ಶಿವರಾತ್ರಿಯಂದು ತ್ರಿವೇಣಿ ಸಂಗಮದಲ್ಲಿ ಉಧೋ ಉಧೋ ರೇಣುಕಾ ಯಲ್ಲಮ್ಮ ಧಾರಾವಾಹಿ ರೇಣುಕೆ
ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುವ ಉಧೋ ಉಧೋ ರೇಣುಕಾ ಯಲ್ಲಮ್ಮ ಧಾರಾವಾಹಿಯಲ್ಲಿ ರೇಣುಕೆ ಪಾತ್ರದಲ್ಲಿ ನಟಿಸುತ್ತಿರುವ ಮಹತಿ ವೈಷ್ಣವಿ ಕುಟುಂಬದ ಜೊತೆ ಕುಂಭಮೇಳಕ್ಕೆ ತೆರಳಿದ್ದಾರೆ.

ಸ್ಟಾರ್ ಸುವರ್ಣದಾಲ್ಲಿ ಪ್ರಸಾರವಾಗುತ್ತಿರುವ ಉಧೋ ಉಧೋ ರೇಣುಕಾ ಯಲ್ಲಮ್ಮ ಧಾರಾವಾಹಿಯಲ್ಲಿ ರೇಣುಕೆಯ ಪಾತ್ರದ ಮೂಲಕ ವೀಕ್ಷಕರ ಮನ ಗೆಲ್ಲುತ್ತಿರುವ ನಟಿ ಮಹತಿ ವೈಷ್ಣವಿ. ಮಹತಿ ರೇಣುಕೆಯ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಿದ್ದಾರೆ.
ಇದೀಗ ರೇಣುಕ ಯಲ್ಲಮ್ಮ ಧಾರಾವಾಹಿ ಶೂಟಿಂಗ್ ಗೆ ಬ್ರೇಕ್ ನೀಡಿರುವ ನಟಿ ಮಹತಿ ತನ್ನ ಅಮ್ಮ, ಅಪ್ಪ ಹಾಗೂ ಅಣ್ಣನ ಜೊತೆ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಪುನೀತರಾಗಿದ್ದಾರೆ.
ಮಹಾ ಕುಂಭ ದಲ್ಲಿ ದಿವ್ಯ ಸ್ನಾನ ಮಾಡಿದ ಅದ್ಭುತ ಕ್ಷಣ..ಸಾರ್ಥಕತೆಯ ಅನುಭವ....ಎಂದು ಬರೆದುಕೊಂಡಿರುವ ಮಹತಿ, ತ್ರಿವೇಣಿ ಸಂಗಮದ ದಿವ್ಯ ಸ್ನಾನ ಫೋಟೊ, ಅಣ್ಣ, ಅಮ್ಮ ಹಾಗೂ ಅಪ್ಪನ ಜೊತೆಗೆ ಬೋಟ್ ರೈಡಿಂಗ್ ಮಾಡುತ್ತಿರುವ ಫೋಟೊಗಳನ್ನು ಸೋಶಿಯಲ್ ಮಿಡೀಯಾದಲ್ಲಿ ಹಂಚಿಕೊಂಡಿದ್ದಾರೆ.
ಅಂದ ಹಾಗೇ ರೇಣುಕಾ ಯಲ್ಲಮ್ಮ ಧಾರಾವಾಹಿಯಲ್ಲಿ ಸದ್ಯ ರೇಣುಕೆಯ ಮದುವೆಯ ವಿಚಾರ ಪ್ರಸ್ತಾಪ ಮಾಡಲಾಗುತ್ತಿದೆ. ರೇಣುಕೆ ಜಮದಗ್ನಿಯ ಪ್ರೀತಿಯಲ್ಲಿ ಬಿದ್ದಿದ್ದರೆ, ಕಾರ್ತವೀರ್ಯ ರೇಣುಕೆಯನ್ನು ವರಿಸೋಕೆ ಕಾಯುತ್ತಿದ್ದಾನೆ. ಮಹಾರಾಜರು ಕೂಡ ರೇಣುಕೆಯ ಮದುವೆಯನ್ನು ಕಾರ್ತವೀರ್ಯನ ಜೊತೆಯೇ ಮಾಡಿಸುವ ಸಾಧ್ಯತೆ ಇದೆ. ಮುಂದೆ ಏನಾಗಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ.
ಇನ್ನು ಕರಿಯರ್ ವಿಚಾರಕ್ಕೆ ಬರೋದಾದ್ರೆ ಮಹತಿ ವೈಷ್ಣವಿ ತಮ್ಮ ಕರಿಯರ್ ಆರಂಭಿಸಿದ್ದು, ಡ್ರಾಮಾ ಜ್ಯೂನಿಯರ್ಸ್ ಮೂಲಕ. ಅಲ್ಲಿ ತಮ್ಮ ಮಾತು, ಅಭಿನಯದ ಮೂಲಕವೇ ಮನ ಗೆದ್ದಿದ್ದರು. ನಂತರ ಹಲವು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುವ ಅವಕಾಶವೂ ಇವರಿಗೆ ಒದಗಿ ಬಂದಿತ್ತು.
ಮಹತಿಗೆ ಹೆಸರು ತಂದುಕೊಟ್ಟದ್ದು ಗಟ್ಟಿಮೇಳ ಧಾರಾವಾಹಿ. ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ, ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಗಟ್ಟಿಮೇಳದಲ್ಲಿ ನಾಯಕಿ ಅಮೂಲ್ಯಳ ಸಣ್ಣ ತಂಗಿ ಅಂಜು ಪಾತ್ರದಲ್ಲಿ ಮಹತಿ ನಟಿಸಿದ್ದರು. ಅದಾದ ಮೇಲೆ ತತ್ಸಮ ತದ್ಭವ ಸಿನಿಮಾದಲ್ಲಿ ಮೇಘನಾ ರಾಜ್ ಜೊತೆ ನಟಿಸಿದ್ದರು. ಸದ್ಯ ರೇಣುಕೆಯಾಗಿ ನಟಿಸುತ್ತಿದ್ದಾರೆ.