- Home
- Entertainment
- TV Talk
- ಒಂದು ಕಾಲದಲ್ಲಿ 50 ರೂಪಾಯಿಗೆ 15 ಕಿ.ಮೀ ಕ್ರಮಿಸುತ್ತಿದ್ದ ಈ ಕಿರುತೆರೆ ನಟಿ ಇಂದು ಒಂದು ಎಪಿಸೋಡ್‌ಗೆ ಲಕ್ಷ ಲಕ್ಷ ಎಣಿಸುತ್ತಾಳೆ!
ಒಂದು ಕಾಲದಲ್ಲಿ 50 ರೂಪಾಯಿಗೆ 15 ಕಿ.ಮೀ ಕ್ರಮಿಸುತ್ತಿದ್ದ ಈ ಕಿರುತೆರೆ ನಟಿ ಇಂದು ಒಂದು ಎಪಿಸೋಡ್‌ಗೆ ಲಕ್ಷ ಲಕ್ಷ ಎಣಿಸುತ್ತಾಳೆ!
ಒಂದು ಕಾಲದಲ್ಲಿ 50 ರೂಪಾಯಿ ಸಂಪಾದನೆಗೆ 15 ಕಿ.ಮೀ ಕ್ರಮಿಸುತ್ತಿದ್ದ ಅನುಪಮಾ ಖ್ಯಾತಿಯ ಈ ಕಿರುತೆರೆ ಸುಂದರಿ ಇಂದು ಒಂದು ಎಪಿಸೋಡ್‌ಗೆ ಲಕ್ಷ ಲಕ್ಷ ದುಡಿಯುತ್ತಾಳೆ. ಬಡತನವನ್ನೇ ಬೆನ್ನಿಗೆ ಕಟ್ಟಿಕೊಂಡು ಬದುಕಿದ ರೂಪಾಲಿ ಗಂಗೂಲಿ ಇಂದು ಟಿವಿ ಜಗತ್ತನ್ನು ಆಳುತ್ತಿದ್ದಾಳೆ ಇದೇ ಅಲ್ವ ಯಶಸ್ಸು?

ಪ್ರತಿನಿತ್ಯ ಗ್ಲಾಮರ್ ಲೋಕಕ್ಕೆ ಸಾವಿರಾರು ಜನರು ಬರುತ್ತಾರೆ ಹೋಗುತ್ತಾರೆ ಇಲ್ಲಿ ಹೆಸರು ಮಾಡಲು ಖ್ಯಾತಿ ಗಳಿಸಲು ಅಷ್ಟು ಸುಲಭವಲ್ಲ. ಸೌಂದರ್ಯ, ಹಣ ಇದ್ದ ಮಾತ್ರಕ್ಕೆ ಹೆಸರು ಗಳಿಸುತ್ತೇವೆಂಬುದು ಬರೀ ಭ್ರಮೆಯಷ್ಟೆ. ಸಿನಿಮಾ ಲೋಕದಲ್ಲಿ ಹೆಸರು ಗಳಿಸಲು ಹಗಲಿರುಳು ಶ್ರಮಿಸಬೇಕು ಇಷ್ಟಾಗಿಯೂ ಅವರು ಯಶಸ್ವಿಯಾಗುತ್ತಾರೆ ಎಂದೇನಿಲ್ಲ. ಅದರಲ್ಲಿ ಕೆಲವೇ ಜನರು ಯಶಸ್ವಿಯಾಗುತ್ತಾರೆ. ಉಳಿದವರು ಹೇಳಹೆಸರಲ್ಲಿದಂತೆ ಕಣ್ಮರೆಯಾಗುತ್ತಾರೆ. ಒಂದು ಕಾಲದಲ್ಲಿ ಖಾಲಿ ಜೇಬು, ಹಸಿದು ಹೊಟ್ಟೆಯಲ್ಲಿ ಬಂದವರು ಇಂದು ಗ್ಲಾಮರ್ ಜಗತ್ತಿನಲ್ಲಿ ಮಿಂಚಿ ಅಗರ್ಭ ಶ್ರೀಮಂತರಾಗಿದ್ದಾರೆ. ಕೇವಲ 50 ರೂ. ಸಂಪಾದನೆಗೆ ಪ್ರತಿನಿತ್ಯ 15ಕಿಮೀ ಕ್ರಮಿಸುತ್ತಿದ್ದ ಅನುಪಮಾ ಖ್ಯಾತಿಯ ಈ ಸುಂದರಿ ಇಂದು ತನ್ನ ಪರಿಶ್ರಮ, ನಟನಾ ಕೌಶಲ್ಯದಿಂಧ ಒಂದು ಎಪಿಸೋಡ್‌ಗೆ ಲಕ್ಷ ಲಕ್ಷ ಡಿಮ್ಯಾಂಡ್ ಮಾಡುತ್ತಾಳೆ.
