- Home
- Entertainment
- TV Talk
- ನೂರಾರು ರೋಸ್‌ಗಳು, ಬೆಳ್ಳಿ ಕಾಲ್ಗೆಜ್ಜೆ...; ಪತ್ನಿ ಬರ್ತಡೇ ವಿಶೇಷ ಮಾಡಿದ ಶ್ರೀನಗರ ಕಿಟ್ಟಿ
ನೂರಾರು ರೋಸ್‌ಗಳು, ಬೆಳ್ಳಿ ಕಾಲ್ಗೆಜ್ಜೆ...; ಪತ್ನಿ ಬರ್ತಡೇ ವಿಶೇಷ ಮಾಡಿದ ಶ್ರೀನಗರ ಕಿಟ್ಟಿ
ಪತ್ನಿ ಬರ್ತಡೇ ಎನ್ನು ವಿಶೇಷವಾಗಿ ಆಚರಿಸಿದ ಶ್ರೀನಗರ ಕಿಟ್ಟಿ. ಆಫೀಸ್ ತುಂಬಾ ಅಲಂಕಾರ ಮಾಡಿದ ನಟ....

ಕನ್ನಡ ಚಿತ್ರರಂಗದ ಸರಳ ನಟ ಶ್ರೀನಗರ ಕಿಟ್ಟಿ (Srinagara kitty) ತಮ್ಮ ಪತ್ಮಿ ಭಾವನಾ ಬೆಳಗೆರೆ ಬರ್ತಡೇಯನ್ನು ವಿಶೇಷವಾಗಿ ಆಚರಿಸಿದ್ದಾರೆ.
ರಾತ್ರಿ 12 ಗಂಟೆಗೆ ಇಡೀ ಕುಟುಂಬಸ್ಥರು ಭಾವನಾ ಬೆಳಗೆರೆಗೆ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಅಲ್ಲಿದ್ದ ಪ್ರತಿಯೊಬ್ಬರೂ ಹೂ ಗುಚ್ಚು ಕೊಟ್ಟಿದ್ದಾರೆ.
ಒಂದು ಹೂ ಗುಚ್ಚಿನಲ್ಲಿ ಸುಮಾರು 50 ಗುಲಾಬಿ ಹೂಗಳು ಇದೆ. ಇದನ್ನು ನೋಡಿ ಮೊದಲು ಭಾವನಾ ಶಾಕ್ ಆಗ್ತಾರೆ ಹಾಗೇ ಖುಷಿನೂ ಪಡುತ್ತಾರೆ.
ಆ ಕಣ್ಣಿಗೊಂದು ಈ ಕಣ್ಣಿಗೊಂದು ಸ್ವರ್ಗನ ತಂದು ಕೊಡಲೇನು ಇಂದು ಅಂದ ನನ್ನ ಸ್ವರ್ಗಕ್ಕೆ ಸಾವಿರ ಮುತ್ತುಗಳು THANK YOU' ಎಂದು ಭಾವನಾ ಬರೆದುಕೊಂಡಿದ್ದಾರೆ.
ಸಂಪಾದಕಿಯಾಗಿ ಇದು ನನ್ನ ಮೊದಲನೇ BIRTHDAY! ಒಂದಾ ಎರಡಾ wishes ಬಂದದ್ದು.. ಸಾವಿರಾರು ಪ್ರೀತಿಯ ಮನಸ್ಸುಗಳು ನನಿಗೆ ಹರಸಿ, ಶುಭಕೋರಿದ ಅವರಿಗೆಲ್ಲಾ ಧನ್ಯವಾದಗಳು, ಒಲವಿನ ಮುತ್ತುಗಳು ಎಂದು ಭಾವನಾ ಬರೆದುಕೊಂಡಿದ್ದಾರೆ.
ಹುಟ್ಟು ‘ಹಬ್ಬ’ವಾಗೇ ಇತ್ತು! ಅಪ್ಪ I MISS YOU ಅಂದವಳಿಗೆ Happy birthday to you ಜೂನಿಯರ್ ಬೆಳಗೆರೆ ಬಾಸ್ ಎಂದದ್ದು ಖುದ್ದು ಅಪ್ಪನೇ ಹೇಳಿದಂತಿತ್ತು! ಎಂದಿದ್ದಾರೆ ಭಾವನಾ.