ಸೀರೆಯಲ್ಲಿ ಮಿಂಚಿದ ಮೇಘಾ ಶೆಟ್ಟಿ… ಯಾಕ್ರೀ ಇಷ್ಟು ಚೆನ್ನಾಗಿದ್ದೀರಾ… ನಮ್ಮ ಕಣ್ಣೆ ಬೀಳುತ್ತೆ ಎಂದ ಫ್ಯಾನ್ಸ್
ಜೊತೆಜೊತೆಯಲಿ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಮಂಗಳೂರು ಹುಡುಗಿ ಮೇಘಾ ಶೆಟ್ಟಿ ತಮ್ಮ ಟ್ರೆಡಿಶನಲ್ ಫೊಟೋಶೂಟ್ ಮೂಲಕ ಭಾರಿ ಸದ್ದು ಮಾಡ್ತಿದ್ದಾರೆ..
ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಜೊತೆ ಜೊತೆಯಲಿ (Jothe Jotheyali) ಸೀರಿಯಲ್ ಮುಗಿದು ವರ್ಷಗಳಾಗುತ್ತಾ ಬಂದ್ರು ಸೀರಿಯಲ್ ಕ್ರೇಜ್ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಅದಕ್ಕೆ ಒಂದು ಉದಾಹರಣೆ ಅಂದ್ರೆ, ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ರೂ ಸಹ ಇಂದಿಗೂ ಮೇಘಾ ಶೆಟ್ಟಿಯನ್ನು ಜನರು ಗುರುತಿಸೋದು ಅನು ಸಿರಿಮನೆಯಾಗಿದೆ.
ವಿಭಿನ್ನ ಕಥಾಹಂದರದೊಂದಿಗೆ ಆರಂಭವಾದ ಈ ಸೀರಿಯಲ್, 50ರ ಹರೆಯದ ಬ್ಯುಸಿನೆಸ್ ಮ್ಯಾನ್ ಮತ್ತು 25ರ ಹರೆಯದ ಯುವತಿಯ ನಡುವೆ ನಡೆಯುವಂತಹ ಕಥೆಯಾಗಿದ್ದು, ಇದರಲ್ಲಿ ಮೇಘಾ ಶೆಟ್ಟಿ ನಟಿಸಿದಂತಹ ಅನು ಸಿರಿಮನೆ ಪಾತ್ರವೂ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಆದರೆ ಮೊದಲ ಸೀರಿಯಲ್ ನಂತರ ಕಿರುತೆರೆಯಿಂದ ದೂರ ಉಳಿದರು ಮೇಘಾ ಶೆಟ್ಟಿ (Megha Shetty).
ಕನ್ನಡ ಕಿರುತೆರೆಯ ನಟನೆಗೆ ಗುಡ್ ಬೈ ಹೇಳಿದ ಮೇಘಾ, ಸೀರಿಯಲ್ ಗಳ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕೆಂಡಸಂಪಿಗೆ ಧಾರಾವಾಹಿಯ ನಿರ್ಮಾಪಕಿ ಕೂಡ ಮೇಘಾ ಶೆಟ್ಟಿ ಆಗಿದ್ದರು. ಇದರ ಜೊತೆಗೆ ಸಿನಿಮಾಗಳಲ್ಲಿ ನಟಿ ಫುಲ್ ಬ್ಯುಸಿಯಾಗಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ನಟಿಸಿರುವ ‘ತ್ರಿಬಲ್ ರೈಡಿಂಗ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಮೇಘ, ನಂತರ ಡಾರ್ಲಿಂಗ್ ಕೃಷ್ಣ ಜೊತೆ ದಿಲ್ ಪಸಂದ್ ಚಿತ್ರದಲ್ಲಿ ನಟಿಸಿದರು. ಕೈವ ಸಿನಿಮಾದಲ್ಲೂ ತಮ್ಮ ಅದ್ಭುತ ಅಭಿನಯದಿಂದ ಜನಮನ ಹೆದ್ದಿದ್ದರು. ಸದ್ಯ ಮೂರು ಸಿನಿಮಾಗಳು ಮೇಘಾ ಶೆಟ್ಟಿ ಕೈಯಲ್ಲಿ ಇದೆ.
