ನಮ್ರತಾ ಗೌಡ ಅಪ್ಪ, ಅಮ್ಮನ ಜೊತೆ ವೆಕೇಶನ್ ಮೂಡಲ್ಲಿದ್ರೆ, ಫ್ಯಾನ್ಸ್‌ಗೆ ಮದ್ವೆ ಚಿಂತೆ!
ಲೋಕಸಭಾ ಚುನಾವಣೆಗೂ ಮುನ್ನ ಕಿರುತೆರೆ ನಟಿ ನಮ್ರತಾ ಗೌಡ ತನ್ನ ಅಪ್ಪ, ಅಮ್ಮನ ಜೊತೆ ಸಕಲೇಷ್ಪುರ ತೆರಳಿ ಪ್ರಕೃತಿ ನಡುವೆ ಎಂಜಾಯ್ ಮಾಡಿದ್ದಾರೆ.
ಬಿಗ್ ಬಾಸ್ ಮೂಲಕ ಭಾರಿ ಸದ್ದು ಮಾಡಿದ್ದ ಕನ್ನಡ ಕಿರುತೆರೆ ನಟಿ ನಮ್ರತಾ ಗೌಡ (Namratha Gowda), ಎಲೆಕ್ಷನೂ ಮುನ್ನ ತಮ್ಮ ಎಲ್ಲಾ ಕೆಲಸದಿಂದ ಬ್ರೇಕ್ ತೆಗೆದುಕೊಂಡು, ಮಲೆನಾಡಿನ ಸುಂದರ ತಾಣದಲ್ಲಿ ವೆಕೇಶನ್ ಎಂಜಾಯ್ ಮಾಡಿಕೊಂಡು ಬಂದಿದ್ದಾರೆ.
ಪುಟ್ಟ ಗೌರಿ ಮದುವೆ , ನಾಗಿಣಿ 2, ಸೀರಿಯಲ್ಸ್ ಮೂಲಕ ಜನಮನ ಗೆದ್ದ ನಮ್ರತಾ ಗೌಡ, ಬಿಗ್ ಬಾಸ್ ಸೀಸನ್ 10 (Bigg Boss season 10) ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದರು. ಅಲ್ಲಿಂದ ಹೊರ ಬಂದ ಮೇಲೆ ನಮ್ರತಾ ತುಂಬಾನೆ ಬ್ಯುಸಿಯಾಗಿದ್ದರು.
ಹೌದು ಬಿಗ್ ಬಾಸ್‌ನಿಂದ ಹೊರ ಬಂದಮೇಲೆ ನಮ್ರತಾ ಜಾಹೀರಾತುಗಳ ಶೂಟ್ ನಲ್ಲಿ, ಇತರೆ ಕೆಲಸಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಇದೀಗ ಎಲ್ಲದರದಿಂದ ಬ್ರೇಕ್ ತೆಗೆದುಕೊಂಡು ತಂದೆ ತಾಯಿ ಜೊತೆ ಪ್ರಕೃತಿ ನಡುವೆ ಸಮಯ ಕಳೆದಿದ್ದಾರೆ.
ಸಕಲೇಶಪುರದ ಹಸಿರುಗಿರಿಸಿರಿಯ ನಡುವಿನ ಪಶ್ಚಿಮ ಘಟ್ಟಗಳಲ್ಲಿ ಎದ್ದು ನಿಂತಿರುವ ತೃಶ್ವಂ ತಪೋವನ ಎನ್ನುವ ರೆಸಾರ್ಟ್ ನಲ್ಲಿ ಕೆಲ ದಿನಗಳ ಕಾಲ ನಮ್ರತಾ ಗೌಡ ಉಳಿದಿದ್ದು, ಅಲ್ಲಿನ ಪ್ರಕೃತಿ ನಡುವೆ ಎಂಜಾಯ್ ಮಾಡಿದ್ದಾರೆ.
ಇನ್ನು ನಮ್ರತಾ ತಮ್ಮೆಲ್ಲಾ ಟೆನ್ಶನ್ ಬಿಟ್ಟು ವೆಕೇಶನ್ ಎಂಜಾಯ್ ಮಾಡ್ತಿದ್ರೆ ಅಭಿಮಾನಿಗಳಿಗೆ ಮಾತ್ರ ಅವರ ಮದುವೆ ಚಿಂತೆ ಕಾಡುತ್ತಿದೆ, ಕಾಮೆಂಟ್ ಸೆಕ್ಷನ್ ಪೂರ್ತಿಯಾಗಿ ನೀವು ಕಾರ್ತಿಕ್ ಮಹೇಶ್ (Karthik Mahesh) ಅವರನ್ನು ಮದುವೆಯಾಗಿ, ನೀವು ಸ್ನೇಹಿತ್ ರನ್ನು ಮದುವೆಯಾಗಿ ಚೆನ್ನಾಗಿರ್ತೀರಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಇನ್ನು ಹಲವು ಫ್ಯಾನ್ಸ್ ಕಾಮೆಂಟ್ ಮಾಡಿ ಇಷ್ಟೊಂದು ಸಪೋರ್ಟ್ ಮಾಡೋ ಅಮ್ಮ ಅಪ್ಪನ ಜೊತೆ ಎಂಜಾಯ್ ಮಾಡ್ತಿರೋ ನೀವೇ ಗ್ರೇಟ್, ತುಂಬಾನೆ ಮುದ್ದಾಗಿ ಕಾಣಿಸ್ತಿದ್ದೀರಾ, ದೇವತೆ, ಸುಂದರಿ, ಬ್ಯೂಟಿಫುಲ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಕೆಲದಿನಗಳ ಹಿಂದಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ನಮ್ರತಾ ಗೌಡ ಆ ದಿನ ದುಬಾರಿ ಕಾರು ಖರೀದಿಸುವ ಮೂಲಕ ನಟಿ ಸಂಭ್ರಮಿಸಿದ್ದರು, ಜೊತೆಗೆ ತಮ್ಮ ಆಪ್ತ ಸ್ನೇಹಿತರು, ಬಿಗ್ ಬಾಸ್ ಗೆಳೆಯರಿಗೆ ದೊಡ್ಡದಾಗಿ ಪಾರ್ಟಿ ಕೂಡ ನೀಡಿದ್ದರು.