ಫ್ರೆಶ್ ಹೂವು, ಹಳೆ ಪ್ರೀತಿ ಬೇಕಂತೆ… ಏನಾಗಿದೆ ಬಿಗ್ ಬಾಸ್ ಚೆಲುವೆ ನಮ್ರತಾ ಗೌಡಂಗೆ!
ಬಿಗ್ ಬಾಸ್ ಚೆಲುವೆ -ಕಿರುತೆರೆ ನಟಿ ನಮ್ರತಾ ಗೌಡ ಸ್ವಲ್ಪ ಫ್ರೆಶ್ ಹೂವುಗಳು ಮತ್ತು ಹಳೆ ಪ್ರೀತಿ ಕೊಡಿ ಅಂತ ಕೇಳ್ತಿದ್ದಾರೆ. ಅಷ್ಟಕ್ಕೂ ನಟಿ ಹೀಗೆ ಅಂದಿದ್ದು ಯಾಕೆ? ನೊಡೋಣ.

ಕನ್ನಡ ಕಿರುತೆರೆಯಲ್ಲಿ ಬಾಲನಟಿಯಾಗಿ ಮಿಂಚಿ, ಬಳಿಕ ಪುಟ್ಟ ಗೌರಿಯ ಮದುವೆ, ನಾಗಿಣಿ ಸೀರಿಯಲ್ ಮೂಲಕ ಜನರನ್ನು ರಂಜಿಸಿದ ಬೆಡಗಿ ನಮ್ರತಾ ಗೌಡ (Namratha Gowda). ಇವರಿಗೆ ಮತ್ತಷ್ಟು ಫೇಮ್ ತಂದುಕೊಟ್ಟಿದ್ದು ಬಿಗ್ ಬಾಸ್.
ಬಿಗ್ ಬಾಸ್ ಸೀಸನ್ 10ರಲ್ಲಿ (Bigg Boss Season 10) ಸ್ಪರ್ಧಿಯಾಗಿ ಭಾಗವಹಿಸಿ ಜನಮನ ಗೆದ್ದಿದ್ದ ಚೆಲುವೆ ನಮ್ರತಾ ಗೌಡ, ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೊ ಶೂಟ್, ವಿಡಿಯೋ, ಡ್ಯಾನ್ಸ್, ರೀಲ್ಸ್ ಗಳ ಮೂಲಕವೇ ಸುದ್ದಿಯಲ್ಲಿರುತ್ತಾರೆ.
ಹೆಚ್ಚಾಗಿ ಕಿಶನ್ ಬಿಳಗಲಿ ಜೊತೆ ವಿವಿಧ ಹಾಡುಗಳಿಗೆ ಹೆಜ್ಜೆಹಾಕುವ ವಿಡೀಯೋ ಶೂಟ್ ಮಾಡಿ ಶೇರ್ ಮಾಡುತ್ತಿರುತ್ತಾರೆ. ಇವರಿಬ್ಬರ ಡ್ಯಾನ್ಸ್ ಮೆಚ್ಚದವರೇ ಇರಲಾರರು, ಅಷ್ಟೊಂದು ಮುದ್ದಾಗಿರುತ್ತೆ ವಿಡಿಯೋ.
ಇದೀಗ ನಮ್ರತಾ ತಮ್ಮ ಇನ್’ಸ್ಟಾಗ್ರಾಂನಲ್ಲಿ ರೇಡಿಯಂ ಗ್ರೀನ್ ಬಣ್ಣದ ಫುಲ್ ನೆಕ್ ಫುಲ್ ಸ್ಲೀವ್ಸ್ ಧರಿಸಿ ಫೋಟೊ ಶೂಟ್ ಮಾಡಿಸಿ, ಶೇರ್ ಮಾಡಿದ್ದು, ನಟಿ ಈ ಫೋಟೊದಲ್ಲಿ ತುಂಬಾನೆ ಡಿಫರೆಂಟ್ ಆಗಿ ಕಾಣಿಸುತ್ತಿದ್ದಾರೆ. ಹಿಂದೆ ಯಾವತ್ತೂ ಕಾಣದೇ ಇದ್ದ ಲುಕ್ ನಲ್ಲಿ ನಮ್ರತಾ ಗೌಡ ಕಾಣಿಸಿಕೊಂಡಿದ್ದಾರೆ.
ಈ ಫೋಟೊಗಳ ಜೊತೆಗೆ ನಟಿ ನನಗೆ ಫ್ರೆಶ್ ಹೂವುಗಳು ಮತ್ತು ಹಳೆಯ ಪ್ರೀತಿಯನ್ನು ಕೊಡಿ (Give me fresh flowers and an old love)ಎಂದು ಬರೆದುಕೊಂಡಿದ್ದು, ಈ ಕ್ಯಾಪ್ಶನ್ ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ಏನಾಗಿದ್ಯಪ್ಪಾ ನಾಗಿಣಿ ನಟಿಗೆ ಎಂದು ಕೇಳುತ್ತಿದ್ದಾರೆ. ಈ ಕ್ಯಾಪ್ಶನ್ ಗೆ ಅಭಿಮಾನಿಗಳು ಚಿತ್ರ ವಿಚಿತ್ರವಾಗಿ ಕಾಮೆಂಟ್ ಕೂಡ ಮಾಡಿದ್ದಾರೆ.
ಒಬ್ಬರು ಹಳೆ ಪ್ರೀತಿ ಬೇಕಾದ್ರೆ ಕೊಡೋಣ, ಆದ್ರೆ ಫ್ರೆಶ್ ಪ್ಲವರ್ ಈಗಾಗಲೇ ನನ್ನ ಗರ್ಲ್ ಫ್ರೆಂಡ್ ಗೆ ಕೊಟ್ಟಾಗಿದೆ ಎಂದಿದ್ದಾರೆ. ಇನ್ನು ಹಲವರು ಕ್ರಶ್, ಫಾರೆವರ್ ಕ್ರಶ್, ನಿಮಗೋಸ್ಕರ ಎಲ್ಲವನ್ನೂ ಕೊಡೋದೆ ಎಂದು ಕಾಮೆಂಟ್ ಮಾಡಿದ್ದಾರೆ. ಅಷ್ಟಕ್ಕೂ ನಮ್ರತಾ ಯಾಕೆ ಹಳೆ ಲವ್ ಬೇಕು ಎಂದಿದ್ದು… ಗೊತ್ತಿಲ್ಲ.