಅಪಾರ ಮೆಚ್ಚುಗೆ ಸೂಚಿಸಿದ್ದಾರೆ.
ಅಭಿಮಾನಿಗಳು ತುಂಬಾ ಅದ್ಭುತವಾಗಿ ಕಾಣಿಸುತ್ತಿದ್ದೀರಿ, ಸೌಂದರ್ಯ ದೇವತೆಯಂತೆ ಕಾಣಿಸುತ್ತಿದ್ದೀರಿ, ನಿಮ್ಮ ಅಂದಕ್ಕೆ ಸರಿಸಾಟಿ ಯಾರೂ ಇಲ್ಲ ಎಂದೆಲ್ಲಾ ಕಾಮೆಂಟ್ ಮಾಡಿ, ತಮ್ಮ ನೆಚ್ಚಿನ ನಟಿಯನ್ನು ಹೊಗಳಿದ್ದಾರೆ.
ಕನ್ನಡತಿ ಸೀರಿಯಲ್ (Serial) ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಸಾರಾ ಅಣ್ಣಯ್ಯ, ಮೊದಲ ಸೀರಿಯಲ್ ನಲ್ಲೇ ತಮ್ಮ ಅದ್ಭುತ ಸೈಕೋ ಪ್ರೇಮಿ ಅಭಿನಯದಿಂದ ಜನಮನ ಗೆದ್ದಿದ್ದರು. ಸಿನಿಮಾ, ವೆಬ್ ಸೀರೀಸ್ ಗಳಲ್ಲೂ ನಟಿಸಿರುವ ಸಾರಾ ಸದ್ಯ ಅಮೃತಧಾರೆಯಲ್ಲಿ ನಟಿಸುತ್ತಿದ್ದಾರೆ.