ಮಿಥುನ ರಾಶಿಯ ಆಟೋ ರಾಣಿ ರಾಶಿ ಈಗ ಉಂಡೆನಾಮದ ‘ಹನಿ ಕೇಕ್’
ಮಿಥುನ ರಾಶಿಯಲ್ಲಿ ಸಣ್ಣ ವಯಸ್ಸಿನಲ್ಲೇ ಮನೆಯ ಜವಾಬ್ಧಾರಿ ಹೊರುತ್ತಾ, ವಿದ್ಯಾಭ್ಯಾಸ ಮಾಡುವ ದಿಟ್ಟ ಹುಡುಗಿಯಾಗಿ ಕಾಣಿಸಿಕೊಂಡ ರಾಶಿ ಅಂದ್ರೆ ವೈಷ್ಣವಿ ಈವಾಗ ಏನು ಮಾಡ್ತಿದಾರೆ? ಗೊತ್ತಾ ನಿಮಗೆ?

ಮಿಥುನ ರಾಶಿ (Mithuna rashi) ಸೀರಿಯಲ್ ಮುಗಿದು ಈಗಾಗಲೇ ಒಂದು ವರ್ಷ ಕಳೆದಿದೆ. ಈ ಸೀರಿಯಲ್ ಕಷ್ಟಪಟ್ಟು ಮನೆಯ ಜವಾಬ್ಧಾರಿ ಹೊರುವ ಆಟೋ ರಾಣಿ ರಾಶಿ ಮತ್ತು ಬ್ಯುಸಿನೆಸ್ ಕಂಪನಿಯ ಓನರ್ ಮಿಥುನ್ ನಡುವೆ ನಡುವೆ ಕಥೆ. ಈ ಸೀರಿಯಲ್ ನಲ್ಲಿ ರಾಶಿ ಪಾತ್ರ ನಿರ್ವಹಿಸಿದ ವೈಷ್ಣವಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದರು.
ಆಟೋ ರಾಣಿ ರಾಶಿ, ಮನೆಯ ಜವಾಬ್ಧಾರಿಯುತ ಮಗಳೂ ಹೌದು, ಅತ್ತೆಯ ಮುದ್ದಿನ ಸೊಸೆಯೂ ಹೌದು ಜೊತೆಗೆ ಕೋಪಿಷ್ಟ ಗಂಡನ ಪ್ರೀತಿಯನ್ನು ಬಯಸುವ ಜಗಳಗಂಟಿ ಹೆಂಡ್ತಿಯಾಗಿ ಅಭಿಮಾನಿಗಳಿಗೆ ಇಷ್ಟವಾಗಿದ್ದರು. ಆದರೆ ಮಿಥುನ ರಾಶಿ ಬಳಿಕ ಅವರು ಕನ್ನಡ ಕಿರುತೆರೆಯಲ್ಲಿ ಕಾಣಿಸಿದ್ದೇ ಇಲ್ಲ.
ಮೊದಲು ಕಲರ್ಸ್ ಕನ್ನಡದ (colors kannada) ಶಾಂತಂ, ಪಾಪಂ ಧಾರಾವಾಹಿಯಲ್ಲಿ ನಟಿಸಿದ ಅವರಿಗೆ ನಂತರ ಮಿಥುನ ರಾಶಿ ಧಾರಾವಾಹಿಯಲ್ಲಿ ನಾಯಕಿಯಾಗಿ ಅವಕಾಶ ದೊರಕಿತು. ವೈಷ್ಣವಿ ಡ್ಯಾನ್ಸರ್ ಕೂಡ ಹೌದು. ವೈಷ್ಣವಿ ಭರತನಾಣ್ಯ ಕಲಾವಿದೆಯಾಗಿದ್ದಾರೆ.
ಇನ್ನು ವೈಷ್ಣವಿ ಬಿಗ್ಬಾಸ್ ಮಿನಿ ಸೀಸನ್ನಲ್ಲಿ ಸಹ ಭಾಗವಹಿಸಿ ಮನರಂಜನೆ ನೀಡಿದ್ದರು. ಅದಾದ ಬಳಿಕ ಕನ್ನಡದಲ್ಲಿ ಅವರು ಕಾಣಿಸಿಕೊಂಡಿದ್ದು ಕಡಿಮೆ, ಆದರೆ ಮಲಯಾಳಂ ಮತ್ತು ತಮಿಳು ಕಿರುತೆರೆಯಲ್ಲಿ ವೈಷ್ಣವಿ ಸಖತ್ ಜನಪ್ರಿಯತೆ ಪಡೆದಿದ್ದಾರೆ.
