ಸೀರಿಯಲ್ ನಿಲ್ಸಕ್ಕೆ ಹೇಳಿ ಅಂದೋರಿಗೆ ಏನ್ ಹೇಳಿದ್ರು ಗೊತ್ತಾ ಪುಟ್ಟಕ್ಕನ ಮಕ್ಕಳು ನಟಿ
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಸದ್ಯ ಕಂಠಿ ಬೇರೆ ಹುಡುಗಿ ಜೊತೆ ಮದ್ವೆ ಆಗಲು ಒಪ್ಪಿಕೊಂಡಿದ್ದು, ಸ್ನೇಹ ಕೂಡ ಬೇರೆ ಮದ್ವೆ ಆಗ್ತಿದ್ದಾರೆ. ಇದನ್ನೆ ನೋಡಿ ನೋಡಿ ಸಾಕಾಗಿದ್ದ ಪ್ರೇಕ್ಷಕರು ಸೀರಿಯಲ್ ನಿಲ್ಸಿ ಎಂದು ಹೇಳಿದ್ದಾರೆ. ಅದಕ್ಕೆ ನಟಿ ಸಂಜನಾ ಬುರ್ಲಿ ಏನು ಹೇಳಿದ್ರು ಗೊತ್ತಾ?

ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ (Puttakkana Makkalu) ಕಳೆದ ಕೆಲವು ವಾರಗಳಿಂದ ಕಥೆಯೇ ಬದಲಾಗಿದ್ದು, ಸ್ನೇಹಾ ಮತ್ತು ಕಂಠಿ ದೂರ ದೂರ ಆಗಿದ್ದು, ಇಬ್ಬರು ಬೇರೆಯವರನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ.
ಇನ್ನೇನು ಕಂಠಿ ಮತ್ತು ಸ್ನೇಹಾ ಮದ್ವೆ ಆಗ್ತಾರೆ ಎಂದು ಪ್ರೇಕ್ಷಕರು ಅಂದುಕೊಂಡಿರುವಾಗಲೇ, ಅಮ್ಮನ ಆಸೆಯಂತೆ ಸ್ನೇಹಾ ಕಂಠಿಯನ್ನು ದೂರ ಮಾಡಿ, ಇನ್ನೊಬ್ಬರನ್ನು ಮದುವೆಯಾಗಲು ಒಪ್ಪಿರೋದು ಪ್ರೇಕ್ಷಕರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ.
ಕಳೆದ ಹಲವು ದಿನಗಳಿಂದ ಇದನ್ನೆ ನೋಡಿ ನೋಡಿ ಬೇಸತ್ತ ಪ್ರೇಕ್ಷಕರು, ಬೇಗ ಕಂಠಿ ಮತ್ತು ಸ್ನೇಹಾನ ಒಂದು ಮಾಡಿ, ಅವರಿಬ್ಬರನ್ನು ಬೇರೆ ಮಾಡಿ ಮೋಸ ಮಾಡಬೇಡಿ ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ (social media) ರೀಲ್ಸ್ ಒಂದು ಶೇರ್ ಮಾಡಿದ್ದು, ಅದಕ್ಕೆ ಅಭಿಮಾನಿಯೊಬ್ಬರು ಸೀರಿಯಲ್ ನಿಲ್ಸುವಂತೆ ನಿಮ್ಮ ನಿರ್ದೇಶಕರಿಗೆ ಹೇಳಿ, ಹೀಗೆ ಹೋದ್ರೆ ಇನ್ನು ಮುಂದೆ ಸೀರಿಯಲ್ ನೋಡೋರು ಯಾರು ಇರಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿರುವ ಸಂಜನಾ ಬುರ್ಲಿ (Sanjana Burli) ಸ್ವಲ್ಪ ತಾಳ್ಮೆ ಇಟ್ಕೊಳಿ ಎಲ್ಲಾನು ಸರಿಯಾಗುತ್ತೆ ಎಂದು ತುಂಬಾನೆ ತಾಳ್ಮೆಯಿಂದಲೇ ಉತ್ತರಿಸಿದ್ದಾರೆ. ಇದಕ್ಕೆ ಮತ್ತಷ್ಟು ಅಭಿಮಾನಿಗಳು ಸಹ ಸಾತ್ ನೀಡಿದ್ದಾರೆ.
ಹಲವಾರು ಜನರು ಮೇಡಂ ಪ್ಲೀಸ್ ಸ್ನೇಹಾನ ಒಪ್ಪಿಕೊಂಡು ಬಿಡಿ, ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ ಎಂದರೆ, ಇನ್ನೂ ಕೆಲವರು ನಮ್ಮ ಮಿಸ್ಸು ಮತ್ತು ಕಂಠಿ ಎಲ್ಲಿ ದೂರ ಆಗಿಬಿಡ್ತಾರೆ ಅಂತಾ ನಮಗೆ ಟೆನ್ಶನ್ ಆಗ್ತಿದೆ, ದೂರ ಆಗ್ಬೇಡಿ ಎಂದು ಬರೆದುಕೊಂಡಿದ್ದಾರೆ.
ಪುಟ್ಟಕ್ಕನ ಮಕ್ಕಳು ಸೀರಿಯಲ್ ನ ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ಅದರಲ್ಲಿ ಸ್ನೇಹಾ ಜಾತಕ ನೋಡಿರುವ ಜ್ಯೋತಿಷಿಗಳು, ಸ್ನೇಹಾಳದ್ದು, ಪ್ರೀತಿಸಿ ಮದುವೆಯಾಗುವಂತಹ ಜಾತಕ. ಆಕೆ ಇಷ್ಟಪಟ್ಟವರನ್ನೇ ಅವಳು ಮದುವೆ ಆಗುತ್ತಾಳೆ ಎಂದಿದ್ದಾರೆ. ಹಾಗಾಗಿ ಜನರಿಗೂ ಈಗ ಇಬ್ಬರೂ ಜೊತೆಯಾಗಲಿದ್ದಾರೆ ಅನ್ನೋ ನಂಬಿಕೆ ಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.