ದೊಡ್ಮನೆಗೆ ಬಂದ ಪತಿಯಿಂದ ಗೌತಮಿಗೆ ಸಿಕ್ತು ಪ್ರೀತಿಯ ಮುತ್ತು, ಜೊತೆಗೆ ಆನಿವರ್ಸರಿ ಸ್ಪೆಷಲ್ ಗಿಫ್ಟ್
ಬಿಗ್ ಬಾಸ್ ಸೀಸನ್ 11 ರಲ್ಲಿ ಫ್ಯಾಮಿಲಿ ರೌಂಡ್ ನಡೆಯುತ್ತಿದ್ದು, ಸದ್ಯ ಗೌತಮಿ ಜಾದವ್ ಪತಿ ಅಭಿಷೇಕ್ ಕಾಸರಗೋಡು ಎಂಟ್ರಿ ಕೊಟ್ಟು ಪತ್ನಿಗೆ ಪ್ರೀತಿಯ ಮುತ್ತನಿಟ್ಟಿದ್ದಾರೆ.
ಕನ್ನಡದ ಬಿಗ್ ಬಾಸ್ ಸೀಸನ್ 11 (Kannada Bigg Boss Season 11) ರಲ್ಲಿ ಫ್ಯಾಮಿಲಿ ರೌಂಡ್ ನಡೆಯುತ್ತಿದ್ದು, ಜಗಳ, ಮನಸ್ಥಾಪಗಳೆಲ್ಲಾ ಮರೆತು, ಕಳೆದ ಒಂದು ವಾರದಿಂದ ಮನೆಯಲ್ಲಿ ಬರೀ ಸಂಭ್ರಮದ ವಾತಾವರಣವೇ ತುಂಬಿದೆ. ಸದ್ಯ ಗೌತಮಿ ಜಾದವ್ ಪತಿಯ ಎಂಟ್ರಿಯೂ ಆಗಿದೆ.
ಸತ್ಯ ಸಿರಿಯಲ್ ಮೂಲಕ ಖ್ಯಾತಿ ಪಡೆದ ನಟಿ ಗೌತಮಿ ಜಾದವ್ (Gothami Jadhav) ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸುತ್ತಿದ್ದು, ಫ್ಯಾಮಿಲಿ ರೌಂಡಲ್ಲಿ ಗೌತಮಿ ಪತಿ ಅಭಿಷೇಕ್ ಕಾಸರಗೋಡು ಎಂಟ್ರಿ ಕೊಟ್ಟಿದ್ದಾರೆ. ಇಬ್ಬರ ಜೋಡಿ ನೋಡಿ ಅಭಿಮಾನಿಗಳು ಪ್ರೀತಿಯ ಸುರಿಮಳೆ ಸುರಿಸಿದ್ದು, ಈ ಜೋಡಿಯ ಮೇಲೆ ಯಾರ ಕಣ್ಣು ಬೀಳದೇ ಇದಲಿ ಎಂದು ಹಾರೈಸಿದ್ದಾರೆ.
ಜಗವೇ ನೀನು ಗೆಳತಿಯೇ ಎನ್ನುವ ಹಾಡು ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿದ್ದಂತೆ, ಗೌತಮಿ ಜಾಧವ್ ಪತಿ ಅಭಿಷೇಕ್ (Abhishek Kasaragod) ಎಂಟ್ರಿ ಕೊಟ್ಟಿದ್ದಾರೆ. ಮೂರು ತಿಂಗಳ ಬಳಿಕ ಗಂಡನನ್ನು ನೋಡಿದ ಖುಷಿಯಲ್ಲಿ ಗೌತಮಿ, ಓಡಿ ಹೋಗಿ ಗಂಡನನ್ನು ಬಿಗಿದಪ್ಪಿ ಮುದ್ದು ಮಾಡಿದ್ದಾರೆ. ಜೊತೆಗೆ ಗೌತಮಿ ಕೆನ್ನೆಗೆ ಗಂಡ ಸಿಹಿ ಮುತ್ತುಗಳನ್ನು ನೀಡಿದ್ದಾರೆ.
