ನನ್ನ ದೇವ್ರು ಧಾರಾವಾಹಿ ನಾಯಕನ ಪಾತ್ರದ ಅಂತ್ಯ!…. ಬಿಗ್ ಬಾಸ್ ಆರಂಭಕ್ಕೂ ಮುನ್ನ ಮುಗಿಯುತ್ತಾ ಸೀರಿಯಲ್?
ನನ್ನ ದೇವರು ಧಾರಾವಾಹಿಯಲ್ಲಿ, ನಾಯಕನ ಪಾತ್ರವನ್ನು ಇದ್ದಕ್ಕಿದ್ದಂತೆ ಅಂತ್ಯಗೊಳಿಸಿದ್ದು, ಬಿಗ್ ಬಾಸ್ ಆರಂಭಕ್ಕೂ ಮುನ್ನ ಸೀರಿಯಲ್ ಮುಕ್ತಾಯವಾಗ್ತಿದ್ಯಾ ಎಂದು ಕೇಳ್ತಿದ್ದಾರೆ ವೀಕ್ಷಕರು.
ಮಯೂರಿ ಕ್ಯಾತರಿ (Mayuri Khyatari) ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ನನ್ನ ದೇವರು ಶುರುವಾಗಿ ತಿಂಗಳೊಳಗೆ ವೀಕ್ಷಕರಿಗೆ ಬೋರ್ ಹಿಡಿಸಿ ಬಿಟ್ಟಿದೆ. ನಿಧಾನಗತಿಯ ಕಥೆ, ಮಯೂರಿಯ ಮುಗಿಯದ ಗೋಳು, ಎಲ್ಲವೂ ವೀಕ್ಷಕರಿಗೆ ನೋಡಿ ನೋಡಿ ಸಾಕಾಗಿದ್ದು, ಧಾರಾವಾಹಿಯಲ್ಲಿ ಆದಷ್ಟು ಬೇಗ ಮುಕ್ತಾಯ ಮಾಡಿ ಅಂತಿದ್ದಾರೆ.
ಮಯೂರಿ ಊರಿನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಬಡ ನರ್ಸ್ ಆಗಿ ನಟಿಸುತ್ತಿದ್ದಾರೆ . ಊರಿಗೆ ಊರೇ ಮೆಚ್ಚುವ ಉದ್ಯಮಿ ಸಚ್ಚಿದಾನಂದ ಅಂದ್ರೆ ಮಯೂರಿಗೆ ದೇವರ ಸಮಾನ. ಅವರಿಗೆ ಯಾವುದೇ ಕಷ್ಟ ಬಂದ್ರು ಅದನ್ನ ತನ್ನ ಮೇಲೆ ಹಾಕಿ ಯಜಮಾನರನ್ನು ರಕ್ಷಿಸುವ ಹುಡುಗಿ ಮಯೂರಿ.
ಸಚ್ಚಿದಾನಂದನ ಇಪ್ಪತ್ತು ವರ್ಷದ ಮಗಳಿಗೆ ಅಪ್ಪನನ್ನು ಕಂಡರೆ ಇಷ್ಟವಿಲ್ಲ. ತನ್ನಿಂದ ದೂರಾಗಿ ಬದುಕುತ್ತಿರುವ ಮಗಳ ವಿಶ್ವಾಸವನ್ನು ಮರಳಿ ಗಳಿಸಿಕೊಳ್ಳಲು ಬಯಸುತ್ತಿರುವ ಸಚ್ಚಿದಾನಂದನ ಬದುಕಲ್ಲಿ ಮಯೂರಿಯ ಪ್ರವೇಶವಾಗಿ ಏನೆಲ್ಲಾ ಬದಲಾವಣೆಯಾಗುತ್ತೆ ಅನ್ನೋದು ಸೀರಿಯಲ್ ಮೂಲ ಕಥೆಯಾಗಿತ್ತು.
