- Home
- Entertainment
- TV Talk
- ಈ ಕಾರಣಕ್ಕೆ ಮತ್ತೆ ಹಂಸಾ ಜೊತೆಗೆ ಬಿಗ್ ಬಾಸ್ ಮನೆಗೆ ಹೋಗೊ ಚಾನ್ಸ್ ಸಿಕ್ಕಿದ್ರೆ ರಿಜೆಕ್ಟ್ ಮಾಡ್ತಾರಂತೆ ಜಗದೀಶ್!
ಈ ಕಾರಣಕ್ಕೆ ಮತ್ತೆ ಹಂಸಾ ಜೊತೆಗೆ ಬಿಗ್ ಬಾಸ್ ಮನೆಗೆ ಹೋಗೊ ಚಾನ್ಸ್ ಸಿಕ್ಕಿದ್ರೆ ರಿಜೆಕ್ಟ್ ಮಾಡ್ತಾರಂತೆ ಜಗದೀಶ್!
ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಭಾರಿ ಸದ್ದು ಮಾಡಿದ್ದ ಜೋಡಿ ಅಂದ್ರೆ ಅದು ಲಾಯರ್ ಜಗದೀಶ್ ಮತ್ತು ಹಂಸಾ. ದೊಡ್ಮನೆಯಲ್ಲಿ ಹಂಸ ಹಿಂದೆ ಹಿಂದೆ ಸುತ್ತಿತ್ತಿದ್ದ ಜಗದೀಶ್ ಇದೀಗ ಉಲ್ಟಾ ಹೊಡೆದಿದ್ದಾರೆ.

ಬಿಗ್ ಬಾಸ್ ಸೀಸನ್ 11 (Bigg Boss Season 11)ರಲ್ಲಿ ಹೆಚ್ಚು ಸದ್ದು ಮಾಡಿದ ಸ್ಪರ್ಧಿ ಅಂದ್ರೆ ಅದು ಲಾಯರ್ ಜಗದೀಶ್. ಇದ್ದದ್ದು 2 ವಾರಗಳಾದ್ರೂ ಜಗಳ, ಕಾಮಿಡಿ, ಮನರಂಜನೆ, ಡ್ಯಾನ್ಸ್ ಎಲ್ಲಾ ಮಾಡುವ ಮೂಲಕ ಸಖತ್ ಮನರಂಜನೆ ಕೊಟ್ಟಿದ್ರು ಲಾಯರ್ ಜಗದೀಶ್. ಆದರೆ ಮಹಿಳೆಯರ ಬಗ್ಗೆ ಕೆಟ್ಟ ಮಾತುಗಳಾನ್ನಾಡುವ ಮೂಲಕ ಅವರು ಬಿಗ್ ಬಾಸ್ ಮನೆಯಿಂದ ಹೊರ ಬರಬೇಕಾಯಿತು.
ಇನ್ನು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಜಗದೀಶ್ ಮತ್ತು ಹಂಸಾ (Hamsa) ಜೋಡಿ ಭಾರಿ ಜನಪ್ರಿಯತೆ ಗಳಿಸಿದ್ದರು. ಹಂಸ ಮನೆಯ ಕ್ಯಾಪ್ಟನ್ ಆಗಿದ್ದಾಗ, ಜಗದೀಶ್ ಕೀಟಲೆ ಮಾಡುತ್ತಾ, ತುಂಟಾಟ ಆಡುತ್ತಾ ಹಂಸಾ ಕಾಲೆಳೆದದ್ದು, ಹಂಸಾ ಜೊತೆ ಡುಯೆಟ್ ಹಾಡಿದ್ದು ಎಲ್ಲವನ್ನೂ ಜನ ನೋಡಿದ್ದರು. ಹಾಗಾಗಿ ದೊಡ್ಮನೆಯಲ್ಲಿ ಸಣ್ಣವರು ಬಿಟ್ಟು, ದೊಡ್ಡವರ ಲವ್ ಸ್ಟೋರಿ ಶುರುವಾಗಿದೆ ಎಂದು ಹೇಳ್ತಿದ್ರು ಜನ.
