ಹೆಸರು ಬದಲಾಯಿಸಿಕೊಂಡ ‘ನೀನಾದೆ ನಾ’ ಖ್ಯಾತಿಯ ನಟಿ Khushi Shivu… ಹೊಸ ಕಥೆ ಆರಂಭ
Khushi Shivu: ನೀನಾದೆ ನಾ ಸೇರಿ ಕನ್ನಡ ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ಗುರುತಿಸಿಕೊಂಡಿರುವ ನಟಿ ಖುಷಿ ಶಿವು ಇದೀಗ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ. ಇದು ಸುಂದರವಾದ ಹೊಸ ಕಥೆಯ ಆರಂಭ ಎನ್ನುತ್ತಾ ನಟಿ ತಮ್ಮ ಹೊಸ ಹೆಸರು ಘೋಷಿಸಿದ್ದಾರೆ.

ಖುಷಿ ಶಿವು
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನೀನಾದೆ ನಾ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ಖುಷಿ ಶಿವು. ಖುಷಿ ಈ ಧಾರಾವಾಹಿಯಲ್ಲಿ ವೇದಾ ಆಗಿ ನಟಿಸಿದ್ದರು. ದಿಲೀಪ್ ಶೆಟ್ಟಿ ವಿಕ್ರಮ್ ಪಾತ್ರದಲ್ಲಿ ನಟಿಸಿದ್ದು, ಈ ಜೋಡಿಯನ್ನು ಜನ ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದರು. ಇವರನ್ನು ದಿಲ್ ಖುಷ್ ಜೋಡಿ ಅಂತಾನೆ ಜನ ಕರೆಯುತ್ತಿದ್ದರು.
ದಿಲ್ ಖುಷ್ ಜೋಡಿ
ದಿಲೀಪ್ ಶೆಟ್ಟಿ ಮತ್ತು ಖುಷಿ ಜೋಡಿಯನ್ನು ಜನರು ತೆರೆ ಮೇಲೆ ಹಾಗೂ ತೆರೆಯ ಹೊರಗೂ ಸಹ ಇಷ್ಟಪಟ್ಟಿದ್ದರು. ಸೋಶಿಯಲ್ ಮೀಡಿಯಾದ್ಯಂತ ದಿಲ್ ಖುಷ್ ಎನ್ನುವ ಹಲವು ಫ್ಯಾನ್ ಪೇಜ್ ಗಳು ಸಹ ಸೃಷ್ಟಿಯಾಗಿದ್ದವು. ಇದೀಗ ನಟಿ ಖುಷಿ ಶಿವು ತಮ್ಮ ಹೆಸರನ್ನೇ ಬದಲಾಯಿಸಿದ್ದು, ಈ ಸುದ್ದಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಮಿಕಾ ಶಿವು
ಇದು ಸುಂದರವಾದ ಹೊಸ ಕಥೆಯ ಆರಂಭ ಎನ್ನುವ ಕ್ಯಾಪ್ಶನ್ ಜೊತೆಗೆ ಖುಷಿ ಹೊಸದಾದ ಪೋಸ್ಟ್ ಶೇರ್ ಮಾಡಿದ್ದು, ಅದರಲ್ಲಿ ತಮ್ಮ ಹೆಸರನ್ನು ರಮಿಕಾ ಶಿವು ಎಂದು ಬದಲಾಯಿಸುವುದಾಗಿ ಮಾಹಿತಿ ನೀಡಿದ್ದಾರೆ, ನಟಿ ಹಂಚಿಕೊಂಡ ಪೋಸ್ಟ್ ಮಾಹಿತಿ ಹೀಗಿದೆ ನೋಡಿ.
ನಟಿ ಹೇಳಿದ್ದೇನಿ?
ಪ್ರೀತಿಯ ಅಭಿಮಾನಿಗಳೇ, ಸ್ನೇಹಿತರೇ ಮತ್ತಿ ಹಿತೈಷಿಗಳೇ, ಕೃತಜ್ಞತೆ ಮತ್ತು ಪ್ರೀತಿ ತುಂಬಿದ ಹೃದಯದಿಂದ ನಿಮಗೆ ತಿಳಿಸುವುದೇನೆಂದರೆ, ಹೊಸ ಕನಸಿನೊಂದಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸಲು, ನೀವೆಲ್ಲರೂ ಪ್ರೀತಿಸಿದ, ಅಭಿಮಾನಿಸಿದ, ಹಾರೈಸಿದ, ನನ್ನ ‘ಖುಷಿ ಶಿವು’ ಹೆಸರನ್ನು ವಿಶೇಷ ಕಾರಣಗಳಿಂದ ‘ರಮಿಕಾ ಶಿವು’ ಎಂದು ಬದಲಾಯಿಸಿಕೊಳ್ಳುತ್ತಿದ್ದೇನೆ.
