ದೆಹಲಿ ಬೀದಿಯಲ್ಲಿ ನೇಹಾ ಗೌಡ : ಬೇಸರ ವ್ಯಕ್ತಪಡಿಸಿದ ನಮ್ಮ ಲಚ್ಚಿ ಅಭಿಮಾನಿಗಳು
ಸದಾ ಟ್ರಾವೆಲ್ ಮಾಡುತ್ತಿರುವ ಗೊಂಬೆ ನೇಹಾ ಇದೀಗಾ ದೆಹಲಿಯಲ್ಲಿ ಎಂಜಾಯ್ ಮಾಡ್ತಾ ಇದ್ದಾರೆ. ಇವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋ ಹರಿಯಬಿಡುತ್ತಿದ್ದಂತೆ, ಅಭಿಮಾನಿಗಳು ಅಯ್ಯೋ ಇಷ್ಟು ಬೇಗ ಸೀರಿಯಲ್ ನಲ್ಲಿ ನಿಮ್ ಕತೆ ಮುಗ್ಸಿದ್ರಾ? ಇನ್ನು ನೀವು ಬರೋದೆ ಇಲ್ವಾ ಅಂತಾ ಕೇಳ್ತಿದ್ದಾರೆ.

ಕನ್ನಡ ಕಿರುತೆರೆಯ ಬೊಂಬೆ, ನೇಹಾ ಗೌಡ (neha Gowda) ಸದಾ ಒಂದಲ್ಲ ಒಂದು ಫೋಟೋ ಅಥವಾ ವಿಡಿಯೋ, ರೀಲ್ ಗಳನ್ನು ತನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾ ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಲೇ ಇರುತ್ತಾರೆ. ಆದರೆ ಈ ಬಾರಿ ಅವರು ಶೇರ್ ಮಾಡಿದ ಫೋಟೋ ನೋಡಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ನೇಹ ಗೌಡ ಏನ್ ಫೋಟೋ ಶೇರ್ ಮಾಡಿದ್ದಾರೆ ಅಂದ್ರೆ ದೆಹಲಿಯ ಬೀದಿಗಳಲ್ಲಿ ಎಂಜಾಯ್ ಮಾಡುತ್ತಿರುವ ಆರೇಳು ಫೋಟೋಗಳನ್ನು ನೇಹ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ (Shared photos in instagram) ಹರಿಯ ಬಿಟ್ಟಿದ್ದಾರೆ.
ನೇಹಾ ಹೆಚ್ಚಾಗಿ ಟ್ರಾವೆಲ್ ಮಾಡುತ್ತಲೇ ಇರುತ್ತಾರೆ. ತಮ್ಮ ಸಹೋದರಿ ಸೋನು ಗೌಡ ಜೊತೆ ಅವರು ಈ ವರ್ಷ, ಗೋವಾ, ಪಟ್ಟಾಯಂ, ಋಷಿಕೇಶ ಮೊದಲಾದ ಕಡೆಗಳಿಗೆ ಟ್ರಾವೆಲ್ ಮಾಡಿದ್ದು, ಇದೀಗ ಸೋನು ಜೊತೆ ದೆಹಲಿ ಬೀದಿ ಬೀದಿ ಸುತ್ತುತ್ತಾ ಎಂಜಾಯ್ ಮಾಡುತ್ತಿದ್ದು, ಆ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ದೆಹಲಿಯಲ್ಲಿರುವ ಫೋಟೋಗಳನ್ನು ನೋಡುತ್ತಿದ್ದಂತೆ ಅಭಿಮಾನಿಗಳು, ನೀವಿನ್ನು ಸೀರಿಯಲ್ ನಲ್ಲಿ ಕಾಣಿಸಿಕೊಳ್ಳೋದಿಲ್ವಾ? ಇಷ್ಟು ಬೇಗ ಪಾತ್ರ ಮುಗಿದು ಹೋಯ್ತಾ? ಇನ್ನು ಯಾವ ಸೀರಿಯಲ್ ನಲ್ಲಿ ನಟಿಸ್ತಿದ್ದೀರಾ ಎಂದು ಪ್ರಶ್ನೆಗಳನ್ನು ಸಾಲು ಸಾಲಾಗಿ ಕೇಳುತ್ತಿದ್ದಾರೆ.
ನೇಹಾ ಗೌಡ ಅವರು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ‘ನಮ್ಮ ಲಚ್ಚಿ’ ಸೀರಿಯಲ್ ನಲ್ಲಿ ನಟ ವಿಜಯ್ ಸೂರ್ಯ ಜೊತೆ ತೆರೆ ಹಂಚಿಕೊಂಡಿದ್ದರು. ಈ ಸೀರಿಯಲ್ ಚೆನ್ನಾಗಿಯೇ ಮೂಡಿಬರುತ್ತಿತ್ತು. ಆದರೆ ನೇಹಾ ಗೌಡ ಪಾತ್ರವನ್ನು ಸಾಯಿಸುವ ಮೂಲಕ ಕೊನೆಗೊಳಿಸಲಾಯಿತು.ಇಷ್ಟು ಒಳ್ಳೆ ನಟಿಯ ಪಾತ್ರವನ್ನು ಇಷ್ಟು ಬೇಗ ಕೊನೆಗೊಳಿಸಿದ್ದಕ್ಕೆ, ಇದೀಗ ಪ್ರೇಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಿಮ್ಮನ್ನು ಮತ್ತೆ ಕನ್ನಡದ ಧಾರಾವಾಹಿಯಲ್ಲಿ ಪೂರ್ಣ ಪ್ರಮಾಣದಲ್ಲಿ ನೋಡಬೇಕು ಅಂತ ಆಸೆ ಇತ್ತು. ಲಚ್ಚಿಯಲ್ಲಿ ನಿಮ್ಮ ಪಾತ್ರ ಬೇಗ ಮುಗಿಸಿದ್ದು ಬೇಜಾರು ಆಗ್ತಿದೆ ಎಂದು ಕೆಲವರು ಹೇಳುತ್ತಿದ್ದರೆ, ಇನ್ನೂ ಕೆಲವರು ನೀವು ಮತ್ತೆ ಸೀರಿಯಲ್ ನಲ್ಲಿ ನಟಿಸ್ತೀರಾ? ನಿಮ್ಮ ಪಾತ್ರ ಇನ್ನೂ ಮುಂದುವರೆಯುತ್ತಾ ಎಂದು ಕೇಳಿದ್ದಾರೆ. ಯಾವುದಕ್ಕೂ ಮುಂದೆ ಧಾರವಾಹಿ ನೋಡಿದ್ರೆ ಉತ್ತರ ಸಿಗಬಹುದು.