ಹೌದು ಇಂದು ಕಿರುತೆರೆಯಲ್ಲಿ ಪ್ರಾಬಲ್ಯ ಹೊಂದಿರುವ ಪ್ರತಿಭಾವಂತ ನಟಿಯರಲ್ಲಿ ರೂಪಾಲಿ ಗಂಗೂಲಿ ಒಬ್ಬರು. ಅವರು ಹುಟ್ಟುತ್ತಲೇ ಕಠಿಣಹಾದಿ ಸೆವೆಸಿದವರು. ಕಠಿಣ ಪರಿಶ್ರಮದ ಫಲವಾಗಿ ಇಂದು ಕಿರುತೆರೆಯಲ್ಲಿ ಮೂಡಿಬರುತ್ತಿರುವ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಅನುಪಮಾ'ದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಪಾತ್ರದ ಮೂಲಕ ನಟಿ ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದಾರೆ.
ರೂಪಾಲಿ ಗಂಗೂಲಿ ವರ್ಷಗಳ ನಂತರ 'ಅನುಪಮಾ' ಕಾರ್ಯಕ್ರಮದ ಮೂಲಕ ಕಿರುತೆರೆಗೆ ಮರಳಿದರು. ಈ ಶೋ ಅವರನ್ನು ಮತ್ತೊಮ್ಮೆ ಸ್ಟಾರ್ ಪಟ್ಟಕ್ಕೇರಿಸಿದೆ. ಇಂದು ಕಿರುತೆರೆಯಲ್ಲಿ ಈ ನಟಿಯದ್ದೇ ಮಾತು. 'ಅನುಪಮಾ' ಕಾರ್ಯಕ್ರಮದ ಮೂಲಕ ರೂಪಾಲಿ ಹೆಸರು ಗಳಿಸುವುದಷ್ಟೇ ಅಲ್ಲ ಸಾಕಷ್ಟು ಗಳಿಕೆಯನ್ನೂ ಮಾಡುತ್ತಿದ್ದಾರೆ. ಒಂದು ವರದಿಗಳ ಪ್ರಕಾರ, ರೂಪಾಲಿ ಈಗ ಒಂದು ಸಂಚಿಕೆಗೆ 3 ಲಕ್ಷ ರೂಪಾಯಿಗಳಷ್ಟು ಹಣ ಪಡೆಯುತ್ತಾರೆ.
ಹೀಗಿರುವಾಗ ನಟಿ ರೂಪಾಲಿ ಜೀವನದಲ್ಲಿ ಎಂದು ಎಷ್ಟು ಕಷ್ಟಪಟ್ಟಿದ್ದರು ಎಂಬುದು ತಿಳಿದರೆ ಅಚ್ಚರಿ ಪಡುತ್ತೀರಿ. ನಟಿಯ ಕುಟುಂಬ ತುಂಬಾ ಕಷ್ಟಕ್ಕೆ ಸಿಲುಕಿತ್ತು. ಆ ಪರಿಸ್ಥಿತಿಯಲ್ಲಿ ಕೇವಲ 50 ರೂಪಾಯಿ ಸಂಪಾದನೆಗೆ 15ಕಿಮೀ ನಡೆದೇ ಹೋಗುತ್ತಿದ್ದಳು ಈ ಬಗ್ಗೆ Mashable India ಗೆ ನೀಡಿದ ಸಂದರ್ಶನದಲ್ಲಿ ರೂಪಾಲಿ ಗಂಗೂಲಿ ಬಹಿರಂಗಪಡಿಸಿದ್ದಾರೆ.
ತನ್ನ ವೃತ್ತಿಜೀವನವನ್ನು ಪ್ರಾರಂಭಿಸುವಾಗ, ಒಂದು ನಾಟಕಕ್ಕೆ ತನಗೆ ಸಿಗುತ್ತಿದ್ದಿದ್ದು ಕೇವಲ 50 ರೂ. ಮನೆಯಿಂದ 15 ಕಿಮೀ ದೂರದವರೆಗೆ ನಡೆದುಕೊಂಡೇ ಹೋಗುತ್ತಿದ್ದೆ. ಅಲ್ಲಿಗೆ ಹೋದ ಮೇಲೆ ನಾಟಕಕ್ಕೆ 50 ರೂ. ಕೊಡಲಾಗುತ್ತಿತ್ತು. ಅದರಲ್ಲಿ ಕೆಲವೊಮ್ಮೆ ಸಮೋಸಾ ಕೂಡ ಸಿಗುತ್ತಿತ್ತು. ಅಂತಹ ಬಡತನದ ಬದುಕು ಬೆನ್ನಿಗೆ ಕಟ್ಟಿಕೊಂಡು ಛಲ ಬಿಡದೆ ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರಿದ ನಟಿ ರೂಪಾಯಿ ಇಂದು ಟಿವಿ ಉದ್ಯಮವನ್ನೇ ಆಳುತ್ತಿದ್ದಾರೆ. 'ಅನುಪಮಾ' ಶೋ ಟಿಆರ್‌ಪಿ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೇರುತ್ತದೆ.