ರಾಮಾಚಾರಿಯ ತಾಯಿ ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್ ಗ್ಲಾಮರಸ್ ಪಾತ್ರಗಳಲ್ಲಿ ಮಿಂಚಿದ್ದ ನಟಿ!
ರಾಮಾಚಾರಿ ಸೀರಿಯಲ್ ನಲ್ಲಿ ರಾಮಾಚಾರಿಯ ತಾಯಿ ಮತ್ತು ನಾರಾಯಣ ಆಚಾರ್ಯರ ಮಡದಿಯ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಅಂಜಲಿ ಸುಧಾಕರ್ ಇವರ ಬಗ್ಗೆ ಒಂದಿಷ್ಟು ಮಾಹಿತಿ.
ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್ ನಲ್ಲಿ ರಾಮಾಚಾರಿಯ ತಾಯಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಅಂಜಲಿ ಸುಧಾಕರ್. ಇವರು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಗ್ಲಾಮರಸ್ ನಟಿ.
ರಾಮಾಚಾರಿ ಸೀರಿಯಲ್ ನಲ್ಲಿ (Ramachari serial) ಪತಿ ಹೇಳಿದ್ದನ್ನು ಚಾಚು ತಪ್ಪದೇ ಮಾಡುವ, ಪತಿಯ ಮಾತಿಗೆ ಎದುರಾಡದ, ಅಪ್ಪಟ ಸಂಪ್ರದಾಯಸ್ಥ ಹೆಂಡತಿ ಜಾನಕಿಯಾಗಿ, ರಾಮಚಾರಿಯ ತಾಯಿಯಾಗಿ ನಟಿಸುತ್ತಿರುವ ಅಂಜಲಿ ಸುಧಾಕರ್ ನಿಜ ಜೀವನದಲ್ಲಿ ತುಂಬಾನೆ ಸ್ಟೈಲಿಶ್.
ಮೂಲತಃ ಕನಕಪುರದವರಾದ ಅಂಜಲಿಯವರ ಮೊದಲ ಹೆಸರು ಶಾಂತ. ನಟ -ನಿರ್ದೇಶಕ ಕಾಶಿನಾಥ್ ಅವರು ಅಂಜಲಿ (Anjali) ಎಂದು ಇವರಿಗೆ ಹೆಸರಿಟ್ಟರು. ಕನ್ನಡ ಚಿತ್ರರಂಗದಲ್ಲಿ ಇವರು ಸುಮಾರು 80 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಹೆಚ್ಚಾಗಿ ಬೋಲ್ಡ್ ಅವತಾರದಲ್ಲಿ ಇವರು ಕಾಣಿಸಿಕೊಂಡಿದ್ದಾರೆ.
ಕಂಕಣಭಾಗ್ಯ ಚಿತ್ರದ ಸಣ್ಣ ಪಾತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಂಜಲಿ, ಬಳಿಕ ಅನಂತನ ಅವತಾರ, ನೀನು ನಕ್ಕರೆ ಹಾಲು ಸಕ್ಕರೆ, ತರ್ಲೆ ನನ್ ಮಗ, ಜನಮೆಚ್ಚಿದ ಮಗ, ಗಣೇಶನ ಮದುವೆ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕಾಶಿನಾಥ್, ಜಗ್ಗೇಶ್, ವಿಷ್ಣುವರ್ಧನ್, ಅನಂತನಾಗ್, ಶಂಕರ್ ನಾಗ್ ಮೊದಲಾದ ಗಣ್ಯ ನಟರ ಜೊತೆಗೆ ಅಂಜಲಿ ನಟಿಸಿದ್ದಾರೆ. ದೊರೈ-ಭಗವಾನ್, ಬಿ.ರಾಮಮೂರ್ತಿ, ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಕಾಶಿನಾಥ್ ಮುಂತಾದ ಹೆಸರಾಂತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.
1998 ರಲ್ಲಿ ದುಬೈನ ಪ್ರಸಿದ್ಧ ಉದ್ಯಮಿ ಸುಧಾಕರ್ ಅವರನ್ನು ಮದುವೆಯಾದ ನಂತರ ಸಿನಿಮಾಗೆ ಗುಡ್ ಬೈ ಹೇಳಿ ಅಂಜಲಿ ದುಬೈನಲ್ಲಿ ನೆಲೆಸಿದ್ದರು. ಈ ದಂಪತಿಗೆ ಸಿರಿ ಮತ್ತು ಸಮೃದ್ಧಿ ಎಂಬ ಎರಡು ಹೆಣ್ಣು ಮಕ್ಕಳಿದ್ದಾರೆ. ಸದ್ಯ ಇವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಮದುವೆಯಾದ ನಂತರ ನಟನೆಯಿಂದ ದೂರ ಉಳಿದಿದ್ದ ನಟಿ ಇದೀಗ ಸುಮಾರು 21 ವರ್ಷದ ಬಳಿಕ ನಟನಾ ಜಗತ್ತಿಗೆ ಮತ್ತೆ ಕಾಲಿಟ್ಟರು. ಇದೀಗ ರಾಮಾಚಾರಿ ಮತ್ತು ನೇತ್ರಾವತಿ ಸೀರಿಯಲ್ ಗಳಲ್ಲಿ ನಟಿಸುತ್ತಿದ್ದಾರೆ.
ರಾಮಾಚಾರಿ ಸೀರಿಯಲ್ ನಲ್ಲಿ ಸಂಪ್ರದಾಯಸ್ಥ ಪಾತ್ರದಲ್ಲಿ ನಟಿಸುತ್ತಿರುವ ಅಂಜಲಿ ನಿಜ ಜೀವನದಲ್ಲಿ ತುಂಬಾನೆ ಗ್ಲಾಮರಸ್. ಸೋಶಿಯಲ್ ಮೀಡಿಯಾದಲ್ಲಿ (social media) ಫೋಟೋ ಶೇರ್ ಮಾಡುತ್ತಿರುತ್ತಾರೆ. ನಟನೆಯ ವಿಷ್ಯಕ್ಕೆ ಬಂದ್ರೆ ಸಕಾರಾತ್ಮಕ ಪಾತ್ರಗಳಲ್ಲಿ ನಟಿಸಲು ಇಷ್ಟಪಡ್ತಾರಂತೆ ನಟಿ.