ಮದುವೆ ನಂತರ ಬದಲಾಯ್ತಾ ಮೇಘನಾ ಶಂಕರಪ್ಪ ಜೀವನ; ಸೀತಾರಾಮ ಧಾರಾವಾಹಿಗೆ ಬರೊಲ್ವಾ?
ಸೀತಾರಾಮ ಸೀರಿಯಲ್ನ ಪ್ರಿಯಾ ಉರ್ಫ್ ಮೇಘನಾ ಶಂಕರಪ್ಪ ಮದುವೆಯ ನಂತರ ಬದಲಾಗಿದ್ದಾರೆಯೇ? ಮೊದಲು ತುಂಡುಡುಗೆಗಳನ್ನು ಧರಿಸುತ್ತಿದ್ದ ಮೇಘನಾ ಇದೀಗ ಸೀರೆಯ ಮೊರೆ ಹೋಗಿದ್ದಾರೆ. ಇದೀಗ ಧಾರಾವಾಹಿಯೂ ಬಿಟ್ಟು ಬಿಡ್ತಾರಾ? ಎಂದು ಅಭಿಮಾನಿಗಳಲ್ಲಿ ಅನುಮಾನ ಮೂಡಿದೆ.

ಸೀತಾರಾಮ ಸೀರಿಯಲ್ ಪ್ರಿಯಾ ಉರ್ಫ್ ಮೇಘನಾ ಶಂಕರಪ್ಪ ಇತ್ತೀಚೆಗೆ ಮದುವೆ ಮಾಡಿಕೊಂಡು, ಗಂಡನೊಂದಿಗೆ ಹನಿಮೂನ್ ಟ್ರಿಪ್ ಮಾಡುವುದಕ್ಕೆ ವಿವಿಧೆಡೆ ಪ್ರಣಯದ ಪ್ರವಾಸಿ ತಾಣಗಳನ್ನೆಲ್ಲಾ ಸುತ್ತಾಡಿ ಬಂದಿದ್ದಾರೆ. ಇದೀಗ ಮೇಘನಾ ಶಂಕರಪ್ಪ ಮದುವೆಯಾದ ನಂತರ ತುಂಬಾ ಬದಲಾಗಿದ್ದಾರೆ ಎಂದು ಕೆಲವರು. ಮೊದಲು ತುಂಡುಡುಗೆಗಳನ್ನು ಧರಿಸುತ್ತಿದ್ದ ಮೇಘನಾ ಇದೀಗ ಸೀರೆಯ ಮೊರೆ ಹೋಗಿದ್ದಾರೆ. ಅಂದರೆ ಮೇಘನಾಗೆ ಮನೆಯಲ್ಲಿ ಸಂಸಾರದ ಕಟ್ಟಳೆಗಳನ್ನು ಹಾಕಿದ್ದಾರಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಸಾಫ್ಟ್‌ವೇರ್ ಎಂಜಿನಿಯರ್ ಜಯಂತ್ ಅವರನ್ನು ಮದುವೆಯಾಗಿರುವ ನಟಿ ಮೇಘನಾ, ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿದ್ದು, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಂಚಿಕೊಂಡು ತಾನು ಯಾವ ಸಿನಿಮಾಗಿಂತಲೂ ಕಮ್ಮಿಯಿಲ್ಲ ಎಂಬುದನ್ನು ತೋರಿಸಿಕೊಂಡಿದ್ದರು.
ಸಾಮಾನ್ಯವಾಗಿ ಸೆಲೆಬ್ರಿಟಿ ಎಂದರೆ ಬಹುತೇಕರು ಲವ್ ಮ್ಯಾರೇಜ್ ಆಗುವವರ ಸಂಖ್ಯೆಯೇ ಹೆಚ್ಚಿರುವಾಗ ನಟಿ ಮೇಘನಾ ಅರೇಂಜ್ಡ್ ಮ್ಯಾರೇಜ್ ಆಗಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಸಂಪ್ರದಾಯಬದ್ಧವಾಗಿ ಹಾಗೂ ಮಾಡ್ರನ್ ಆಗಿಯೂ ಮದುವೆಯ ಎಲ್ಲ ಕ್ಷಣಗಳನ್ನು ಎಂಜಾಯ್ ಮಾಡಿದ್ದಾರೆ.
ಇತ್ತೀಚೆಗೆ ನಂದಿಬೆಟ್ಟ, ಕಬಿನಿಗೆ ಹನಿಮೂನ್ಗೆ ಹೋಗಿರುವ ಮೇಘನಾ, ಅಲ್ಲಿಯೇ ಪತಿಯ ಮೇಲೆ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದರ ವಿಡಿಯೋ ಕುಡ ವೈರಲ್ ಆಗಿತ್ತು. ಪತಿಯ ಮೇಲೆ ಮುನಿಸು ಮಾಡಿಕೊಳ್ಳಲು ಕಾರಣ, ಅವರು ಕ್ಯಾಮೆರಾ ಅನ್ನು ಸರಿ ಹಿಡಿಯಲಿಲ್ಲ ಎನ್ನುವ ಕಾರಣ ಎಂಬುದು ನೆಟ್ಟಿಗರು ನಗಲು ಕಾರಣವಾಗಿತ್ತು.
ಮೇಘನಾ ಶಂಕರಪ್ಪ 'ಸೀತಾರಾಮ' ಸೀರಿಯಲ್ಗೂ ಮುನ್ನ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ನಟಿಸಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು.
