- Home
- Entertainment
- TV Talk
- Lakshmi Nivasa : ಇದರಲ್ಲಿ ಎಲ್ಲ ಓಕೆ, ಲಕ್ಷ್ಮಿ ಮಾತಿಗೂ, ಆ್ಯಕ್ಟಿಂಗ್ ಗೂ ಸಿಂಕ್ ಆಗ್ತಿಲ್ಲ ಬದಲಾಯಿಸಿ ಅಂತಿದ್ದಾರೆ ಫ್ಯಾನ್ಸ್!
Lakshmi Nivasa : ಇದರಲ್ಲಿ ಎಲ್ಲ ಓಕೆ, ಲಕ್ಷ್ಮಿ ಮಾತಿಗೂ, ಆ್ಯಕ್ಟಿಂಗ್ ಗೂ ಸಿಂಕ್ ಆಗ್ತಿಲ್ಲ ಬದಲಾಯಿಸಿ ಅಂತಿದ್ದಾರೆ ಫ್ಯಾನ್ಸ್!
ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿರುವ ಹಿರಿಯ ನಟಿ ಶ್ವೇತಾ ನಟನೆಯನ್ನು ಜನ ಇಷ್ಟಪಟ್ಟಿದ್ದಾರೆ ನಿಜ, ಆದ್ರೆ ವಾಯ್ಸ್ ಸೂಟ್ ಆಗ್ತಿಲ್ಲ, ಆ್ಯಕ್ಟಿಂಗ್ ಗೂ ಸಿಂಕ್ ಆಗ್ತಿಲ್ಲ ಚೇಂಜ್ ಮಾಡಿ ಅಂತಿದ್ದಾರೆ.

ಲಕ್ಷ್ಮೀ ನಿವಾಸ (Lakshmi Nivasa)ಧಾರವಾಹಿ ಸದ್ಯಕ್ಕೆ ಭಾವನಾ ತಾಳಿ ಕಥೆ ನಡೆಯುತ್ತಿದೆ. ಜಾತ್ರೆಯಲ್ಲಿ ನಿದ್ದೆ ಮಾಡ್ತಿರೋವಾಗ ಬಂದು ತಾಳಿ ಕಟ್ಟಿದವನು ಯಾರು ಅನ್ನೋದು ಗೊತ್ತಾಗದೇ ಭಾವನಾ ಒದ್ದಾಡುತ್ತಿದ್ದಳು, ನಂತರ ಅಮ್ಮ ಲಕ್ಷ್ಮೀಗೂ ವಿಷ್ಯ ಗೊತ್ತಾಯ್ತು, ಅಣ್ಣ ವೆಂಕಿಗೂ ಗೊತ್ತಾಯ್ತು, ಈಗ ಅತ್ತಿಗೆ ವೀಣಾಗೂ ವಿಷ್ಯ ಗೊತ್ತಾಗಿದೆ.
ಮಗಳ ಜೀವನವನ್ನ ಹೇಗಾದ್ರೂ ಮಾಡಿ ಸರಿ ಮಾಡ್ಬೇಕು, ಭಾವನಾಳಿಗೆ ತಾಳಿ ಕಟ್ಟಿದ್ದು ಯಾರು ಅನ್ನೋದು ಆದಷ್ಟು ಬೇಗ ಗೊತ್ತಾಗಬೇಕು ಎಂದು ಹಂಬಲಿಸೋ ಲಕ್ಷ್ಮೀ (Lakshmi) ಸಹಾಯ ಕೇಳಿದ್ದು ಮಾತ್ರ ತಾಳಿ ಕಟ್ಟಿದ ಸಿದ್ದೇಗೌಡ್ರ ಬಳಿ, ಹಾಗಾಗಿ ತುಂಬಾ ದಿನದಿಂದ ಧಾರವಾಹಿಯಲ್ಲಿ ಈ ತಾಳಿಯ ಗೋಳು ನಡೆಯುತ್ತಲೇ ಇದೆ.
ಮಗಳ ನೋವನ್ನು ಕಂಡು ಸುಮ್ಮನಿರಲಾರದೇ ಯಾವಾಗ್ಲೂ ನೋವಲ್ಲೆ ಇರುವ ಲಕ್ಷ್ಮಿಗೆ ಈವಾಗ ವೀಣಾಗೂ ವಿಷ್ಯ ಗೊತ್ತಾಗಿರೋದು ನೋಡಿ, ಆಕೆ ಬಳಿ ನಡೆದ ಎಲ್ಲವನ್ನೂ ಹೇಳಿ ಮನೆಯಲ್ಲಿ ಯಾರ ಬಳಿಯೂ ಈ ಬಗ್ಗೆ ಹೇಳದಂತೆ ಭಾಷೆ ತೆಗೊಂಡಿದ್ದಾಳೆ. ವೀಣಾ (Veena) ಅಂತೂ ಅತ್ತೆ , ಮಾವರನ್ನು ದೇವರಂತೆ ನೋಡುವ ಸೊಸೆ, ಅತ್ತೆಗೆ ಸಮಾಧಾನ ಮಾಡಿ ಎಲ್ಲವೂ ಬೇಗನೆ ಸರಿಯಾಗೋದಾಗಿ ಹೇಳಿದ್ದಾಳೆ.