ಆದರೆ ದಿನಕಳೆದಂತೆ ಸೀರಿಯಲ್ ಹಳಿ ತಪ್ಪಲು ಆರಂಭಿಸಿದೆ. ಕಥೆಯೇ ಬದಲಾಗಿದೆ. ಕಥೆ ಯಾವಾಗ ಹೇಗೆ ಬದಲಾಗ್ತಿದೆ ಅನ್ನೋದೆ ತಿಳಿಯದೆ ವೀಕ್ಷಕರು ಕನ್ ಫ್ಯೂಸ್ ಆಗಿದ್ದಾರೆ. ಇದ್ದಕ್ಕಿದ್ದಂತೆ ಕಥೆಯ ನಾಯಕನನ್ನೆ ಸಾಯಿಸಿ ಬಿಟ್ಟಿದ್ದಾರೆ, ಇದ್ದಕ್ಕಿದ್ದಂತೆ ಹೇಳ್ತಿದ್ದಾರೆ ಮಯೂರಿ ಮತ್ತು ಸಚ್ಚಿದಾನಂದ ಮದುವೆ ಆಗಿದೆ ಅಂತ, ಎರಡು ಮೂರು ಸಲ ಮಗಳ ಮುಖ ತೋರಿಸಿ, ಆಮೇಲೆ ಆಕೆಯ ಕಥೆಯೇ ಇಲ್ಲ. ಇದೆಲ್ಲಾ ನೋಡಿ ವೀಕ್ಷರು ಬೇಸರ ವ್ಯಕ್ತಪಡಿಸಿದ್ದಾರೆ.
ಮಯೂರಿ ಆಕ್ಟಿಂಗ್ ರೀತಿ ಬದಲಾಯಿಸಿಕೊಳ್ಳಬೇಕು ತರುಣ್ ಅಮ್ಮ, ಸ್ವಾತಿ ಅವರೆಲ್ಲ ಎಷ್ಟು ಚೆನ್ನಾಗಿ ನಟಿಸ್ತಾರೆ. ಮಯೂರಿ ನಟನೆ ತುಂಬಾನೆ ನಿಧಾನವಾಗಿದೆ. ಸಚ್ಚಿದಾನಂದ ನ ಮಗಳು ಸಾಕ್ಷಿ ಎಲ್ಲಿದ್ದಾಳೆ. ಬರಿ 2,3 ಬಾರಿ ಮುಖ ದರ್ಶನ ಆಯ್ತು ಅವರ ಕ್ಯಾರೆಕ್ಟರ್ ಕ್ಲೋಸ್ ಮಾಡಿಬಿಟ್ರು. ಈ ಧಾರಾವಾಹಿ ಸ್ಟೋರಿ ಏನು ಅಂತಾನೆ ಅರ್ಥ ಆಗ್ತಿಲ್ಲ ಎಂದಿದ್ದಾರೆ ಜನ.
ಇನ್ನು ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲೂ ನನ್ನ ದೇವ್ರು ತಂಡ ಬಂದೇ ಇಲ್ಲ, ಇದನ್ನೂ ಕೂಡ ವೀಕ್ಷಕರು ಪ್ರಶ್ನಿಸಿದ್ದಾರೆ. ಎಲ್ಲಾ ಸೀರಿಯಲ್ ಇರೋವಾಗ ಯಾಕೆ ಈ ಸೀರಿಯಲ್ ತಂಡ ಮಾತ್ರ ಯಾಕೆ ಬರಲಿಲ್ಲ. ಸೀರಿಯಲ್ ಮುಗಿಸ್ತಿದ್ದೀರಿ ಅಂತ ಬಂದಿಲ್ವಾ ಎಂದು ಪ್ರಶ್ನಿಸಿದ್ದಾರೆ.
ಇನ್ನೇನು ಬಿಗ್ ಬಾಸ್ ಸೀಸನ್ 11 (Bigg Boss Season 11) ಶುರುವಾಗಲಿದೆ. ಹಾಗಾಗಿ ಕೆಲವೊಂದು ಸೀರಿಯಲ್ ಗಳು ಮುಕ್ತಾಯದ ಹಂತ ತಲುಪಿದೆ. ಅಂತರಪಠ, ಕೆಂಡಸಂಪಿಗೆ ಮುಕ್ತಾಯವಾಗಲಿದೆ. ಅದೇ ರೀತಿ ನನ್ನ ದೇವ್ರು ಕೂಡ ಮುಕ್ತಾಯವಾಗಲಿದ್ಯಾ? ಹಾಗಾಗಿಯೇ ಪಾತ್ರಗಳನ್ನ ಮುಗುಸ್ತಿದ್ದಾರ ಅಂತ ಕೇಳ್ತಿದ್ದಾರೆ ಜನ.