ಕಿರುತೆರೆಗೆ ನಿರೂಪಕಿಯಾಗಿ ಕಾಲಿಟ್ಟ ಮೇಘನಾ 'ಕಿನ್ನರಿ' ಮೂಲಕ ಧಾರಾವಾಹಿ ಪ್ರವೇಶ ಪಡೆದರು. ನಂತರ, 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿಯಲ್ಲಿ ನಾಯಕಿಯ ಸ್ನೇಹಿತೆಯಾಗಿ ಪ್ರಿಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿ ಪಾತ್ರಗಳು ಪಾಸಿಟಿವ್ ಆಗಿರಲಿ, ನೆಗೆಟಿವ್ ಇರಲಿ ಅದಕ್ಕೆ ಜೀವ ತುಂಬುವ ಮೂಲಕ ತನಗೆ ಬಣ್ಣದ ಲೋಕದಲ್ಲಿ ಗಟ್ಟಿ ನೆಲೆಯನ್ನು ಕಂಡುಕೊಂಡಿದ್ದಾರೆ.
ಸೀತಾರಾಮ ಧಾರಾವಾಹಿಯಲ್ಲಿ ನಟಿಸುತ್ತಿರುವ ಮೇಘನಾಗೆ ಬೆಳ್ಳಿಪರದೆಯಲ್ಲಿಯೂ ಕಾಣಿಸಿಕೊಳ್ಳುವ ಆಸೆಯಿದೆ. ಆದರೆ, ಮದುವೆಯ ನಂತರ ಅವರ ಆಸೆ ಕನಸಾಗಿಯೇ ಉಳಿಯಲಿದೆಯಾ ಎಂಬ ಅನುಮಾನ ಬರುತ್ತಿದೆ. ಇದಕ್ಕೆ ಕಾರಣ ಅವರ ಉಡುಗೆ ಶೈಲಿ ಎಂದು ಕೆಲವರು ಹೇಳುತ್ತಿದ್ದಾರೆ.
ಮದುವೆಗೂ ಮುನ್ನ ತುಂಡುಡುಗೆಯಲ್ಲಿ ಬಬ್ಲಿಯಾಗಿ ಕಾಣಿಸಿಕೊಳ್ಳುತ್ತಿದ್ದ ಮೇಘನಾ ಈಗ ಪಕ್ಕಾ ಫ್ಯಾಮಿಲಿ ಹೆಣ್ಣು ಮಗಳಾಗಿ ಮಾರ್ಪಾಡಾಗಿದ್ದಾರೆ. ಮೈತುಂಬಾ ಸೀರೆ ಧರಿಸಿ, ಮಿಂಚಿನ ನೆಕ್ಲೆಸ್ ಧರಿಸಿ ಫೋಟೋ ಶೂಟ್ ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಹಂಚಿಕೊಂಡಿದ್ದಾರೆ. ಇದೀಗ ಡ್ರೆಸ್ ಬಿಟ್ಟು ಸೀರೆ ಧರಿಸುತ್ತಿರುವ ಮೇಘನಾ, ಧಾರಾವಾಹಿಯನ್ನೂ ಬಿಟ್ಟು ಬಿಡುತ್ತಾಳಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಸೀತಾರಾಮ ಧಾರಾವಾಹಿಯಲ್ಲಿ ನಟಿಸುತ್ತಿರುವ ಮೇಘನಾಗೆ ಬೆಳ್ಳಿಪರದೆಯಲ್ಲಿಯೂ ಕಾಣಿಸಿಕೊಳ್ಳುವ ಆಸೆಯಿದೆ. ಆದರೆ, ಮದುವೆಯ ನಂತರ ಅವರ ಆಸೆ ಕನಸಾಗಿಯೇ ಉಳಿಯಲಿದೆಯಾ ಎಂಬ ಅನುಮಾನ ಬರುತ್ತಿದೆ. ಇದಕ್ಕೆ ಕಾರಣ ಅವರ ಉಡುಗೆ ಶೈಲಿ ಬದಲಾಗಿರುವುದೇ ಪ್ರಮುಖ ಕಾರಣ ಎಂದು ಕೆಲವರು ಹೇಳುತ್ತಿದ್ದಾರೆ.
ಮದುವೆಗೂ ಮುನ್ನ ತುಂಡುಡುಗೆಯಲ್ಲಿ ಬಬ್ಲಿಯಾಗಿ ಕಾಣಿಸಿಕೊಳ್ಳುತ್ತಿದ್ದ ಮೇಘನಾ ಈಗ ಪಕ್ಕಾ ಫ್ಯಾಮಿಲಿ ಹೆಣ್ಣು ಮಗಳಾಗಿ ಮಾರ್ಪಾಡಾಗಿದ್ದಾರೆ. ಮೈತುಂಬಾ ಸೀರೆ ಧರಿಸಿ, ಮಿಂಚಿನ ನೆಕ್ಲೆಸ್ ಧರಿಸಿ ಫೋಟೋ ಶೂಟ್ ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಹಂಚಿಕೊಂಡಿದ್ದಾರೆ. ಇದೀಗ ಡ್ರೆಸ್ ಬಿಟ್ಟು ಸೀರೆ ಧರಿಸುತ್ತಿರುವ ಮೇಘನಾ, ಧಾರಾವಾಹಿಯನ್ನೂ ಬಿಟ್ಟು ಬಿಡುತ್ತಾಳಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.