ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನನ್ನರಸಿ ರಾಧೆ ನಟಿ ಕೌಸ್ತುಭ ಮಣಿ
ನನ್ನರಸಿ ರಾಧೆ ಸೀರಿಯಲ್ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಇಂಚರಾ ಫೇಮ್ ಕೌಸ್ತುಭ ಮಣಿ, ಸಿದ್ಧಾಂತ್ ಸತೀಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನನ್ನರಸಿ ರಾಧೆ ಸೀರಿಯಲ್ ನಲ್ಲಿ ಇಂಚರಾ ಆಗಿ ತನ್ನ ಮುದ್ದು ಮುದ್ದು ಮಾತಿನಿಂದ ಕನ್ನಡಿಗರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ನಟಿ ಕೌಸ್ತುಭ ಮಣಿ (Kasutubha Mani) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹೌದು ನಟಿ ಕೌಸ್ತುಭ ಮಣಿ, ಏಪ್ರಿಲ್ 26 ರಂದು ಸಿದ್ಧಾಂತ್ ಸತೀಶ್ (Siddanth Sathish) ಜೊತೆ ಸಾಂಪ್ರಾದಾಯಿಕ ವಿಧಿವಿಧಾನಗಳ ಮೂಲಕ ಸಪ್ತಪದಿ ತುಳಿದಿದ್ದು, ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
ಕುಟುಂಬಸ್ಥರು, ಆತ್ಮೀಯರ ಸಮ್ಮುಖದಲ್ಲಿ ಸಿದ್ಧಾಂತ್ ಸತೀಶ್ ಹಾಗೂ ಕೌಸ್ತುಭ ಮಣಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಕಳೆದ ಕೆಲದಿನಗಳಿಂದ ಕೌಸ್ತುಭ ಪ್ರಿವೆಡ್ಡಿಂಗ್ ಫೋಟೋ ಶೂಟ್, ಮೆಹೆಂದಿ ಫೋಟೋಗಳು ಸಹ ವೈರಲ್ ಆಗುತ್ತಿದ್ದವು.
ತಾಳಿ ಕಟ್ಟುವ ವೇಳೆ ಕೌಸ್ತುಭ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ವರ ಸಿದ್ಧಾಂತ್ ಪಂಚೆ ಮತ್ತು ಶಲ್ಯ ಧರಿಸಿದ್ದಾರೆ. ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆದ ಮದುವೆಯಲ್ಲಿ ಕುಟುಂಬಸ್ಥರು, ಆಪ್ತರಷ್ಟೇ ಭಾಗಿಯಾಗಿದ್ದರು.
ಚಾಪರ್ ನಲ್ಲಿ ಜೋಡಿಗಳಿಬ್ಬರು ಬಂದಿಳಿಯುವ, ಲಿಪ್ ಟು ಲಿಪ್ ಕಿಸ್ ಮಾಡುವ ಪ್ರಿ ವೆಡ್ಡಿಂಗ್ ಫೋಟೋಗಳು (pre wedding photoshoot) ಭಾರಿ ವೈರಲ್ ಆಗಿದ್ದವು. ಇದೀಗ ತಮಿಳು ಬ್ರಾಹ್ಮಣಿ ಶೈಲಿಯಲ್ಲಿ ಮದುಮಗಳಾಗಿ ಸಿಂಗಾರಗೊಂಡ ಕೌಸ್ತುಭ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ.
ನೀಲಿ ಬಣ್ಣದ ಪ್ಲೇನ್ ಬಾರ್ಡರ್ ಇರುವಂತಹ ಹಸಿರು ಬಣ್ಣದ ಸೀರೆಯುಟ್ಟಿರುವ ಕೌಸ್ತುಭ, ಅದಕ್ಕೊಪ್ಪುವ ಟೆಂಪಲ್ ಜ್ಯುವೆಲ್ಲರಿಯಲ್ಲಿ ಮಿಂಚಿದ್ದಾರೆ. ಶುಭಾಶಯ ತಿಳಿಸಿದ ಅಭಿಮಾನಿಗಳು ದೇವತೆ ತರ ಕಾಣಿಸ್ತಿದ್ದೀರಿ ಮೇಡಂ ಎಂದು ಕಾಮೆಂಟ್ ಮಾಡಿದ್ದಾರೆ.
ಕೌಸ್ತುಭ ಮಣಿ ನನ್ನರಸಿ ರಾಧೆ (Nannarasi Radhe) ಸೀರಿಯಲ್ ಮೂಲಕ ನಟನೆಗೆ ಕಾಲಿಟ್ಟರು, ಇದು ಮುಗಿದ ಬಳಿಕ ತೆಲುಗು ಸಿರಿಯಲ್ ಗಳಲ್ಲೂ ನಾಯಕಿಯಾಗಿ ನಟಿಸಿದ್ದರು. ನಂತರ ಕನ್ನಡದಲ್ಲಿ ಗೌರಿ ಶಂಕರ ಸೀರಿಯಲ್ ನಲ್ಲಿ ಕೆಲದಿನಗಳ ಕಾಲ ಗೌರಿಯಾಗಿ ನಟಿಸಿದ್ದು, ವಿವಾಹ ನಿಶ್ಚಯವಾಗುತ್ತಿದ್ದಂತೆ ಸೀರಿಯಲ್‌ನಿಂದ ಹೊರ ನಡೆದಿದ್ದರು.
ಇನ್ನು ಕೌಸ್ತುಭ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇವರು ರಾಮಾಚಾರಿ 2.0 ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ ಶಿವಣ್ಣ ಆಭಿನಯದ, ಅರ್ಜುನ್ ಜನ್ಯ ನಿರ್ದೇಶನದ ‘45’ ಸಿನಿಮಾಕ್ಕೂ ಕೌಸ್ತುಭ ನಾಯಕಿಯಾಗಿದ್ದರು.