ನೀನಾದೆ ನಾ ಧಾರಾವಾಹಿ ನಟ ದಿಲೀಪ್ ಶೆಟ್ಟಿ, ಖುಷಿ ಶಿವು ಅವರು ಪ್ರೀತಿ ವಿಷಯ ಹೇಳಿಕೊಳ್ಳಲಿ ಎಂದು ವೀಕ್ಷಕರು ಬಯಸುತ್ತಿದ್ದಾರೆ, ಈಗ ವಿಶೇಷ ವ್ಯಕ್ತಿ ಎಂದು ಅಡ್ರೆಸ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಜೋಡಿ ಪ್ರೀತಿ ವಿಷಯವನ್ನು ಹೇಳಿಕೊಳ್ಳಬಹುದಾ?
ಸೆಲೆಬ್ರಿಟಿಗಳು ಒಮ್ಮೊಮ್ಮೆ ಸೀರಿಯಲ್, ಸಿನಿಮಾ ಸೆಟ್‌ನಲ್ಲಿ ಲವ್‌ನಲ್ಲಿ ಬಿದ್ದರೂ ಕೂಡ, ಪ್ರೀತಿಯನ್ನು ಎಲ್ಲರ ಮುಂದೆ ಹೇಳಿಕೊಂಡಿರೋದಿಲ್ಲ. ಅಂತೆಯೇ ‘ನೀನಾದೆ ನಾ’ ಧಾರಾವಾಹಿಯ ನಟ ದಿಲೀಪ್ ಶೆಟ್ಟಿ, ಖುಷಿ ಶಿವು ಅವರು ಇನ್ನೂ ಎಲ್ಲರ ಮುಂದೆ ಪ್ರೀತಿ ವಿಷಯ ಹೇಳಿಕೊಳ್ಳೋದು ಬಾಕಿ ಇದ್ದಂತಿದೆ. ಹೌದು, ಖುಷಿ ಶಿವು ಅವರ ಜನ್ಮದಿನದ ಪ್ರಯುಕ್ತ ದಿಲೀಪ್ ಶೆಟ್ಟಿ ಅವರು ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡು, ವಿಶೇಷವಾಗಿ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.
ದಿಲೀಪ್ ಶೆಟ್ಟಿ ಶುಭಾಶಯ ಹೀಗಿತ್ತು!
“ನೀನಾದೆನಾ ಧಾರಾವಾಹಿಯಿಂದ ನಮ್ಮ ಜರ್ನಿ ಶುರುವಾಯಿತು. ಅದ್ಭುತವಾದ ನಟಿ, ಒಳ್ಳೆಯ ವ್ಯಕ್ತಿ, ಅದೆಲ್ಲದ್ದಕ್ಕಿಮತ ಜಾಸ್ತಿ ನನ್ನ ಜೀವನದ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಿರೋದು ನಿಜಕ್ಕೂ ಪುಣ್ಯ. ನಿನ್ನನ್ನು ಈ ಪ್ರಪಂಚಕ್ಕೆ ಕರೆತಂದಿದ್ದಕ್ಕೆ ವಿಧಿಗೆ ಧನ್ಯವಾದಗಳು. ಇಂದು ನಿನ್ನ ವಿಶೇಷ ದಿನ, ಖುಷಿ, ಪ್ರೀತಿ, ಯಶಸ್ಸು ಸಿಗಲಿ ಎಂದು ಹಾರೈಸುವೆ. ನಿನ್ನ ಈ ಜನ್ಮದಿನ, ಖುಷಿಯ ಕ್ಷಣಗಳನ್ನು ನೀಡಲಿ ಎಂದು ಹಾರೈಸುವೆ. ನೀನು ಸ್ಟಾರ್ ನಟಿಯಾಗಿ ನಿನ್ನನ್ನು ನೋಡಲು ಕಾಯುತ್ತಿದ್ದೇನೆ, ಅದಕ್ಕೆ ನೀನು ಅರ್ಹಳಾಗಿದ್ದೀಯಾ” ಎಂದು ನಟ ದಿಲೀಪ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಗೋವಾ ಟ್ರಿಪ್ ಹೋಗಿದ್ದ ಜೋಡಿ!
