- Home
- Entertainment
- TV Talk
- ನಂದಗೋಕುಲ ಧಾರಾವಾಹಿಯಲ್ಲಿ ಅಣ್ಣನ ಮದುವೆ, ರಿಯಲ್ ಆಗಿ ತಂಗಿ ಮದುವೆ; ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ!
ನಂದಗೋಕುಲ ಧಾರಾವಾಹಿಯಲ್ಲಿ ಅಣ್ಣನ ಮದುವೆ, ರಿಯಲ್ ಆಗಿ ತಂಗಿ ಮದುವೆ; ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ!
ಇತ್ತೀಚೆಗೆ ನಂದಗೋಕುಲ ಧಾರಾವಾಹಿಯಲ್ಲಿ ಮೂರನೇ ಮಗ ಮಾಧವನ ಮದುವೆ ಆಗಿದೆ. ನಟಿ ಕೃಷ್ಣಪ್ರಿಯಾ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಅಮೃತಾ ರೂಪೇಶ್ ಕೂಡ ಶುಭಾಶಯ ತಿಳಿಸಿದ್ದಾರೆ.

ರಿಯಲ್ ಲೈಫ್‌ನಲ್ಲಿ ಮದುವೆ
ನಂದಕುಮಾರ್- ಗಿರಿಜಾ ದಂಪತಿಯ ಪುತ್ರಿ ರಕ್ಷಾ ಪಾತ್ರದಲ್ಲಿ ಕೃಷ್ಣಪ್ರಿಯಾ ಅವರು ನಟಿಸುತ್ತಿದ್ದಾರೆ. ಇವರು ರಿಯಲ್ ಲೈಫ್‌ನಲ್ಲಿ ಮದುವೆ ಆಗಿದ್ದಾರೆ. ಅತ್ತ ಈ ಧಾರಾವಾಹಿ ನಟ ಅಭಿಷೇಕ್ ದಾಸ್ ಕೂಡ ತಂಗಿ ಮದುವೆ ಖುಷಿಯಲ್ಲಿದ್ದಾರೆ.
ಕೃಷ್ಣಪ್ರಿಯಾ ಮದುವೆ ಆಗಿದ್ದು ಯಾರನ್ನು?
ಕೃಷ್ಣಪ್ರಿಯಾ ಭಟ್ ಅವರು ಅಮೋಘ್ ಕುಂತಿನಿ ಅವರನ್ನು ಮದುವೆಯಾಗಿದ್ದಾರೆ. ಅಮೋಘ್ ಅವರು ಮ್ಯಾಕೆನಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಯಕ್ಷಗಾನ, ಫೋಟೋಗ್ರಫಿ ಎಂದರೆ ತುಂಬ ಇಷ್ಟವಂತೆ.
ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ರು
ನನ್ನ ಬಿಟ್ಟೋಗಬೇಡ ಎನ್ನುವ ಮ್ಯೂಸಿಕ್ ವಿಡಿಯೋದಲ್ಲಿ ಕೂಡ ಕೃಷ್ಣಪ್ರಿಯಾ ಕಾಣಿಸಿಕೊಂಡಿದ್ದಾರೆ.
ಕಲಾವಿದರು ಭಾಗಿ
ಕೃಷ್ಣಪ್ರಿಯಾ ಭಟ್ ಹಾಗೂ ಅಮೋಘ್ ಮದುವೆಯಲ್ಲಿ ನಂದಗೋಕುಲ ಧಾರಾವಾಹಿ ಕಲಾವಿದರು ಭಾಗಿಯಾಗಿದ್ದಾರೆ. ಅನೇಕರು ಈ ಜೋಡಿಗೆ ಶುಭ ಹಾರೈಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

