'ಅಂಬಾನಿ ಮಕ್ಳು ಹಿಂಗ್ ಅವತಾರ ಮಾಡಿರ್ಲಿಲ್ಲ..' ಮಧುಗೌಡ ಫೋಟೋ ಹಂಚಿಕೊಂಡ್ರೆ ನೆಟ್ಟಿಗರಿಗ್ಯಾಕೆ ಉರಿ!
ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮಧು ಗೌಡ ಮತ್ತು ನಿಖಿಲ್ ಅವರ ಮದುವೆ ಸಿದ್ಧತೆಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಕ್ಕೆ ಟ್ರೋಲ್‌ಗೆ ಒಳಾಗಿದ್ದಾರೆ. ಅವರ ಅತಿಯಾದ ಪೋಸ್ಟ್‌ಗಳಿಗೆ ನೆಟ್ಟಿಗರು ಬೇಸತ್ತು, ವ್ಯಂಗ್ಯವಾಡಿದ್ದಾರೆ.
ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಾದ ಮಧು ಗೌಡ ಹಾಗೂ ನಿಖಿಲ್ ಸದ್ಯದಲ್ಲಿಯೇ ಹಸೆಮಣೆ ಏರಲಿದ್ದಾರೆ. ಈ ಬಗ್ಗೆ ಮಧು ಗೌಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಪ್ರತಿಫೋಟೋವನ್ನೂ ಟ್ರೋಲ್ ಮಾಡಲಾಗುತ್ತಿದೆ.
ಕೆಲ ತಿಂಗಳ ಹಿಂದೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ ಈ ತಿಂಗಳ ಅಂತ್ಯದಲ್ಲಿ ಹಸೆಮಣೆ ಏರಲಿದೆ. ಈ ಬಗ್ಗೆ ಮಧು ಗೌಡ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಡೇಟ್‌ಗಳನ್ನು ನೀಡುತ್ತಿದ್ದರು.
ಯೂಟ್ಯೂಬ್ ವಿಡಿಯೋಗಳು ಹಾಗೂ ಇನ್ಸ್‌ಟಾಗ್ರಾಮ್ ರೀಲ್‌ಗಳ ಮೂಲಕ ಮದುವೆಯ ಪ್ರತಿ ವಿಚಾರವನ್ನೂ ಈಕೆ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾಮೆಂಟ್ ಮಾಡಿರುವ ವ್ಯಕ್ತಿಗಳು, ಅಂಬಾನಿ ಮಕ್ಕಳ ಮದುವೆಯನ್ನೂ ಕಂಡಿದ್ದೇವೆ. ಆದರೆ, ಅವರು ಯಾರೂ ಹಿಂಗೆಲ್ಲಾ ಆಡಿರ್ಲಿಲ್ಲ. ಒಂದು ಸಾರಿ ನಿಮ್ಮ ಮದುವೆ ಆದ್ರೆ ಸಾಕು ಎಂದು ಕಾಮೆಂಟ್ ಮಾಡಿದ್ದಾರೆ.
'ಅಬ್ಬಾ ಈ ಜೋಡಿ ಶೋಕಿ ಮಾಡೋಕೆ ಸ್ಟಾರ್ಟ್ ಮಾಡಿ ಎಷ್ಟು ದಿನ ಆಯ್ತು. ಇನ್ನೂ ಇವರ ಅವತಾರ ಮುಗಿದಿಲ್ವಾ?..' ಎಂದೂ ಕಾಮೆಂಟ್ ಮಾಡಿದ್ದಾರೆ. 'ಅಂಬಾನಿ ಮದುವೆ ಕೂಡ ಈಗೆ ಆಗಿಲ್ಲ ಅನಿಸ್ತಿದೆ.' 'ಎಂಥಾ ಮಾರೆ ಇವರ ದೊಂಬರಾಟ ಇನ್ನೂ ಮುಗಿದಿಲ್ವಾ' ಎಂದು ಮತ್ತೊಬ್ಬರು ಬರೆದಿದ್ದಾರೆ.