ಪ್ರೀತಿ ಆಶೀರ್ವಾದ ಇರಲಿ
ಆದರೆ ನಿಮ್ಮ ಪ್ರೀತಿ, ಆಶೀರ್ವಾದ ಮತ್ತು ಪ್ರೋತ್ಸಾಹ ಬದಲಾಗದೆ ಇನ್ನೂ ಹೆಚ್ಚಾಗುತ್ತದೆ ಎಂದು ನಂಬಿದ್ದೇನೆ. ಇದು ಸುಂದರವಾದ ಹೊಸ ಕಥೆಯ ಆರಂಭ. ಇಂತೀ ನಿಮ್ಮ ಪ್ರೀತಿಯ ರಮಿಕಾ ಶಿವು ಎಂದು ನಟಿ ಬರೆದುಕೊಂಡಿದ್ದಾರೆ.
R ಅನ್ನೋದು ಅದೃಷ್ಟವೇ?
ಹೇಳಿ ಕೇಳಿ ಕನ್ನಡ ಸಿನಿಮಾ ಇಂಡಷ್ಟ್ರಿಗೆ R ಎನ್ನುವುದು ತುಂಬಾನೆ ಅದೃಷ್ಟದ ಹೆಸರಾಗಿದೆ. R ಹೆಸರಲ್ಲಿ ಬಂದ ಹಲವು ತಾರೆಯರು ಸಿನಿಮಾದಲ್ಲಿ ಜನಪ್ರಿಯತೆ ಪಡೆದದ್ದು ಇದೆ. ಹಾಗಾಗಿಯೇ ನಟಿ ತಮ್ಮ ಹೆಸರನ್ನು ಖುಷಿಯಿಂದ ರಮಿಕಾ ಎಂದು ಬದಲಾಯಿಸಿದರೇ ಗೊತ್ತಿಲ್ಲ.
ಖುಷಿ ಶಿವು ನಟನಾ ಜರ್ನಿ
ಖುಷಿ ಶಿವು ಮೊದಲ ಬಾರಿಗೆ ಪಿಯುಸಿಯಲ್ಲಿದ್ದಾರೆ 'ಪಾರು' ಧಾರಾವಾಹಿಗೆ ಬಣ್ಣ ಹಚ್ಚಿದ್ದರು. ಈ ಸೀರಿಯಲ್ ನಲ್ಲಿ ಖಳನಾಯಕಿ ಅನುಷ್ಕಾ ತಂಗಿ ಅನನ್ಯಾ ಆಗಿ ನಟಿಸುವ ಮೂಲಕ ನಟನೆಗೆ ಕಾಲಿಟ್ಟಿದ್ದರು. ನಂತರ ಇವರು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಗಂಗಾ ಪಾತ್ರದಲ್ಲಿ ಮಿಂಚಿದರು. ಇದು ನಾಯಕಿಯ ಪಾತ್ರವಾಗಿತ್ತು.
ಬಾಲ್ಯದಲ್ಲೇ ನಟಿಯಾಗುವ ಬಯಕೆ
ಎಳವೆಯಿಂದಲೂ ನಟಿಯಾಗುವ ಆಸೆ ಹೊತ್ತಿದ್ದ ಖುಷಿ ಆಲಿಯಾಸ್ ರಮಿಕಾ ಯುಕೆಜಿ ವಿದ್ಯಾರ್ಥಿನಿಯಾಗಿದ್ದಾಗಲೇ ಮಂಡ್ಯ ರಮೇಶ್ ಅವರ ನಟನಾ ತಂಡ ಸೇರಿ, ಬರೋಬ್ಬರಿ ಹತ್ತು ವರ್ಷಗಳ ಕಾಲ ನಟನೆ ಕಲಿತ್ತಿದ್ದರು. ಈಗಾಗಲೇ ‘ರುಕ್ಮಿಣಿ ವಸಂತ’ ಮೂಲಕ ಚಂದನವನಕ್ಕೂ ಎಂಟ್ರಿ ಕೊಟ್ಟಿದ್ದಾರೆ ಬೆಡಗಿ.