- Home
- Entertainment
- TV Talk
- ವರಮಹಾಲಕ್ಷ್ಮೀ ಹಬ್ಬಕ್ಕೆ ಬಂದ ನಟಿ ತಾರಾ, ಮಹಾನಟಿ ಗಗನಾಗೆ ಬಲು ದುಬಾರಿ ಗಿಫ್ಟ್ ಕೊಟ್ಟ ಟಿ ಎಸ್ ಶರವಣ!
ವರಮಹಾಲಕ್ಷ್ಮೀ ಹಬ್ಬಕ್ಕೆ ಬಂದ ನಟಿ ತಾರಾ, ಮಹಾನಟಿ ಗಗನಾಗೆ ಬಲು ದುಬಾರಿ ಗಿಫ್ಟ್ ಕೊಟ್ಟ ಟಿ ಎಸ್ ಶರವಣ!
ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಖ್ಯಾತಿಯ ಟಿ ಎಸ್ ಶರವಣ ಮನೆಯಲ್ಲಿ ಅದ್ದೂರಿಯಾಗಿ ವರಮಹಲಕ್ಷ್ಮೀ ಹಬ್ಬವನ್ನು ಆಚರಿಸಲಾಗಿದೆ. ಆ ವೇಳೆ ನಟಿ ಐಶ್ವರ್ಯಾ ಶಿಂಧೋಗಿ, ನಟಿ ತಾರಾ, ಮಹಾನಟಿ ಶೋ ಖ್ಯಾತಿಯ ಗಗನಾ ಕೂಡ ಭಾಗವಹಿಸಿದ್ದರು.

ಇಡೀ ನಾಡು ವರಮಹಾಲಕ್ಷ್ಮೀ ಹಬ್ಬವನ್ನು ಬಹಳ ಗ್ರ್ಯಾಂಡ್ ಆಗಿ ಆಚರಿಸಿದೆ. ಹೆಂಗಳೆಯವರು ಸ್ನೇಹಿತರ, ಪರಿಚಯಸ್ಥರ ಮನೆಗೆ ಭೇಟಿ ಕೊಟ್ಟಿದ್ದಾರೆ.
ಇನ್ನು ಟಿ ಎಸ್ ಶರವಣ ಮನೆಯ ವರಮಹಾಲಕ್ಷ್ಮೀಗೆ ಬಂಗಾರ, ಬೆಳ್ಳಿ ಆಭರಣ, ಸಾಮಗ್ರಿಯಲ್ಲಿಯೇ ಅಲಂಕಾರ ಮಾಡಲಾಗಿತ್ತು.
ಅಂದಹಾಗೆ ವರಮಹಾಲಕ್ಷ್ಮೀ ನೋಡಲು ಎರಡು ಕಣ್ಣು ಸಾಲದು, ಅಷ್ಟು ವೈಭವದಿಂದ ರೆಡಿ ಮಾಡಲಾಗಿದೆ.
ಈ ಬಾರಿ ಟಿ ಎಸ್ ಶರವಣ ಮನೆಯ ವರಮಹಾಲಕ್ಷ್ಮೀ ಹಬ್ಬಕ್ಕೆ ಮಹಾನಟಿ ಶೋ ಖ್ಯಾತಿಯ ಗಗನಾ, ನಟಿ ತಾರಾ, ಐಶ್ವರ್ಯಾ ಶಿಂಧೋಗಿ ಕೂಡ ಆಗಮಿಸಿದ್ದರು.
ಸೆಲೆಬ್ರಿಟಿಗಳು, ಸಂಬಂಧಿಕರು ಎಲ್ಲರೂ ಸೇರಿ ಲಕ್ಷ್ಮೀ ದೇವಿಗೆ ಪೂಜೆ ಮಾಡಿದ್ದಾರೆ.
ನಾನು ಟಿವಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡವಳು. ನನಗೆ ಶರವಣ ಸರ್ ಮಹಾಲಕ್ಷ್ಮೀ ಹಬ್ಬಕ್ಕೆ ಆಹ್ವಾನ ಕೊಟ್ಟು ಕರೆದಿದ್ದು ಖುಷಿ ಕೊಟ್ಟಿದೆ ಎಂದು ಗಗನಾ ಹೇಳಿದ್ದಾರೆ.
ಇನ್ನು ನಟಿ ತಾರಾ ಸೇರಿದಂತೆ ಸೆಲೆಬ್ರಿಟಿಗಳಿಗೆ ಬೆಳ್ಳಿಯ ಹೂಬುಟ್ಟಿ ನೀಡಿದ್ದಾರೆ. ಇಂದಿನ ಬೆಳ್ಳಿ,ಬಂಗಾರ ದರ ಎಷ್ಟಿದೆ? ಈ ಬುಟ್ಟಿಗೆ ಎಷ್ಟಾಗಿರಬಹುದು ಎಂದು ಕಾದು ನೋಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

