ಇಳ್ಕಲ್ ಸೀರೆಯುಟ್ಟು ಪೋಸ್ ಕೊಟ್ಟ ಪ್ರಿಯಾ ಆಚಾರ್; ಜೂ. ಮಂಜುಳಾ ಅಂತಿದ್ದಾರೆ ಜನ
ಗಟ್ಟಿ ಮೇಳ, ಕಾವೇರಿ ಕನ್ನಡ ಮೀಡಿಯಂ ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸಿದ ನಟಿ ಪ್ರಿಯಾ ಜೆ ಆಚಾರ್ ಇಳ್ಕಲ್ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿದ್ದಾರೆ.
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಗಟ್ಟಿಮೇಳ (Gattimela) ಧಾರಾವಾಹಿಯಲ್ಲಿ ಅದಿತಿ ಪಾತ್ರದಲ್ಲಿ ಸಖತ್ತಾಗಿ ಅಭಿನಯಿಸಿ, ಇದೀಗ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಕಾವೇರಿ ಕನ್ನಡ ಮೀಡಿಯಂ ಧಾರಾವಾಹಿಯಲ್ಲಿ ಕಾವೇರಿಯಾಗಿ ಮಿಂಚುತ್ತಿದ್ದಾರೆ ಪ್ರಿಯಾ ಆಚಾರ್.
ಕಾವೇರಿ ಕನ್ನಡ ಮೀಡಿಯಂ (Kaveri Kannada Medium)ಸೀರಿಯಲ್ ನಲ್ಲಿ ಪ್ರಿಯಾ ಗ್ರಾಮೀಣ ಹುಡುಗಿಯಾಗಿ, ಕನ್ನಡ ಟೀಚರ್ ಆಗಿ ಕಾಣಿಸಿಕೊಂಡಿದ್ದಾರೆ. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ, ಅಜ್ಜಿ ಹೇಳಿದಂತೆ ಅಗಸ್ತ್ಯನನ್ನು ಮದುವೆಯಾಗಿದ್ದಾಳೆ ಕಾವೇರಿ. ಇವರಿಬ್ಬರ ಜೋಡಿ ಜನರಿಗೆ ಇಷ್ಟವಾಗಿದೆ.
ಸೀರಿಯಲ್ ಜೊತೆಗೆ ಕನ್ನಡ ಸಿನಿಮಾದಲ್ಲೂ ನಟಿಸಿರುವ ಪ್ರಿಯಾ ಜೆ ಆಚಾರ್ (Priya J Achar), ತಮ್ಮ ಪತಿ ಸಿದ್ಧು ಮೂಲಿಮನಿ ಜೊತೆಗೆ ಧಮಾಕ ಸಿನಿಮಾದಲ್ಲಿ ನಟಿಸಿದ್ದರು. ಅದಕ್ಕೂ ಮುನ್ನ ಇಬ್ಬರು ಜೊತೆಯಾಗಿ ಡ್ಯಾನ್ಸ್ ರಿಯಾಲಿಟಿ ಶೋದಲ್ಲೂ ಕಾಣಿಸಿಕೊಂಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಪ್ರಿಯಾ, ಇತ್ತೀಚಿಗೆ ಇಳ್ಕಲ್ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡಿರುವ ಫೋಟೋ ಸೀರೀಸ್ ಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಪ್ರಿಯಾ ಅಂದಕ್ಕೆ ನೆಟ್ಟಿಗರು ಮನಸೋತಿದ್ದಾರೆ.
ಅಪ್ಪಟ್ಟ ಗ್ರಾಮೀಣ ಬೆಡಗಿಯಂತೆ ಕಂದು ಬಣ್ಣದ ಸೀರೆ, ಕೈಗಳಿಗೆ ಕಪ್ಪು ಗಾಜಿನ ಬಳೆ, ಕುತ್ತಿಗೆಯಲ್ಲಿ ಕಪ್ಪು ದಾರೆ, ಉದ್ದನೆಯ ಜಡೆ, ಕಪ್ಪು ಬೊಟ್ಟು, ಕಾಡಿಗೆ ತೀಡಿದ ಕಪ್ಪು ಕಣ್ಣು, ಎಲ್ಲವೂ ಸೇರಿ ಪ್ರಿಯಾ ತುಂಬಾನೆ ಆಕರ್ಷಕವಾಗಿ ಕಾಣಿಸುತ್ತಿದ್ದಾರೆ. ಜನರು ಅಪ್ಪಟ ದೇವತೆ ಥರಾ ಕಾಣಿಸ್ತಿದ್ದೀರಿ ಎಂದಿದ್ದಾರೆ.
ಅಷ್ಟೇ ಅಲ್ಲ, ಹೆಚ್ಚಿನ ಜನರು ಕಾಮೆಂಟ್ ಮಾಡಿ, ನೀವು ಕನ್ನಡದ ಖ್ಯಾತ ನಟಿ ಮಂಜುಳ (actress Manjula) ತರ ಕಾಣಿಸ್ತಿದ್ದೀರಿ, ಜೂನಿಯರ್ ಮಂಜುಳ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ನಿಜಕ್ಕೂ ಒಂದು ಆಂಗಲ್ ನಲ್ಲಿ ಪ್ರಿಯಾರನ್ನು ನೋಡಿದ್ರೆ, ಮಂಜುಳ ತರವೇ ಕಾಣಿಸ್ತಿದ್ದಾರೆ.
ಇನ್ನು ಬ್ಯೂಟಿ ಬೆಂಕಿ ಐತಿ ಹಾಡಿಗೆ ಕ್ಯೂಟ್ ಆಗಿ ಅಭಿನಯಿಸಿರುವ ವಿಡಿಯೋವನ್ನು ಶೇರ್ ಮಾಡಿದ್ದು, ಅಭಿಮಾನಿಗಳು ನಾವು ನಿಮ್ಮ ಕಣ್ಣೋಟಕ್ಕೆ ಸೋಲ್ತಾ ಇದೀವಿ ಮೇಡಂ, ತುಂಬಾನೆ ಸುಂದರವಾಗಿ ಕಾಣಿಸ್ತೀರಿ ಎಂದೆಲ್ಲಾ ಹೇಳಿದ್ದಾರೆ.