ಪಾರು ಸೀರಿಯಲ್ ವಿಲನ್ ಮಾನ್ಸಿ ಜೋಶಿ ನಿಶ್ಚಿತಾರ್ಥ… ಹುಡುಗ ಇವರೇ ನೋಡಿ
ಪಾರು ಧಾರಾವಾಹಿಯಲ್ಲಿ ವಿಲನ್ ಮಾನ್ಸಿ ಜೋಶಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಟಿ ಇತ್ತೀಚೆಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು ಫೋಟೊಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಕನ್ನಡ ಕಿರುತೆರೆಯ ಜನಪ್ರಿಯ ಪಾರು ಧಾರಾವಾಹಿಯಲ್ಲಿ ಖತರ್ನಾಕ್ ವಿಲನ್ ಆಗಿ ನಟಿಸಿದ ಅನುಷ್ಕಾ ನೆನಪಿದ್ಯಾ? ವಿಲನ್ ಪಾತ್ರದ ಮೂಲಕ ಭರ್ಜರಿ ಮನರಂಜನೆ ಕೊಟ್ಟ ನಟಿ ಮಾನ್ಸಿ ಜೋಶಿ (Mansi Joshi) ಇದೀಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಪಾರು ಧಾರಾವಾಹಿಯಲ್ಲಿ (Paaru serial) ಆರಂಭದಲ್ಲಿ ಕಥೆಯಲ್ಲಿ ತಾನೆ ಮಿಂಚುತ್ತಿದ್ದ ಅನುಷ್ಕಾ ಆಲಿಯಾಸ್ ಮಾನ್ಸಿ, ನಂತರ ದಿನಗಳಲ್ಲಿ ಪಾತ್ರದ ಪ್ರಾಮುಖ್ಯತೆ ಕಡಿಮೆಯಾಗಿ, ಸೀರಿಯಲ್ ನಿಂದನೇ ಹೊರ ನಡೆದಿದ್ದರು. ಪಾರು ಬಳಿಕ ಕನ್ನಡದಲ್ಲಿ ಅಣ್ಣ -ತಂಗಿ, ಮೈನಾ ಧಾರಾವಾಹಿಗಳಲ್ಲೂ ನಟಿ ಕಾಣಿಸಿಕೊಂಡಿದ್ದರು.
ಇದಾದ ಬಳಿಕ ಪರ ಭಾಷೆಗಳಲ್ಲಿ ನಟಿ ಫುಲ್ ಬ್ಯುಸಿಯಾಗಿದ್ದರು. ಅಂದ್ರೆ ತಮಿಳು, ತೆಲುಗು ಮತ್ತು ಮಲಯಾಲಂ ಸೀರಿಯಲ್ ಗಳಲ್ಲಿ ಮಾನ್ಸಿ ನಟಿಸುತ್ತಿದ್ದರು. ಸದ್ಯ ನಟಿ ಮಲಯಾಳದ ಚಂದ್ರಕಲಲೆಯುಮ್ ಚಂದ್ರಕಾಂತಮ್ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಇದೀಗ ನಟಿ ಹೊಸ ಜೀವನಕ್ಕೆ ಕಾಲಿಡುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಹೌದು ನಟಿ ಮಾನ್ಸಿ ಜೋಶಿ ತಮ್ಮ ಜೀವನದ ಹೊಸ ಮೆಟ್ಟಿಲನ್ನ ಏರುತ್ತಿದ್ದು, ಅಕ್ಟೋಬರ್ 20ರಂದು ನಿಶ್ಚಿತಾರ್ಥ (engagement)ಮಾಡಿಕೊಂಡಿದ್ದಾರೆ.
ಹೌದು ನಟಿ ಮಾನ್ಸಿ ಜೋಶಿ ತಮ್ಮ ನಿಶ್ಚಿತಾರ್ಥದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. M/R forever ಎಂದು ಬರೆದುಕೊಂಡಿದ್ದು, ಜೊತೆಗೆ ಮಾನಸಿಯ ರಾಘವ ಎಂದು ಬರೆದಿದ್ದಾರೆ. ಹುಡುಗನ ಹೆಸರು ರಾಘವ್ (Raghav) ಅನ್ನೋದು ತಿಳಿದು ಬಂದಿದೆ. ಆದರೆ ಹುಡುಗನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಮಾನ್ಸಿ ಜೋಶಿ ಮತ್ತು ರಾಘವ್ ಇಬ್ಬರೂ ನೇರಳೆ ಬಣ್ಣದ ಸೀರೆ ಮತ್ತು ಶರ್ಟ್ ನಲ್ಲಿ ಮಿಂಚಿದ್ದಾರೆ. ತಮ್ಮ ಉಂಗುರವನ್ನ ತೋರಿಸುತ್ತಾ, ಅಧಿಕೃತವಾಗಿ ಎಂಗೇಜ್ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಜೊತೆ ಮುದ್ದಾದ ಒಂದಷ್ಟು ಫೋಟೊಗಳನ್ನೂ ಕೂಡ ಶೇರ್ ಮಾಡಿದ್ದಾರೆ.
ಮಾನ್ಸಿ ಜೋಶಿ ಸೋಶಿಯಲ್ ಮೀಡಿಯಾದಲ್ಲೂ ತುಂಬಾನೆ ಆಕ್ಟೀವ್ ಆಗಿರುವ ನಟಿ. ಹೆಚ್ಚಗೈ ತಮ್ಮ ಫೋಟೊ, ರೀಲ್ಸ್ ಮೂಲಕ ಜನರಿಗೆ ಕನೆಕ್ಟ್ ಆಗುತ್ತಿರುತ್ತಾರೆ. ಅಷ್ಟೇ ಅಲ್ಲ ಇವರ ತಂಗಿ ಇಂಚರಾ ಜೋಶಿ ಕೂಡ ಸೀರಿಯಲ್ ನಟಿ. ಇಂಚರಾ ಸದ್ಯ ಆಸೆ ಧಾರಾವಾಹಿಯಲ್ಲಿ ರಂಗನಾಥ್ ಮತ್ತು ಶಾಂತಿಯ ಕೊನೆಯ ಸೊಸೆ ಶ್ರುತಿಯಾಗಿ ನಟಿಸುತ್ತಿದ್ದಾರೆ.