ಅತ್ತೆ -ಸೊಸೆಯ ಸಂಭಾಷಣೆ ನೋಡಿ, ವೀಕ್ಷಕರು ಸೊಸೆ ವೀಣಾಳನ್ನು ಸಿಕ್ಕಾಪಟ್ಟೆ ಹೊಗಳಿದ್ದಾರೆ. ಎಲ್ಲ ಮನೆಯಲ್ಲೂ ವೀಣಾ ಅತ್ತಿಗೆ ತರ ಸೊಸೆ ಇರಬೇಕು, ಅತ್ತೆ ಸೊಸೆ ಬಾಂಧವ್ಯ ಸೂಪರ್ ಆಗಿದೆ ಎಂದಿದ್ದಾರೆ. ಅಷ್ಟೇ ಅಲ್ಲ ವೀಣಾ ನಿಮ್ಮ ನಟನೆ ತುಂಬಾನೆ ಚೆನ್ನಾಗಿದೆ. ಎಲ್ಲಾ ಮನೆಗಳಲ್ಲೂ ನಿಮ್ಮ ತರ ಸೊಸೆ ಇರಬೇಕು ಅಂತಾನೂ ಹೇಳಿದ್ದಾರೆ.
ಈ ಸಲ ಝೀ ಕುಟುಂಬ ಅತ್ತೆ ಸೊಸೆ ಅವಾರ್ಡ್(best daughter in law) ಪಕ್ಕ ಇವ್ರಿಗೆ ಸಿಗೋದು, ಅತ್ತೆ ಸೊಸೆ ಈ ಕಾಲದಲ್ಲಿ ಇಷ್ಟೂ ಪ್ರೀತಿಯಿಂದ ಇರೋದು ತುಂಬಾ ಕಡಿಮೆ. ಈ ಸೀರಿಯಲ್ ನೋಡಿ ಜನರು ಹೇಗಿರಬೇಕೆಂದು ತಿಳಿದುಕೊಳ್ಳಲಿ, ಬೆಸ್ಟ್ ಸೊಸೆ ಅವಾರ್ಡ್ ವೀಣಾಗೆ ಸಿಗಬೇಕು ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಆದರೆ ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿರೋ ಹಿರಿಯ ನಟಿ ಶ್ವೇತಾ ಅದ್ಭುತವಾಗಿ ನಟಿಸುತ್ತಿದ್ದರೂ ಸಹ, ಅವರಿಗೆ ಇನ್ಯಾರೋ ಡಬ್ಬಿಂಗ್ ಮಾಡಿದ್ದು, ಅದು ಶ್ವೇತಾ ಎಕ್ಸ್ ಪ್ರೆಶನ್ ಗೆ ಮ್ಯಾಚ್ ಆಗ್ತಿಲ್ಲ. ಇದೇ ವಿಷ್ಯ ವೀಕ್ಷಕರಿಗೆ ನೋಡೋದಕ್ಕೆ ಕಷ್ಟ ಆಗ್ತಿದೆ.
ಈ ಕುರಿತು ಕಾಮೆಂಟ್ ಮಾಡಿರೋ ಜನರು ಅಯ್ಯೋ ಮೊದಲು ಲಕ್ಷ್ಮಿ ಅವರನ್ನು ಬದಲಾಯಿಸಿ ವಾಯ್ಸ್ ನಟನೆ ಎರಡು ಸೂಟ್ ಆಗ್ತಿಲ್ಲಾ ಎಂದು ಒಬ್ರು ಹೇಳಿದ್ರೆ, ಶ್ವೇತಾ ಅವರು ತುಂಬಾನೆ ಇಮೋಷನಲ್ ಆಗ್ತಾರೆ, ಇದು ಸಿನಿಮಾಗೆ ಸೂಟ್ ಆಗುತ್ತೆ, ಸೀರಿಯಲ್ ಗೆ ಅಲ್ಲ ಎಂದಿದ್ದಾರೆ. ಯಾಕೆ ಲಕ್ಷ್ಮೀಯವರಿಗೆ ಅವರದೇ ವಾಯ್ಸ್ ಕೊಟ್ಟಿಲ್ಲ ಅಂತಾನೂ ಕೇಳಿದ್ದಾರೆ. ಇನ್ನಾದ್ರೂ ಡೈರೆಕ್ಟರ್ ವಾಯ್ಸ್ ಬದಲಾಯಿಸ್ತಾರ ಕಾದು ನೋಡ್ಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.