ಮಿಥುನ ರಾಶಿ ಸೀರಿಯಲ್ ನ ತಮಿಳು ರೀಮೇಕ್ ಉಲ್ಲೈತ ಅಲೈತ ಸೀರಿಯಲ್ ನಲ್ಲಿ ಸಹ ನಾಯಕಿಯಾಗಿ ನಟಿಸಿದ್ದರು. ಇದಾದ ಬಳಿಕ ಸದ್ಯ ಮಲಯಾಳಂನ ಸೂರ್ಯ ಟಿವಿಯಲ್ಲಿ(Malayalam Serial) ಪ್ರಸಾರವಾಗುತ್ತಿರುವ ಕಣ್ಣಲ್ ಪೂವು ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಮಲಯಾಳಂ ಕಿರುತೆರೆಯಲ್ಲಿ ಜನರಿಗೆ ಹತ್ತಿರವಾಗಿರೋದರಿಂದ ವೈಷ್ಣವಿ (Vaishnavi), ವಿಷು ಹಬ್ಬದ ಸಂದರ್ಭದಲ್ಲಿ ಅಪ್ಪಟ ಮಲಯಾಳಿಯಂತೆ ಕಸವು ಬಿಳಿ ಸೀರೆಯುಟ್ಟು, ಗಂಧದ ನಾಮ ಇಟ್ಟು, ಹಸಿರು ಬಳೆತೊಟ್ಟು ಫೋಟೋ ಶೂಟ್ ಮಾಡಿಸಿದ್ದು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂದು ವಿಷು ಹಬ್ಬದ ಶುಭ ಕೋರಿದ್ದಾರೆ.
ಇನ್ನು ಇದೇ ವೈಷ್ಣವಿ ಇದೀಗ ಕಿರುತೆರೆಯಿಂದ ಹಿರಿತೆರೆಗೆ ಹಾರಿದ್ದು, ಚಂದನವನದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಕೋಮಲ್ ಜೊತೆಗೆ ಹೊಸ ಸಿನಿಮಾದಲ್ಲಿ ವೈಷ್ಣವಿ ನಟಿಸಿದ್ದು, ಈ ಚಿತ್ರದ ಮೇಲೆ ಬಹಳಷ್ಟು ನಿರೀಕ್ಷೆಇಟ್ಟುಕೊಂಡಿದ್ದಾರೆ.
ಕೆಎಲ್ ರಾಜಶೇಖರ್ ನಿರ್ದೇಶನದ ಚೊಚ್ಚಲ ಚಿತ್ರ ‘ಉಂಡೆನಾಮ’ದಲ್ಲಿ (Undenama) ವೈಷ್ಣವಿ ನಟ ಕೋಮಲ್ ಜೊತೆ ಮುಖ್ಯಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಈಗಾಗಲೇ ರಿಲೀಸ್ ಆಗಿದೆ. ಮೊದಲ ಚಿತ್ರದಲ್ಲಿ ವೈಷ್ಣವಿ ಕಾಲ್ ಗರ್ಲ್ ಪಾತ್ರದಲ್ಲಿ ನಟಿಸಿದ್ದಾರೆ. ಇದೊಂದು ಪ್ರಮುಖ ಪಾತ್ರವಾಗಿದ್ದು, ಚಿತ್ರದ ಕಥೆ ಅದರ ಹಿಂದೆ ಸುತ್ತುತ್ತೆ ಎನ್ನುತ್ತಿದೆ ಚಿತ್ರ ತಂಡ. ಪ್ರೋಮೋದಲ್ಲಿ ಇವರನ್ನು ಹನಿ ಕೇಕ್ ಎಂದು ತೋರಿಸಿದ್ರು.
ಸಿ ನಂದಕಿಶೋರ್ ನಿರ್ಮಾಣದ ಉಂಡೆನಾಮ ಚಿತ್ರದಲ್ಲಿ ಧನ್ಯಾ ಬಾಲಕೃಷ್ಣ ನಾಯಕಿಯಾಗಿ ನಟಿಸಿದ್ದು, ಅಪೂವಾ, ವೈಷ್ಣವಿ, ತನಿಶಾ ಕುಪ್ಪಂಡ ಮತ್ತು ಬ್ಯಾಂಕ್ ಜನಾರ್ದನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ವೈಷ್ಣವಿಯವರು ಕಾಲ್ ಗರ್ಲ್ ಆಗಿ ಕಾಣಿಸಿಕೊಂಡಿದ್ದು, ಇದು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಒಂದಾಗಿದೆ. ಇವರ ನಟನೆಗೆ ಹೇಗೆ ರೆಸ್ಪಾನ್ಸ್ ಬರುತ್ತೆ ಕಾದು ನೋಡಬೇಕು.