- Home
- Entertainment
- TV Talk
- ಹುಟ್ಟುಹಬ್ಬದ ದಿನವೇ ದೀಪಿಕಾ ದಾಸ್ ಬೆಕ್ಕು ಕಾಣೆಯಾಗಿದೆ; ಹುಡುಕಿ ಕೊಟ್ಟವರಿಗೆ ನಗದು ಬಹುಮಾನ
ಹುಟ್ಟುಹಬ್ಬದ ದಿನವೇ ದೀಪಿಕಾ ದಾಸ್ ಬೆಕ್ಕು ಕಾಣೆಯಾಗಿದೆ; ಹುಡುಕಿ ಕೊಟ್ಟವರಿಗೆ ನಗದು ಬಹುಮಾನ
ಕಿರುತೆರೆ ನಾಗಿಣಿ, ಬಿಗ್ ಬಾಸ್ ಸ್ಪರ್ಧಿ ನಾಗಿಣಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದು ಬರುತ್ತಿದೆ....

ಕನ್ನಡ ಕಿರುತೆರೆಯ ನಾಗಿಣಿ ಎಂದೇ ಖ್ಯಾತಿ ಪಡೆದಿರುವ ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 7 ಮತ್ತು 8ರಲ್ಲಿ ಸ್ಪರ್ಧಿಸಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದರು.
ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದೀಪಿಕಾ ದಾಸ್ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಮತ್ತು ಸಿನಿ ಸ್ನೇಹಿತರು ವಿಶ್ ಮಾಡಿರುವ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಹುಟ್ಟು ಹಬ್ಬದ ದಿನವೇ ದೀಪಿಕಾ ದಾಸ್ ತಮ್ಮ ಬೆಕ್ಕನ್ನು ಕಳೆದುಕೊಂಡಿದ್ದಾರೆ. ಬೆಕ್ಕಿಗೆ ಶ್ಯಾಡೋ ಎಂದು ಹೆಸರು ಇಟ್ಟಿದ್ದಾರೆ. ಬೆಕ್ಕಿನ ಸಂಪೂರ್ಣ ವಿವರ ಹಂಚಿಕೊಂಡಿದ್ದಾರೆ.
ಕಪ್ಪು ಬೆಕ್ಕು (ಕತ್ತಿನ ಸುತ್ತ ಕಂದುಬಣ್ಣವಿರುತ್ತದೆ). ಪರ್ಷಿಯಮನ್ ಬ್ರೀಡ್‌ಗೆ ಸೇರಿದೆ. ಇದು ಗಂಡು ಬೆಕ್ಕು, ಕೇವಲ 9 ತಿಂಗಳು ಎಂದು ಮಾಹಿತಿ ಕೊಟ್ಟಿದ್ದಾರೆ.
ಅಲ್ಲದೆ ಬೆಕ್ಕನ್ನು ಹುಡುಕಿ ಕೊಟ್ಟವರಿಗೆ 10,000 ರಿಂದ 15, 000 ಬಹುಮಾನ ಕೊಡಲಾಗುವುದು ಎಂದು ಘೋಷಿಸಿದ್ದಾರೆ. ಮಾಹಿತಿ ನೀಡಲು ಮೂರ್ನಾಲ್ಕು ನಂಬರ್‌ಗಳನ್ನು ಕೊಟ್ಟಿದ್ದಾರೆ.
ದಯವಿಟ್ಟು ಈ ಬೆಕ್ಕು ಯಾರಿಗಾದರೂ ಕಾಣಿಸಿದಲ್ಲಿ ಈ ಮೇಲೆ ಕಾಣಿಸಿದ ಮೊಬೈಲ್ ನಂಬರ್‌ಗೆ ಸಂಪರ್ಕಿಸಬೇಕಾಗಿ ವಿನಂತಿ . ದಯವಿಟ್ಟು ಹುಡುಕಲು ಸಹಾಯ ಮಾಡಿ ಎಂದಿದ್ದಾರೆ.
ಮಂಗಳೂರಿನ ಕಡೆ ಕಂಬಳ ಸೀಸನ್ ಅಲ್ವಾ ಕಂಬಳ ನೋಡೋಕೆ ಹೋಗಿರಬೇಕು, ಯಾವದೋ ಹೆಣ್ಣು ಬೆಕ್ಕು ಜೊತೆ ಓಡಿ ಹೋಗಿರಬೇಕು ಅದಕ್ಕೆ ಬೇಗ ಮದುವೆ ಮಾಡಿಸಿದ್ರೆ ಈ ರೀತಿ ಆಗುವುದಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.