Birthday Bash: ಬಿಳಿ ಸೀರೆಯಲ್ಲಿ ಅಪ್ಸರೆಯಂತೆ ಮಿಂಚಿದ ನಮ್ರತಾ ಗೌಡ
ನಾಗಿಣಿ 2 ಸೀರಿಯಲ್ ನಟಿ ನಮ್ರತಾ ಗೌಡ ಬಿಳಿ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದು, ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದಾರೆ. ಬನ್ನಿ ನಮ್ರತಾ ಫೋಟೋ ಜಲಕ್ ನೋಡೋಣ.

ಕನ್ನಡ ಕಿರುತೆರೆ ನಟಿ ನಮ್ರತಾ ಗೌಡ (serial actress Namratha Gowda) ಅವರಿಗೆ ಯಾವುದೇ ಇಂಟ್ರಡಕ್ಷನ್ ಬೇಕಾಗಿಲ್ಲ. ಯಾಕಂದ್ರೆ ಕನ್ನಡ ಕಿರುತೆರೆಗೆ ಬಾಲನಟಿಯಾಗಿ ಎಂಟ್ರಿ ಕೊಟ್ಟ ನಮ್ರತಾ ಗೌಡ, ಇಲ್ಲಿವರೆಗೆ ಹಲವು ಸೀರಿಯಲ್ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಮನೆ ಮಾತಾಗಿದ್ದಾರೆ.
ಕನ್ನಡ ಮನರಂಜನಾ ಲೋಕದ ಗ್ಲಾಮರ್ ಬೊಂಬೆ (glamour doll) ನಮ್ರತಾ ಎಂದರೂ ತಪ್ಪಾಗಲಾರದು. ಪ್ರತಿ ಬಾರಿ ತಮ್ಮ ವಿಭಿನ್ನ, ಗ್ಲಾಮರಸ್, ಟ್ರೆಡೀಶನಲ್ ಫೋಟೋಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಈಗ ಬಿಳಿ ಸೀರೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಸಖತ್ತಾಗಿ ಕಾಣಿಸಿಕೊಂಡಿದ್ದಾರೆ.
ತಮ್ಮ ಹುಟ್ಟು ಹಬ್ಬದ (birthday party) ಹಿನ್ನೆಲೆಯಲ್ಲಿ ನಮ್ರತಾ ಈ ಸುಂದರ ಬಿಳಿ ಸೀರೆಯುಟ್ಟು ಪಾರ್ಟಿ ಮಾಡಿದ್ದು, ತುಂಬಾನೆ ಸಕತ್ತಾಗಿ ಕಾಣಿಸುತ್ತಿದ್ದಾರೆ. ವೈಟ್ ಥೀಮ್ ನ ಬರ್ತ್ ಡೇ ಪಾರ್ಟಿಯಲ್ಲಿ ಕಿರುತೆರೆಯ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಸೇರಿ ಜೋರಾಗಿಯೇ ಬರ್ತ್ ಡೇ ಆಚರಿಸಿದ್ದಾರೆ.
ನಾಗಿಣಿ ನಟಿ ಸಾಂಪ್ರದಾಯಿಕ ಲುಕ್ಕಿನಲ್ಲೂ ಸೊಗಸಾಗಿ ಕಾಣುತ್ತಾರೆ. ಬಿಳಿ ಡಿಸೈನರ್ ಸೀರೆಯುಟ್ಟ ನಮ್ರತಾ ತಮ್ಮ ಇತ್ತೀಚಿನ ಅವತಾರದಿಂದ ಗಮನ ಸೆಳೆಯುತ್ತಿದ್ದಾರೆ. ನಮ್ರತಾ ಸಂಪೂರ್ಣ ಬಿಳಿ ಡಿಸೈನರ್ ಸೀರೆಯನ್ನು ಧರಿಸಿದ್ದು, ಲುಕ್ ಅನ್ನು ಪೂರ್ಣಗೊಳಿಸಲು ನಟಿ ಪರ್ಲ್ ವರ್ಕ್ ಇರೋ ಬ್ಲೌಸ್ ಧರಿಸಿದ್ದಾರೆ.
ನಮ್ರತಾ ಗೌಡ ಬರ್ತ್ ಡೇ ಪಾರ್ಟಿಗೆ 'ಗಟ್ಟಿಮೇಳ' ಧಾರಾವಾಹಿಯ ನಟ ಮತ್ತು ಪುಟ್ಟ ಗೌರಿಯ ಮದುವೆ ಸೀರಿಯಲ್ ನಲ್ಲಿ ನಮೃತಾ ಜೋಡಿಯಾಗಿ ನಟಿಸಿದ ರಕ್ಷ್, ಬಿಗ್ ಬಾಸ್ ಖ್ಯಾತಿಯ ಕಿಶನ್ ಬಿಳಗಲಿ, ಸಿಂಧು ಕಲ್ಯಾಣ್, ಐಶ್ವರ್ಯಾ ಸಿಂಧೋಗಿ, ಚಂದನ ಮಹಾಲಿಂಗ ಸೇರಿ ಅನೇಕ ಸ್ನೇಹಿತರು ಮತ್ತು ಕುಟುಂಬಸ್ಥರು ಭಾಗಿಯಾಗಿದ್ದರು.
ಕೃಷ್ಣ ರುಕ್ಮಿಣಿ ಸೀರಿಯಲ್ ಮೂಲಕ ನಟನೆ ಆರಂಭಿಸಿದ ನಮ್ರತಾ ಗೌಡ ನಂತರ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ ಡ್ಯಾನ್ಸಿಂಗ್ ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನಾಗಿಣಿ 2 ಸೀರಿಯಲ್ ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಾಗಿಣಿ ಸೀರಿಯಲ್ ನಲ್ಲಿ ನಮ್ರತಾ ಇಛ್ಛಾಧಾರಿ ನಾಗಿಣಿಯಾಗಿ ಕಾಣಿಸಿಕೊಂಡಿದ್ದಾರೆ, ಡ್ಯಾನ್ಸಿಂಗ್, ಟ್ರಾವೆಲ್ ಮೊದಲಾದ ಹವ್ಯಾಸ ಹೊಂದಿರುವ ನಮ್ರತಾ ಉತ್ತಮ ನಟಿ ಅನ್ನೋದನ್ನು ಈಗಾಗಲೇ ಪ್ರೂವ್ ಮಾಡಿದ್ದಾರೆ, ಇನ್ನು ಮುಂದೆಯೂ ಅವರಿಗೆ ಉತ್ತಮ ಪಾತ್ರಗಳು ಸಿಗಲಿ ಎಂದು ಹಾರೈಸೋಣ.