ಇನ್ನು ಡಿಸೆಂಬರ್ 31 ರಂದು ಗೌತಮಿ ಮತ್ತು ಅಭಿಷೇಕ್ ಅವರ ವಿವಾಹ ವಾರ್ಷಿಕೋತ್ಸವ (wedding anniversary) ಆಗಿರೋದರಿಂದ, ಇಬ್ಬರಿಗೂ ಬಿಗ್ ಬಾಸ್ ಕಡೆಯಿಂದ ಸ್ಪೆಷಲ್ ಕೇಕ್ ಕೂಡ ದೊರೆತ್ತಿದ್ದು, ಕೇಕ್ ಕತ್ತರಿಸಿ ಈ ಜೋಡಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲ, ಪತ್ನಿಗಾಗಿ ಅಭಿಷೇಕ್ ವಿಶೇಷ ಉಡುಗೊರೆ ತೆಗೆದುಕೊಂಡು ಬಂದಿದ್ದು, ಕಾಲ್ಗೆಜ್ಜೆ ಹಾಗೂ ಕುತ್ತಿಗೆಗೆ ಚೈನ್ ತೊಡಿಸಿದ್ದಾರೆ. ಇದರಿಂದ ಗೌತಮಿ ಕೂಡ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
ಗೌತಮಿ ಮತ್ತು ಅಭಿಷೇಕ್ ಕಾಸರಗೋಡು ಜೋಡಿಯದ್ದು ಲವ್ ಮ್ಯಾರೇಜ್ (love marriage). ಅಭಿಷೇಕ್ ಸಿನಿಮಾಟಗ್ರಾಫರ್ ಆಗಿದ್ದು, ಸಿನಿಮಾ ಶೂಟಿಂಗ್ ವೇಳೆ ಈ ಜೋಡಿ ಪ್ರೀತಿಯಲ್ಲಿ ಬಿದ್ದು, ಮನೆಯವರನ್ನು ಒಪ್ಪಿಸಿ, ಡಿಸೆಂಬರ್ 31, 2019 ರಂದು ಇವರು ಬೆಂಗಳೂರಿನಲ್ಲಿ ಕುಟುಂಬದ ಸಮ್ಮುಖದಲ್ಲಿ ಸಿಂಪಲ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಖ್ಯಾತ ಸಿನಿ ಪತ್ರಕರ್ತ ಗಣೇಶ್ ಕಾಸರಗೋಡು (Ganesh Kasaragod) ಅವರ ಪುತ್ರರಾಗಿರುವ ಅಭಿಷೇಕ್ ಕಿನಾರೆ, ಆಪರೇಷನ್ ಅಲಮೇಲಮ್ಮ, ಅನಂತು ವರ್ಸಶ್ ನುಸ್ರತ್, ಕೃಷ್ಣ ಟಾಕೀಸ್, ಅಳಿದು ಉಳಿದವರು, ಅಂದೊಂದುದಿತ್ತು ಕಾಲ, ಪೆಪೆ, ಮಾಯಾ ಬಜಾರ್, ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಮುಂತಾದ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ್ದಾರೆ.
ಕಿನಾರೆ ಸಿನಿಮಾದಲ್ಲಿ ಗೌತಮಿ ನಾಯಕಿಯಾಗಿದ್ದು, ಈ ಸಮಯದಲ್ಲಿ ಇವರಿಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಇನ್ನು ಶ್ವಾನ ಪ್ರಿಯರಾಗಿರುವ ಗೌತಮಿ ಮತ್ತು ಅಭಿಷೇಕ್ ಜೋಡಿ, ಮೂರು ಶ್ವಾನಗಳನ್ನು ಸಾಕಿದ್ದು, ಅವುಗಳನ್ನೇ ತಮ್ಮ ಮಕ್ಕಳಂತೆ ಸಾಕುತ್ತಿದ್ದಾರೆ.