ಜಗದೀಶ್ ದಿನಪೂರ್ತಿ ಹಂಸ್, ಹಂಸ್ ಎಂದು ಕರೆಯುತ್ತಾ ಹಂಸಾ ಹಿಂದೆ ಅಲೆಯುತ್ತಿದ್ದರು. ಜೊತೆಗೆ ಮುಂಗಾರು ಮಳೆ ಹಾಡು ಹೇಳುವ ಮೂಲಕ, ಮುಂಗಾರು ಮಳೆಯ ಎದೆಯ ಮೇಲೆ ಕಾಲಿಟ್ಟು ದಾಟುವ ದೃಶ್ಯವನ್ನು ಸಹ ಈ ಜೋಡಿ ರಿಕ್ರಿಯೇಟ್ ಮಾಡಿದ್ದು, ಅಷ್ಟೇ ಯಾಕೆ ಜಗದೀಶ್ ಅವರು ಹಂಸಾ ಅವರಿಗೆ ಐ ಲವ್ ಯೂ ಕ್ಯಾಪ್ಟನ್ ಎಂದು ಕೂಡ ಹೇಳಿದ್ರು.
ಕೊನೆಗೆ ಸುದೀಪ್ ವಾರದ ಪಂಚಾಯತಿಯಲ್ಲಿ ಕೇಳುವಾಗ ಮಾತ್ರ ಹಂಸಾ, ಅದು ನನ್ನ ಕೆಲಸ ಮಾಡಿಕೊಳ್ಳೊದಕ್ಕೋಸ್ಕರ ರೋಮ್ಯಾನ್ಸ್ ಮಾಡೋ ಥರ ಮಾಡಿದ್ದೇ ಎಂದು ಹೇಳಿದ್ದರು. ಜಗದೀಶ್ ಕೂಡ ಇದೆಲ್ಲಾ ಮನರಂಜನೆಗಾಗಿ, ಸ್ಕ್ರೀನ್ ಸ್ಪೇಸ್ ತೆಗೆದುಕೊಳ್ಳೋದಕ್ಕಾಗಿ ಮಾಡ್ತಿದ್ದೇನೆ ಎಂದು ಹೇಳಿದ್ದರು.
ಸದ್ಯ ಇಬ್ಬರೂ ಮನೆಯಿಂದ ಹೊರ ಬಂದಿದ್ದಾರೆ. ಜಗದೀಶ್ ಅಂತೂ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ನಿರೂಪಕಿ ಜಾಹ್ನವಿ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಗದೀಶ್, ಹಂಸಾ ಬಗ್ಗೆ ಕೂಡ ಮಾತನಾಡಿದ್ದು, ಇದನ್ನ ನೋಡಿ ಜನ ಒಳಗಿದ್ದಾಗ ಹಾಗೆ, ಈವಾಗ ಬೇರೇನೋ ಹೇಳ್ತಿದ್ದಾರಲ್ಲ ಎಂದಿದ್ದಾರೆ. ಅಷ್ಟಕ್ಕೂ ಜಗದೀಶ್ ಏನ್ ಹೇಳಿದ್ರು ಗೊತ್ತಾ?
ಇನ್ನೊಂದು ಸಲ ಹಂಸ ಜೊತೆ ಬಿಗ್ ಬಾಸ್ ಮನೆಗೆ ಕಳುಹಿಸಿದ್ರೆ ನಾನು ಖಂಡಿತವಾಗಿಯೂ ರಿಜೆಕ್ಟ್ ಮಾಡ್ತೇನೆ. ಆಕೆಗೆ ಸಂದರ್ಭವನ್ನು ಉಪಯೋಗಿಸಿಕೊಳ್ಳೋದಕ್ಕೆ ಗೊತ್ತು, ಆದರೆ ಅದನ್ನ ಮುಂದುವರೆಸಿಕೊಂಡು ಹೋಗಬೇಕೆಂಬ ಯೋಚನೆ ಇರೋದಿಲ್ಲ ಎಂದು ಹೇಳಿದ್ದಾರೆ ಜಗದೀಶ್.