ನಾಗಿಣಿ-2 ನಟ ಮೋಹನ್: ಮಿಂಚಲಿದ್ದಾರಿನ್ನು ರವಿ ಬೋಪಣ್ಣ ಚಿತ್ರದಲ್ಲಿ!
ನಟ ಮೋಹನ್ ನಾಗಿಣಿ-2 ಧಾರಾವಾಹಿಯಲ್ಲಿ ಇನ್ನು ಮುಂದೆ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ರವಿ ಬೋಪಣ್ಣ ಸಿನಿಮಾದಲ್ಲಿ ನಿವೃತ್ತ ಸರ್ಕಾರಿ ನೌಕರನ ಪಾತ್ರದಲ್ಲಿ ಮಿಂಚಲಿದ್ದಾರೆ.

ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ನಟ ಮೋಹನ್ ಶಂಕರ್ ನಾಗಿಣಿ-2 ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷರ ಮನ ಗೆದ್ದು ಮನೆ ಮಗನಾಗಿ ಹತ್ತಿರವಾದರು.

ಸಾಲ್ಟ್ ಆಂಡ್ ಪೆಪ್ಪರ್ ಲುಕ್ ಹೊಂದಿರುವ ಆಬಾರಿ ಸಿರಿವಂತ ದಿಗ್ವಿಜಯನ ಪಾತ್ರದಲ್ಲಿ ಮೋಹನ್ ಕಾಣಿಸಿಕೊಳ್ಳುತ್ತಿದ್ದರು. ಆದರೀಗ ಕ್ರಿಯೇಟಿವ್ ಬದಲಾವಣೆಗಳಿಂದ ಧಾರಾವಾಹಿಯಿಂದ ಹೊರ ನಡೆದಿದ್ದಾರೆ.

'ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್‌ನಲ್ಲಿ ನಾನು ದಿಗ್ವಿಜಯನ ಪಾತ್ರವನ್ನು ತುಂಬಾನೇ ಎಂಜಾಯ್ ಮಾಡಿದ್ದೇನೆ. ನೆಗೆಟಿವ್ ಶೇಡ್ ಹೊಂದಿರುವ ಪಾತ್ರವಾಗಿರುವ ಕಾರಣ ವೀಕ್ಷಕರಲ್ಲಿ ಅದೇ ತುಂಬಿಕೊಂಡಿತ್ತು. ಸುಮಾರು ಎರಡು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ನಂತರ ಇದು ನನ್ನ ಮೊದಲ ಧಾರಾವಾಹಿ ಅಗಿತ್ತು'

'ಪ್ರತಿ ಮನೆಗಳಲ್ಲೂ ನನ್ನ ಪಾತ್ರದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅಷ್ಟರ ಮಟ್ಟಕ್ಕೆ ಕಿರುತೆರೆ ಪ್ರಭಾವವಿದೆ. ಎಲ್ಲವೂ ಅಂತ್ಯ ಕಂಡುಕೊಳ್ಳುತ್ತಿದ್ದಂತೆ ನಾನು ಕೂಡ ವೀಕ್ಷಕರಿಗೆ ಬೈ ಹೇಳುವ ಸಮಯ ಬಂದಿದೆ'

'ಧಾರಾವಾಹಿಯಲ್ಲಿ ಕೆಲವೊಂದು ಕ್ರಿಯೇಟಿವ್ ಬದಲಾವಣೆ ಮಾಡಲಾಗುತ್ತಿದೆ. ಇಡೀ ತಂಡ ನನ್ನ ಕುಟುಂಬದ ರೀತಿ ಇತ್ತು,' ಎಂದು ಮೋಹನ್ ಮಾತನಾಡಿದ್ದಾರೆ.

ರವಿ ಬೊಪ್ಪಣ್ಣ ಹಾಗೂ ಇತ್ಯರ್ಥ ಸಿನಿಮಾಗಳಿಗೆ ಮೋಹನ್ ಸಹಿ ಮಾಡಿದ್ದಾರೆ. 'ನಾನು ನಿವೃತ್ತ ಸರ್ಕಾರಿ ನೌಕರನಾಗಿ ಕಾಣಿಸಿಕೊಳ್ಳುತ್ತಿರುವೆ' ಎಂದಿದ್ದಾರೆ.

ಇತ್ಯರ್ಥ ಚಿತ್ರದಲ್ಲಿ ನಾನೊಬ್ಬ ಸೋಲೋ ನಟನಾಗಿ ಅಭಿನಯಿಸುತ್ತಿರುವೆ,' ಎಂದಿದ್ದಾರೆ.

ಕೆಲವು ದಿನಗಳ ಹಿಂದೆ ಮೋಹನ್ ಪೋಷಕರು ಹಾಗೂ ಮಗನಿಗೆ ಕೊರೋನಾ ಸೋಂಕು ತಗುಲಿತ್ತು.

'ಮೊದಲು ನನ್ನ ತಂದೆ, ಆನಂತರ ನನ್ನ ತಾಯಿಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿತ್ತು. ಇವರಿಬ್ಬರೂ ಚೇತರಿಸಿಕೊಳ್ಳುತ್ತಿದ್ದಂತೆ ನನ್ನ ಮಗನಿಗೆ ಪಾಸಿಟಿವ್ ಆಗಿದೆ. ಆತ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ'

'ಇದು ನಮ್ಮ ಬೆಂಗಳೂರಿನ ಪರಿಸ್ಥಿತಿ. ಎಲ್ಲವೂ ನಿಯಂತ್ರಣಕ್ಕೆ ಬರುವ ತನಕ ದಯವಿಟ್ಟು ಮನೆಯಲ್ಲಿರಿ,' ಎಂದು ಮೋಹನ್ ಮನವಿ ಮಾಡಿಕೊಂಡರು.