ಮೇಘಾ ವಿನಯ್ ರಾಜ್‌ಕುಮಾರ್ ಅಭಿನಯದ ಗ್ರಾಮಾಯಣ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ, ಆಫ್ಟರ್ ಆಪರೇಶನ್ ಲಂಡನ್ ಕೆಫೆ ಮತ್ತು ಚೀತಾ ಚಿತ್ರಗಳಲ್ಲೂ ನಟಿಸಿದ್ದಾರೆ. ಅಭಿಮಾನಿಗಳಂತೂ ಮೇಘಾ ಶೆಟ್ಟಿ ಸಿನಿಮಾ ನೋಡೋದಕ್ಕೆ ಕಾಯ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಮೇಘಾ ತಮ್ಮ ಫೋಟೋ, ವಿಡಿಯೋ ಮತ್ತು ಜಿಮ್ ರಿಲೇಟೆಡ್ ವರ್ಕ್ ಔಟ್ ಮಾಡುವ ವಿಡೀಯೊ ಶೇರ್ ಮಾಡುವ ಮೂಲಕ ಅಭಿಮಾನಿಗಳು ಹುಬ್ಬೇರಿಸಿ ನೋಡುವಂತೆ ಮಾಡಿದ್ದಾರೆ. ಇವರಿಗೆ ಇನ್’ಸ್ಟಾಗ್ರಾಂನಲ್ಲಿ ಬರೋಬ್ಬರಿ 1.2 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
ಮೇಘಾ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ತಮ್ಮ ಫೊಟೊ ಶೂಟ್ ಮಾಡಿಸಿ ಹಂಚಿಕೊಳ್ಳುತ್ತಿದ್ದು, ಅದರಲ್ಲೂ ಟ್ರೆಡಿಶನಲ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಇತ್ತಿಚೆಗಷ್ಟೇ ನಟಿ ಕೇರಳ ಸೀರೆಯಲ್ಲಿ ಮಿಂಚಿದ್ದರು. ಇದೀಗ ಹಸಿರು ಬಣ್ಣದ ಕಾಟನ್ ಸೀರೆ ಧರಿಸಿ ತುಂಬಾನೆ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ನಟಿಯ ಸರಳ ವಿರಳ ಸೌಂದತ್ಯಕ್ಕೆ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ.
ಮೇಘಾ ಶೆಟ್ಟಿ ಫೋಟೊಗೆ ಸಿಕ್ಕಾಪಾಟ್ಟೆ ಲೈಕ್ಸ್, ಕಾಮೆಂಟ್ಸ್ ಗಳು ಬಂದಿದೆ. ಸೀರೆಯಲ್ಲಿ ತುಂಬಾನೆ ಮುದ್ದಾಗಿ ಕಾಣಿಸ್ತಿದ್ದೀರಿ. ಯಾಕ್ರೀ ನೀವು ಇಷ್ಟೊಂದು ಚೆನ್ನಾಗಿದ್ದೀರಿ, ನನ್ನ ಬೆಳದಿಂಗಳ ಬಾಲೆ ನೀವು, ಸುಂದರಿ ಎಂದಿದ್ದಾರೆ ಮತ್ತೊಬ್ಬರು. ಇನ್ನೊಬ್ಬರು ಕಾಮೆಂಟ್ ಮಾಡಿ ನಿಮ್ಮಿಂದ ಸೀರೆ ಅಂದ ಹೆಚ್ಚಾಗಿದೆ ನೀವು ಅಂದದ ರಾಣಿ, ಅನುಬಂಗಾರ ನೀವು ಮುದ್ದು, ಬ್ಯೂಟಿ, ಚೆಲುವೆ ಎಂದೆಲ್ಲಾ ಹೇಳಿದ್ದಾರೆ. ಇನ್ನೂ ಕೆಲವರು ನೀವು ಬಿಗ್ ಬಾಸ್ ಗೆ ಬರಬೇಕಿತ್ತು. ಎಂದಿದ್ದಾರೆ.