ಸ್ವಿಮ್‌ಸೂಟ್‌ನಲ್ಲಿ ಪೋಸ್ ನೀಡಿದ 'ನಮ್ಮ ಲಚ್ಚಿ' ನಟಿ ಐಶ್ವರ್ಯಾ ಸಿಂಧೋಗಿ; ಬಾಲಿಯಲ್ಲಿ ಮಸ್ತ್ ಮಜಾ
ನಮ್ಮ ಲಚ್ಚಿ ಧಾರಾವಾಹಿ ಖ್ಯಾತಿಯ ನಟಿ ಐಶ್ವರ್ಯಾ ಸಿಂಧೋಗಿಸ್ವಿಮ್ ಸೂಟ್ ನಲ್ಲಿ ಮಿಂಚಿದ್ದಾರೆ. ಐಶ್ವರ್ಯಾ ಸದ್ಯ ಬಾಲಿ ಪ್ರವಾಸದಲ್ಲಿದ್ದು ಮಸ್ತ್ ಮಜಾ ಮಾಡುತ್ತಿದ್ದಾರೆ.
ಸಿನಿಮಾ ನಟಿಯರು ಮಾತ್ರವಲ್ಲ, ಕಿರುತೆರೆ ನಟಿಯರು ಕೂಡ ನಾವೇನು ಯಾರಿಗೂ ಕಮ್ಮಿಇಲ್ಲ ಎನ್ನುವ ಹಾಗೆ ಮಿಂಚುತ್ತಿದ್ದಾರೆ. ಸಿಕ್ಕಾಪಟ್ಟೆ ಹಾಟ್ ಅಂಡ್ ಸ್ಟೈಲಿಶ್ ಆಗಿರುವ ಕಿರುತೆರೆ ನಟಿಯರು ಆಗಾಗ ಪ್ರವಾಸ ಅಂಥ ಎಂಜಾಯ್ ಮಾಡುತ್ತಿರುತ್ತಾರೆ.
ಕನ್ನಡ ಕಿರುತೆರೆ ನಟಿಯರು ಕೂಡ ಹೊರತಾಗಿಲ್ಲ. ಇತ್ತೀಚೆಗೆ ಕನ್ನಡ ಕಿರುತೆರೆ ನಟಿಯರು ಸಿಕ್ಕಾಪಟ್ಟೆ ಹಾಟ್ ಆಗಿ ಫೋಟೋಶೂಟ್‌ಗಳಲ್ಲಿ ಮಿಂಚುತ್ತಿದ್ದಾರೆ. ಆಗಾಗ ಪ್ರವಾಸ ಅಂತ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ನಮ್ಮ ಲಚ್ಚಿ ಧಾರಾವಾಹಿ ಖ್ಯಾತಿಯ ನಟಿ ಐಶ್ವರ್ಯಾ ಸಿಂಧೋಗಿ ಸ್ವಿಮ್ ಸೂಟ್‌ನಲ್ಲಿ ಮಿಂಚಿದ್ದಾರೆ.
ಐಶ್ವರ್ಯಾ ಫ್ರೆಂಡ್ಸ್ ಜೊತೆ ಬಾಲಿಗೆ ಹಾರಿದ್ದಾರೆ. ಬಾಲಿಯಲ್ಲಿ ಸಖತ್ ಮಜಾ ಮಾಡುತ್ತಿದ್ದಾರೆ. ಐಶ್ವರ್ಯಾ ಒಂದಿಷ್ಟು ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಐಶ್ವರ್ಯಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಮುದ್ರ ತೀರದಲ್ಲಿ ಸ್ವಿಮ್ ಸೂಟ್ ಧರಿಸಿ ಸನ್ ಗ್ಲಾಸ್ ಹಾಕಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಫೋಟೋಗಳನ್ನು ಶೇರ್ ಮಾಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ.
ನಟಿ ಐಶ್ವರ್ಯಾ ನಾಗಿಣಿ ಧಾರಾವಾಹಿಯಲ್ಲಿ ಮಾಯಾಂಗನೆ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಬಳಿಕ ಮಂಗಳಗೌರಿ ಧಾರಾವಾಹಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಅದ್ಭುತ ನಟನೆ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದಾರೆ ಐಶ್ವರ್ಯಾ.
ಸದ್ಯ ಐಶ್ವರ್ಯ ಸಿಂಧೋಗಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗ್ತಿರುವ ನಮ್ಮ ಲಚ್ಚಿ ಸೀರಿಯಲ್‍ನಲ್ಲಿ ನಟಿಸುತ್ತಿದ್ದಾರೆ. ದೀಪಿಕಾ ಪಾತ್ರ ನಿರ್ವಹಿಸುತ್ತಿದ್ದು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.
ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲೂ ನಟಿಸಿದ್ದಾರೆ. ನರಸಿಂಹ ರಾಜು ಅವರ ಮೊಮ್ಮಗ ಸಮರ್ಥ್ ನಟನೆಯ ಯಾರು ನೀ ಯಾರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇನ್ನೂ ಮಮ್ಮಿ ಸಿನಿಮಾದ ನಿರ್ದೇಶಕ ಲೋಹಿತ್ ನಿರ್ದೇಶನದ ಸೈತಾನ್ ಸಿನಿಮಾದಲ್ಲೂ ನಟಿಸಿದ್ದಾರೆ.