- Home
- Entertainment
- TV Talk
- ಕನ್ನಡ ಕಿರುತೆರೆ ನಟಿ ಮನೆಯ ವರಮಹಾಲಕ್ಷ್ಮೀ ಹಬ್ಬದಲ್ಲಿ Darshan Wife Vijayalakshmi ಭಾಗಿ: ಫೋಟೋಗಳಿವು!
ಕನ್ನಡ ಕಿರುತೆರೆ ನಟಿ ಮನೆಯ ವರಮಹಾಲಕ್ಷ್ಮೀ ಹಬ್ಬದಲ್ಲಿ Darshan Wife Vijayalakshmi ಭಾಗಿ: ಫೋಟೋಗಳಿವು!
ನಟ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮೀ ಅವರು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಿದ್ದಾರೆ. ಗಿಳಿ ಹಸಿರು, ನೀಲಿ ಕಾಂಬಿನೇಶನ್ ಸೀರೆ ಉಟ್ಟುಕೊಂಡು ಅವರು ಕಂಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಕಿರುತೆರೆ ನಟಿಯ ಮನೆಯ ವರಮಹಾಲಕ್ಷ್ಮೀ ಹಬ್ಬಕ್ಕೆ ಹೋಗಿದ್ದರು.

ನಟ ದರ್ಶನ್ ಪತ್ನಿ ಹಬ್ಬಗಳನ್ನು ಗ್ರ್ಯಾಂಡ್ ಆಗಿ ಆಚರಿಸುತ್ತಾರೆ. ಅಷ್ಟೇ ಅಲ್ಲದೆ ಸಿಕ್ಕಾಪಟ್ಟೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುತ್ತಾರೆ.
ಅಸ್ಸಾಂನ ಕಾಮಾಕ್ಯ ದೇವಸ್ಥಾನ, ಕೇರಳದ ಕಣ್ಣೂರಿನ ಮಾಡಾಯಿಕಾವು ಸೇರಿದಂತೆ ಸಾಕಷ್ಟು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಇನ್ನು ದರ್ಶನ್ ಕೂಡ ದೇವರ ಭಕ್ತ. ಪ್ರತಿ ಬಾರಿ ಆಷಾಢ ಮಾಸಕ್ಕೆ ಅವರು ಮೈಸೂರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಾರೆ.
ಅಂದಹಾಗೆ ವಿಜಯಲಕ್ಷ್ಮೀ ದರ್ಶನ್ ಅವರು ತಮ್ಮ ಮನೆಯಲ್ಲಿ ಹಬ್ಬವನ್ನು ಆಚರಿಸುವುದೊಂದೇ ಅಲ್ಲದೆ, ಕನ್ನಡ ಕಿರುತೆರೆ ನಟಿಯ ಮನೆಗೆ ಹಾಜರಿ ಹಾಕಿದ್ದರು.
'ರಾಧಾ ರಮಣ', 'ಗಾಂಧಾರಿ', 'ಮುರಳಿ ಮಾಧವ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮದುವೆಯಾದ್ಮೇಲೆ ಅವರು ಚಿತ್ರರಂಗದಿಂದ ದೂರ ಇದ್ದಾರೆ. ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ಮಾಡಿದ ದಿನವೇ ಅವರು ಮಗಳಿಗೆ ಜನ್ಮ ನೀಡಿದ್ದರು. ಹೀಗಾಗಿ ಮಗಳಿಯಾ ಸಿಯಾ ಎಂದು ಹೆಸರಿಟ್ಟಿದ್ದಾರೆ.
ಅಂದಹಾಗೆ ಕಾವ್ಯಾ ಗೌಡ ಅವರು ತನ್ನ ಅಕ್ಕ ಭವ್ಯಾ ಗೌಡ ಅವರ ಮನೆಯ ವರಮಹಾಲಕ್ಷ್ಮೀಗೆ ಹೂವಿನ ಅಲಂಕಾರ ಮಾಡಿದ್ದರು. ಮೊದಲಿನಿಂದಲೂ ಕಾವ್ಯಾ ಗೌಡಗೆ ಅಲಂಕಾರ ಮಾಡೋದು ಅಂದ್ರೆ ತುಂಬ ಇಷ್ಟವಂತೆ.