- Home
- Entertainment
- TV Talk
- ಮುಂದುವರೆದ ಐಶ್ವರ್ಯ, ಶಿಶಿರ್, ಮೋಕ್ಷಿತಾ ಟೆಂಪಲ್ ರನ್... ಕುಕ್ಕೆಯಲ್ಲಿ ವಿಶೇಷ ಹೋಮ, ಹವನ!
ಮುಂದುವರೆದ ಐಶ್ವರ್ಯ, ಶಿಶಿರ್, ಮೋಕ್ಷಿತಾ ಟೆಂಪಲ್ ರನ್... ಕುಕ್ಕೆಯಲ್ಲಿ ವಿಶೇಷ ಹೋಮ, ಹವನ!
ಬಿಗ್ ಬಾಸ್ ಸೀಸನ್ 11 ರ ಸ್ಪರ್ಧಿಗಳಾಗಿದ್ದ ಮೋಕ್ಷಿತಾ ಪೈ, ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯ ಸಿಂಧೋಗಿ ಟೆಂಪಲ್ ರನ್ ಮಾಡುತ್ತಿದ್ದು, ಕೊಲ್ಲೂರು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ದರ್ಶನ ಮಾಡಿ ಬಂದಿದ್ದಾರೆ.

ಬಿಗ್ ಬಾಸ್ ಸೀಸನ್ 11 ರ (Bigg Boss Season 11) ಸ್ಪರ್ಧಿಗಳಾಗಿದ್ದ, ಕನ್ನಡ ಕಿರುತೆರೆಯ ಖ್ಯಾತ ನಟರಾದ ಮೋಕ್ಷಿತಾ ಪೈ, ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯ ಸಿಂಧೋಗಿ ದೊಡ್ಮನೆಯಿಂದ ಹೊರ ಬಂದ ಮೇಲೂ ಸಹ ತಮ್ಮ ಭಾಂದವ್ಯವನ್ನು ಮುಂದುವರೆಸಿದ್ದಾರೆ.
ಬಿಗ್ ಬಾಸ್ ಬಳಿಕ ಜೊತೆಯಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಈ ತಾರೆಯರು ಕಂಡು ಬಂದಿದ್ದಾರೆ. ಅಷ್ಟೇ ಅಲ್ಲ ಜೊತೆಯಾಗಿ ಟ್ರಾವೆಲ್ ಮಾಡ್ತಿದ್ದಾರೆ ಈ ತ್ರಿಮೂರ್ತಿಗಳು. ಜೊತೆಯಾಗಿ ವಿಡಿಯೋ ರೀಲ್ಸ್ ಮಾಡಿ ಪೋಸ್ಟ್ ಕೂಡ ಮಾಡಿದ್ದರು.
ಸದ್ಯ ಈ ನಟರು ಬೇರೆಲ್ಲಾ ಕೆಲಸಗಳಿಗೆ ಬ್ರೇಕ್ ಕೊಟ್ಟು ಟೆಂಪಲ್ ರನ್ (Temple Run) ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಇನ್’ಸ್ಟಾಗ್ರಾಂನಲ್ಲಿ ದೇವಸ್ಥಾನ, ಪೂಜೆ, ಪ್ರಸಾದ ಭೋಜನದ ಫೋಟೊಗಳನ್ನು ಶೇರ್ ಮಾಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದಷ್ಟೆ ಈ ಮೂರು ಜನ ಕೊಲ್ಲೂರು ಮೂಕಾಂಬಿಕಾ (Kolluru Mookambika) ದರ್ಶನ ಪಡೆದು ಬಂದಿದ್ದು, ಅಲ್ಲಿನ ಫೋಟೊಗಳನ್ನು ಸಹ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.
ಇದೀಗ ತಮ್ಮ ಟೆಂಪಲ್ ರನ್ ಮುಂದುವರೆಸಿರುವ ಶಿಶಿರ್ (Shishir Shastry) ಮೋಕ್ಷಿತಾ ಹಾಗೂ ಐಶ್ವರ್ಯ ಧರ್ಮಸ್ಥಳ ಮಂಜುನಾಥ ಕ್ಷೇತ್ರಾ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ಧರ್ಮಸ್ಥಳಕ್ಕೆ ಭೇಟಿ ನೀಡಿ, ಮಂಜುನಾಥನ ದರ್ಶನ ಪಡೆದ ತಾರೆಯರು, ಅಲ್ಲಿನ ಅನ್ನ ಪ್ರಸಾದವನ್ನು ಸಹ ಸವೆದಿದ್ದಾರೆ, ಆ ಫೋಟೊಗಳನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಷ್ಟೇ ಅಲ್ಲ ತಮ್ಮ ಸ್ನೇಹಿತೆಯ ಜೊತೆ ಸೇರಿ ಈ ಮೂರು ಜನ ದಕ್ಷಿಣ ಕನ್ನಡದ ಜನಪ್ರಿಯ ಯಾತ್ರಾ ಸ್ಥಳವಾದ, ಸರ್ಪ ಸಂಸ್ಕಾರ ಪೂಜೆಗಳಿಗೆ ಹೆಸರುವಾಸಿಯಾದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೂ ಭೇಟಿ ನೀಡಿದ್ದಾರೆ.
ಫೋಟೊ ಆಲ್ಬಂ ನೋಡಿದ್ರೆ, ನಟಿ ಐಶ್ವರ್ಯ ಸಿಂಧೋಗಿ (Aishwarya Sindhogi)ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಿಶೇಷ ಪೂಜೆ ಮಾಡಿಸಿದಂತಿದೆ. ಹಾವಿನ ಮಂಡಲ ರಂಗೋಲಿ, ಹಾಗೂ ಹೋಮದಲ್ಲಿ ಪಾಲ್ಗೊಂಡ ಫೋಟೊಗಳನ್ನು ಸಹ ಹಂಚಿಕೊಂಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲೂ ಸಹ ಈ ತಾರೆಯರು ಅನ್ನ ಪ್ರಸಾದ ಸ್ವೀಕರಿಸಿದ್ದು, ಬಳಿಕ ದೇವಾಲಯದ ಮುಂದೆ ನಿಂತು ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಇವರ ಸ್ನೇಹವನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಶಿಶಿರ್ ಕೂಡ ಕೆಲವು ದಿನಗಳ ಹಿಂದೆ ಐಶ್ವರ್ಯ ಹಾಗೂ ಮೋಕ್ಷಿತಾ (Mokshitha Pai) ಜೊತೆಗೆ ಇರುವಂತಹ ಫೋಟೊಗಳನ್ನು ಶೇರ್ ಮಾಡಿ, ಕೆಲವು ಬಾಂಡಿಂಗ್ ಎಷ್ಟು ಸ್ಪೆಷಲ್ ಆಗಿರುತ್ತೆ ಅಂದ್ರೆ, ಅದು ಫ್ಯಾಮಿಲಿ ಆಗಿ ಬಿಡುತ್ತೆ ಎಂದು ಹೇಳಿದ್ದರು. ಇವರ ಬಾಂಡಿಂಗ್ ನೋಡಿದ್ರೆ ಫ್ಯಾಮಿಲಿ ಅಮ್ತಾನೆ ಅನಿಸುತ್ತೆ ಅಲ್ವಾ?