ಊರಿಗೆ ತೆರಳಿ ಮಕ್ಕಳಂತೆ ಆಟವಾಡಿ, ಬಾಲ್ಯದ ನೆನಪನ್ನು ಮರುಸೃಷ್ಟಿಸಿದ ರೂಪೇಶ್ ಶೆಟ್ಟಿ
ಬಿಗ್ ಬಾಸ್ ವಿನ್ ಆದ ಬಳಿಕ ಕನ್ನಡ ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದೇ ಇದ್ದರೂ, ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ನಟ ರೂಪೇಶ್ ಶೆಟ್ಟಿ, ಬಾಲ್ಯದ ನೆನಪುಗಳನ್ನು ಹಸಿರು ಮಾಡುವಂತಹ ವಿಡಿಯೋ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ OTT (Bigg Boss OTT) ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 9 ವಿನ್ನರ್ ಆಗಿರುವ ರೂಪೇಶ್ ಶೆಟ್ಟಿ ಕನ್ನಡ ಕಿರುತೆರೆಯ ಕೆಲವು ಕಾರ್ಯಕ್ರಮಗಳಲ್ಲಿ ಆಗೋಮ್ಮೆ ಈಗೊಮ್ಮೆ ಕಾಣಿಸಿಕೊಂಡಿದ್ದರೂ ಸಹ ಹೆಚ್ಚಾಗಿ ಕಾಣಿಸಿಕೊಳ್ಳಲೇ ಇಲ್ಲ.
ಮಂಗಳೂರಿನಲ್ಲಿ ಆರ್ ಜೆ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರೂಪೇಶ್ ಶೆಟ್ಟಿ ಕನ್ನಡ, ಕೊಂಕಣಿ, ಹೆಚ್ಚಾಗಿ ತುಳು ಚಿತ್ರರಂಗದಲ್ಲಿ ತಮ್ಮ ಗುರುತಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ಇವರು ಜನಪ್ರಿಯ ನಾಯಕರಾಗಿದ್ದರೂ ಸಹ ರಾಜ್ಯದ್ಯಂತ ಇವರಿಗೆ ಹೆಸರು ತಂದು ಕೊಟ್ಟದ್ದು ಬಿಗ್ ಬಾಸ್ ಕನ್ನಡ (Bigg Boss Kannada) ಅಂದ್ರೆ ತಪ್ಪಾಗಲಾರದು.
ರೂಪೇಶ್ (Roopesh Shetty) ತಾವೇ ಸ್ವತಃ ನಿರ್ದೇಶನ ಮಾಡಿರುವ ತುಳು ಚಿತ್ರ ಸರ್ಕಸ್ ನಲ್ಲಿ ನಾಯಕರಾಗಿ ನಟಿಸಿದ್ದು, ಸದ್ಯ ಅವರು ಚಿತ್ರವನ್ನು ಪ್ರಪಂಚದಾದ್ಯಂತ ಗ್ರ್ಗ್ಯಾಂಡ್ ಆಗಿ ರಿಲೀಸ್ ಮಾಡುವ ಬ್ಯುಸಿಯಲ್ಲಿದ್ದಾರೆ. ಸದ್ಯ ರೂಪೇಶ್ ಕತಾರ್ ನಲ್ಲಿ ಪ್ರೀಮಿಯರ್ ಶೋ ನೀಡಿದ್ದು, ಅದು ಸಕ್ಸಸ್ ಆಗಿದೆ.
ಸರ್ಕಸ್ ಚಿತ್ರದಲ್ಲಿ ತುಳುನಾಡಿನ ಖ್ಯಾತ ಹಾಸ್ಯ ನಟರು ನಟಿಸುತ್ತಿದ್ದು, ಚಿತ್ರದ ಟೈಟಲ್ ಹಾಡನ್ನು ಚಂದನ್ ಶೆಟ್ಟಿ ಹಾಡಿದ್ದಾರೆ. ಈ ಹಾಡು, ಚಿತ್ರದ ಟ್ರೈಲರ್, ಪ್ರೀಮಿಯರ್ ಶೋ ಎಲ್ಲೆಡೆ ಯಶಸ್ಸು ಕಂಡಿದ್ದು, ರೂಪೇಶ್ ಶೆಟ್ಟಿ ಇದೇ ಸಂತಸದಲ್ಲಿದ್ದಾರೆ.
ಕರಿಯರ್ ವಿಷ್ಯಕ್ಕೆ ಬಂದ್ರೆ 2015ರಲ್ಲೇ ದಿಬ್ಬಣ ತುಳು ಚಿತ್ರದ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟ ರೂಪೇಶ್ ಬಳಿಕ ಐಸ್ ಕ್ರೀಂ, ಪೊರ್ಲು, ಅಮ್ಮೇರ್ ಪೊಲೀಸ,ಗಿರ್ಗಿಟ್, ಗಮ್ಜಾಲ್, ವಿಐಪಿ ಲಾಸ್ಟ್ ಬೆಂಚ್ ಎಂಬ ತುಳು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಜೊತೆಗೆ ಕನ್ನಡ ಚಿತ್ರಗಳಾದ ಡೇಂಜರ್ ಝೋನ್, ಸ್ಮೈಲ್ ಪ್ಲೀಸ್, ನಿಶಭ್ಧ 2, ಅನುಷ್ಕಾ, ಗೋವಿಂದ ಗೋವಿಂದ ಎಂಬ ಕನ್ನಡ ಚಿತ್ರದಲ್ಲೂ, ಅಶೇಮ್ ಜಾಲೇಮ್ ಕಶೇಮ್ ಎಂಬ ಕೊಂಕಣಿ ಚಿತ್ರದಲ್ಲೂ ನಟಿಸಿದ್ದಾರೆ. ಸದ್ಯ ಸರ್ಕಸ್ ಬಿಡುಗಡೆಗೆ ಕಾಯುತ್ತಿದ್ದಾರೆ.