ಇದನ್ನೂ ಓದಿ: 'ಬೆಂಗಳೂರಿನಲ್ಲಿ ಹಿಂದಿ ಆಡಳಿತ ಭಾಷೆಯಾದ್ರೂ ಆಶ್ಚರ್ಯವೇನಿಲ್ಲ..' ಕಿರಿಕ್ ಕೀರ್ತಿ ಹೀಗೆ ಹೇಳಿದ್ದು ಯಾಕೆ?
ಮೊದ್ಲಿಗೆ ಲವ್ ಸ್ಟೋರಿ ವಿಲಾಗ್, ಆಮೇಲೆ ಎಂಗೇಜ್ ಮೆಂಟ್, ಆಮೇಲೇ ಪ್ರೀ ವೆಡ್ಡಿಂಗ್, ಆಮೇಲೆ ಬ್ರೈಡ್ ಡು ಬಿ, ಆಮೇಲೆ ಮದುವೆ, ಆಮೇಲೆ ಪ್ರೆಗ್ಸೆನ್ಸಿ, ಆಮೇಲೆ ಇವರ ಮಕ್ಕಳು ಸ್ಕೂಲ್‌ಗೆ ಹೋಗೋ ವಿಲಾಗ್. ಇಡೀ ವಂಶನೇ ಸೋಶಿಯಲ್ ಮೀಡಿಯಾ ಮೇಲೆ ಬೆಳೆಸ್ತಿದ್ದಾರಲ್ಲಪ್ಪ. ನಿಮ್ಮ ಮಕ್ಕಳು ಸ್ಕೂಲ್‌ಗೆ ಹೋಗೋವರೆಗೂ ನಾವು ವಿಲಾಗ್ ನೋಡ್ತಾನೆ ಕುಂತಿರ್ತಿವೀ ಎಂದು ಮತ್ತೊಬ್ಬರು ಬರೆದ್ದಾರೆ.
ಇದನ್ನೂ ಓದಿ: ಮದುವೆಗೂ ಮುನ್ನವೇ ನಾಗ ಚೈತನ್ಯ-ಶೋಭಿತಾ ನಡುವೆ ಹಳಸಿದ ಸಂಬಂಧ, ಫ್ಲ್ಯಾಟ್ ವಿಚಾರದಲ್ಲಿ ಮನಸ್ತಾಪ?
ಮಧು ಗೌಡ ಹಾಗೂ ನಿಖಿಲ್ ವಿವಾಹ ಅಕ್ಟೋಬರ್ 27ಕ್ಕೆ ನಡೆಯಲಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಅವರ ಫಾಲೋವರ್ಸ್‌ಗಳು ಅಡ್ವಾನ್ಸ್ ಆಗಿ ಮದುವೆಯ ವಿಶ್ ಮಾಡುತ್ತಿದ್ದಾರೆ. ಮದುವೆಯ ದಿನಾಂಕ ತಿಳಿಸಿದಾಗಲೂ, ಎಲ್ಲಾ ವಿಲಾಗ್ ಮಾಡ್ತೀರಿ ಪರ್ವಾಗಿಲ್ಲ. ಫರ್ಸ್ಟ್ ನೈಟ್‌ದು ವಿಲಾಗ್ ಮಾಡೋಕೆ ಹೋಗ್ಬೆಡಿ ಎಂದು ಕಾಲೆಳೆದಿದ್ದಾರೆ.
'ಪ್ರಪಂಚದಲ್ಲಿ ಇವಳು ಒಬ್ಬಳೇ ಮದ್ವೆ ಆಕ್ತಿರೋಧು... ತುಂಬಾ ಒವರ್ ಆಯ್ತು' , 'ಇನ್ನು ಆಗಿರೋದು ಎಂಗೇಜ್ಮೆಂಟ್ ಆದ್ರೆ ಈ ಪಿಕ್ ಪ್ರಗ್ನೆಟ್ ಅಲ್ಲಿ ಫೋಟೋ ಶೊಟ್ ಮಾಡಿರೋ ಫೋಟೋ ತರ ಇದೆ..' ಎನ್ನುವ ಕಾಮೆಂಟ್‌ಗಳೂ ಇವರಿಗೆ ಬಂದಿವೆ.