ನನಗೆ ಕೊರಿಯನ್ ಬನ್, ಐರಿಶ್ ಕಾಫಿ ಇಷ್ಟ: ಸಾನ್ಯಾ ನಿನ್ನ ಮೆಂಟೈನ್ ಮಾಡೋದು ಕಷ್ಟ ಅನ್ನೋದಾ ಫ್ಯಾನ್ಸ್!
ಬಿಗ್ ಬಾಸ್ 9 ಸೀಸನ್ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ ಪುಟ್ಟ ಗೌರಿ ಮದ್ವೆ ಖ್ಯಾತಿಯ ಸಾನ್ಯಾ ಐಯ್ಯರ್ ಸದಾ ಸ್ಟೈಲಿಶ್ ಹಾಗೂ ಬೋಲ್ಡ್ ಫೋಟೋಶೂಟ್ ಮೂಲಕ ಅಭಿಮಾನಿಗಳ ಮನಗೆಲ್ಲುತ್ತಿದ್ದಾರೆ.
ನಟಿ ಸಾನ್ಯಾ ಐಯ್ಯರ್ ಪುಟ್ಟಗೌರಿ ಪಾತ್ರ ಮಾಡಿ ಇಡೀ ಕರುನಾಡ ಜನರ ಮನಸ್ಸು ಗೆದ್ದಿದ್ದರು, ಇದೀಗ ಬೆಳ್ಳಿತೆರೆಯಲ್ಲಿ ಮಿಂಚಲು ರೆಡಿಯಾಗಿದ್ದು, ಸಖತ್ ಸ್ಟೈಲಿಶ್ ಫೋಟೋಗಳನ್ನು ಸಾಮಾಜಿಕ ಜಾಲತಾಣಲದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬ್ಯೂಟಿಫುಲ್ ಆಗಿ ಕಾಣ್ತಿರುವ ನಟಿ ಸಾನ್ಯಾ ಅಯ್ಯರ್ ಐರಿಶ್ ಕಾಫಿ ಹಾಗೂ ಕೊರಿಯನ್ ಬನ್ ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಇವುಗಳು ಅಂದ್ರೆ ನಟಿಗೆ ಸಿಕ್ಕಾಪಟ್ಟೆ ಇಷ್ಟವಂತೆ.
ಐರಿಶ್ ಕಾಫಿ ಜೊತೆ ಕೊರಿಯನ್ ಬನ್ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದೆ ನಟಿ ಸಾನ್ಯಾ ಅಯ್ಯರ್, ಕೆಫೆಯಲ್ಲಿ ತೆಗೆದ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿದೆ.
ಗೌರಿ ಚಿತ್ರದ ಮೂಲಕ ಸಾನ್ಯಾ ಅಯ್ಯರ್ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭದಲ್ಲಿ ಚಿತ್ರ ತಂಡದೊಂದಿಗೆ ಅವರು ಇತ್ತೀಚೆಗೆ ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ.
ಸಾನ್ಯಾ ಐಯ್ಯರ್ ಇತ್ತೀಚೆಗೆ ತುಂಬಾ ಗ್ಲಾಮರಸ್ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಸಿನಿಮಾ ಮಾಡಲು ರೆಡಿಯಾಗಿರುವ ಈ ಬ್ಯೂಟಿ ಬಾಲಿವುಡ್ ಫೋಟೋಗ್ರಫರ್ ಜೊತೆಗೂ ಶೂಟ್ ಮಾಡಿಸಿಕೊಂಡಿದ್ದಾರೆ.
ಪುಟ್ಟ ಗೌರಿ ಮದುವೆಯಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಸಾನ್ಯಾ, 8ನೇ ತರಗತಿಯವರೆಗೆ ಈ ಧಾರಾವಾಹಿಯಲ್ಲಿ ನಟಿಸಿದ್ದರು. ಕೊನೆಗೆ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿಯನ್ನು ಪಡೆದಿದ್ದಾರೆ.