ಅಂದಹಾಗೆ ಈ ಹಿಂದೆ ತೆಲುಗು ಡ್ಯಾನ್ಸ್ ಶೋನಲ್ಲಿ ದಿಲೀಪ್ ಶೆಟ್ಟಿ ಭಾಗವಹಿಸಿದ್ದರು. ಆಗ ಖುಷಿ ಶಿವು ಅವರು ಅತಿಥಿಯಾಗಿ ಹೋಗಿದ್ದುಂಟು. ಆಗಲೂ ಇವರು ಲವ್‌ನಲ್ಲಿದ್ದಾರೆ ಎಂದು ಅಲ್ಲಿದ್ದವರು ಮಾತನಾಡಿಕೊಂಡಿದ್ದುಂಟು, ಕಾಲೆಳೆದಿದ್ದಿದೆ. ಇನ್ನು ‘ಕ್ವಾಟ್ಲೆ ಕಿಚನ್’ ಶೋನಲ್ಲಿ ಕೂಡ ದಿಲೀಪ್ ಶೆಟ್ಟಿ ಜೊತೆಗೆ ಖುಷಿ ಕಾಣಿಸಿಕೊಂಡಿದ್ದಿದೆ. ಖುಷಿ ಶಿವು ಕುಟುಂಬದ ಜೊತೆಗೆ ದಿಲೀಪ್ ಶೆಟ್ಟಿ ಗೋವಾ ಟ್ರಿಪ್ ಹೋಗಿದ್ದರು.
ವಿಶೇಷ ವ್ಯಕ್ತಿ!
ಸಾಕಷ್ಟು ವೇದಿಕೆಗಳಲ್ಲಿ ಇವರ ಲವ್ ಬಗ್ಗೆ ಕೇಳಿದಾಗಲೂ ಕೂಡ, “ನಾವು ಸ್ನೇಹಿತರು, ಇಬ್ಬರು ತುಂಬ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ” ಎಂದು ಹೇಳಿದ್ದರು. ಈಗ ದಿಲೀಪ್ ಶೆಟ್ಟಿ ಅವರು ವಿಶೇಷ ವ್ಯಕ್ತಿ ಎಂದು ಅಡ್ರೆಸ್ ಮಾಡಿರೋದು ಸಾಕಷ್ಟು ಕುತೂಹಲ ಮೂಡಿಸಿದೆ. ಮುಂದಿನ ದಿನಗಳಲ್ಲಿ ಪ್ರೀತಿ ವಿಷಯವನ್ನು ಹೇಳಿಕೊಳ್ಳಬಹುದು ಎಂದು ವೀಕ್ಷಕರು ಕಾಯುತ್ತಿದ್ದಾರೆ. ಅಂದಹಾಗೆ ದಿಲೀಪ್ ಶೆಟ್ಟಿ ಅವರು ‘ವಿದ್ಯಾ ವಿನಾಯಕ’, ‘ಕಸ್ತೂರಿ ನಿವಾಸ’ ಧಾರಾವಾಹಿಯಲ್ಲಿ ನಟಿಸಿದ್ದರು. ಖುಷಿ ಶಿವು ಅವರು ‘ಪಾರು’, ‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ಕೂಡ ನಟಿಸಿದ್ದರು. ಅಂದಹಾಗೆ ಖುಷಿ ಶಿವು ಅವರು ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ಸೀರಿಯಲ್ ಸೆಟ್‌ನಲ್ಲಿ ಅಗತ್ಯ ಸೌಕರ್ಯಗಳನ್ನು ನೀಡದಿದ್ದರ ಬಗ್ಗೆ ಮಾತನಾಡಿದ್ದರು.
