ಚಂದನವನದ ಮುದ್ದು ಜೋಡಿ ಸಿದ್ಧು-ಪ್ರಿಯಾ ರೊಮ್ಯಾಂಟಿಕ್ ಫೋಟೋ ಶೂಟ್
ಕನ್ನಡ ಕಿರುತೆರೆಯ ಮುದ್ದಾದ ಜೋಡಿಗಳು ಅಂದ್ರೆ ರಿಯಲ್ ಲೈಫ್ ಜೋಡಿಗಳಾದ ಸಿದ್ಧು ಮೂಲಿಮಲಿ ಹಾಗೂ ಪ್ರಿಯಾ ಆಚಾರ್ ರೊಮ್ಯಾಂಟಿಕ್ ಆಗಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ.

ಕನ್ನಡ ಕಿರುತೆರೆಯ ಎರಡು ವಿಭಿನ್ನ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಪಡೆದ ಇವರು ರಿಯಲ್ ಲೈಫ್ ಜೋಡಿಗಳು. ಒಬ್ಬರು ಗಟ್ಟಿಮೇಳದಲ್ಲಿ ನಟಿಸಿದ್ರೆ, ಮತ್ತೊಬ್ಬರು ಪಾರು ಧಾರಾವಾಹಿಯಲ್ಲಿ ನಟಿಸಿದ್ದರು.
ಗಟ್ಟಿಮೇಳ ಧಾರಾವಾಹಿಯಲ್ಲಿ ಅದಿತಿ ಪಾತ್ರದಲ್ಲಿ ಅಂದರೆ ನಾಯಕಿಯ ತಂಗಿಯ ಪಾತ್ರದಲ್ಲಿ ನಟಿಸಿದ ನಟಿ ಪ್ರಿಯಾ ಜೆ ಆಚಾರ್ ಹಾಗೂ ಪಾರು ಧಾರಾವಾಹಿಯಲ್ಲಿ ನಾಯಕನ ತಮ್ಮನ ಪಾತ್ರದಲ್ಲಿ ನಟಿಸಿದ ನಟ ಸಿದ್ಧು ಮೂಲಿಮನಿ.
ಇವರಿಬ್ಬರಿಗೂ ಪ್ರೀತಿಯಾಗಿ, ಬಳಿಕ 2023ರ ಫೆಬ್ರವರಿ 12ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಈ ಲವ್ ಬರ್ಡ್ಸ್. ಇದೀಗ ಈ ಜೊಡಿಯ ಫೋಟೊ ಶೂಟ್ ಸದ್ದು ಮಾಡುತ್ತಿದೆ.
ಬಂಡೆ ಕಲ್ಲು-ನೀರು ಇರುವ ಕೋರೆಯಂತಹ ಸ್ಥಳದಲ್ಲಿ ಈ ಮುದ್ದಾದ ಜೋಡಿ ಫೋಟೊ ಶೂಟ್ ಮಾಡಿಸಿದ್ದು, ತುಂಬಾನೆ ರೊಮ್ಯಾಂಟಿಕ್ ಆಗಿ ಪೋಸ್ ಕೊಟ್ಟಿದೆ ಈ ಜೋಡಿ.
ಪ್ರಿಯಾ ಪ್ರಿಂಟೆಂಡ್ ಸ್ಕರ್ಟ್ ಹಾಗೂ ವೈಟ್ ಕ್ರಾಪ್ ಟಾಪ್ ಶರ್ಟ್ ಧರಿಸಿದ್ರೆ, ಸಿದ್ಧು ನೀಲಿ ಬಣ್ಣದ ಲೂಸ್ ಡೆನಿಮ್ ಹಾಗೂ ವೈಟ್ ಶರ್ಟ್ ಧರಿಸಿದ್ದಾರೆ.
ಪ್ರಿಯಾ -ಸಿದ್ ಸರಸ ಸಲ್ಲಾಪದ ಮುದ್ದಾದ ಕ್ಷಣಗಳನ್ನು ಕ್ಯಾಂಡಿಡ್ ಮೂಮೆಂಟ್ ಜೊತೆ ಸೆರೆಹಿಡಿಯಲಾಗಿದೆ. ಈ ಜೋಡಿಯನ್ನು ಅಭಿಮಾನಿಗಳು ಕೂಡ ಮೆಚ್ಚಿಕೊಂಡಿದ್ದಾರೆ.
ಇನ್ನು ಈ ಜೋಡಿಯ ಲವ್ ಸ್ಟೋರಿ ಇನ್ನೊಮ್ಮೆ ಕೇಳಿ. ಪ್ರಿಯಾ ಮತ್ತು ಸಿದ್ದು ಒಬ್ಬರನ್ನೊಬ್ಬರು ಮೊದಲಿನಿಂದಲೇ ಇಷ್ಟ ಪಡುತ್ತಿದ್ದರಂತೆ, ಜೊತೆಯಾಗಿ ಓಡಾಡುತ್ತಿದರು ಕೂಡ, ಆದರೆ ಇಬ್ಬರಿಗೂ ಪ್ರೀತಿ ಹೇಳಿಕೊಳ್ಳಲು ನಾಚಿಯಾಗಿತ್ತಂತೆ.
ಸಿದ್ಧು ಪ್ರಿಯಾಗಾಗಿ ಯಾವಾಗ್ಲೂ ಕವನ ಬರೆದು, ಅದಕ್ಕೆ ಟ್ಯೂನ್ ಹಾಕಿ ಕಳುಹಿಸುತ್ತಿದ್ದರಂತೆ. ಒಂದು ದಿನ ಕಾರಲ್ಲಿ ಪಯಣಿಸುವಾಗ ಆಕಸ್ಮಾತ್ತಾಗಿ ಆ ಕವನವನ್ನು ಮನ್ಮಂದಿ ಕೇಳಿಸಿಕೊಂಡು, ಅವರು 2 ಗಂಟೆ ಏನು ಮಾತೇ ಆಡಲಿಲ್ಲವಂತೆ.
ಆಮೇಲೆ ಯಾವತ್ತೋ ಒಂದು ದಿನ ಪ್ರಿಯಾ ತಂದೆ, ಸಿದ್ಧು ಭೇಟಿಯಾಗಿ ಮದುವೆ ಬಗ್ಗೆ ಪ್ರಸ್ತಾಪ ಇಟ್ಟರಂತೆ. ಹಾಗಾಗಿ ಪ್ರಿಯಾ -ಸಿದ್ದು ಒಬ್ಬರಿಗೊಬ್ಬರು ಪ್ರೀತಿ ತಿಳಿಸುವ ಮುನ್ನವೇ ಮನೆಯವರು ಮದುವೆಗೆ ಒಪ್ಪಿದ್ದರು.
ಪ್ರಿಯಾ ಸದ್ಯ ಕಾವೇರಿ ಕನ್ನಡ ಮೀಡೀಯಂ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸಿದ್ ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಟ್ಟಲ್ಲಿ ಈ ಜೋಡಿ ಮಾತ್ರ ಸಖತ್ ಕ್ಯೂಟ್ ಅಲಾ?