- Home
- Entertainment
- TV Talk
- Lakshmi Nivasa: ಜಾಹ್ನವಿ ಎದುರೇ ವಿಶ್ವನ ಮುಗಿಸೋ ಸ್ಕೆಚ್ ರೆಡಿ! ಪ್ಲ್ಯಾನ್ ಕೇಳಿ ಶಾಂತಮ್ಮ ಗಡಗಡ
Lakshmi Nivasa: ಜಾಹ್ನವಿ ಎದುರೇ ವಿಶ್ವನ ಮುಗಿಸೋ ಸ್ಕೆಚ್ ರೆಡಿ! ಪ್ಲ್ಯಾನ್ ಕೇಳಿ ಶಾಂತಮ್ಮ ಗಡಗಡ
'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ, ಜಾಹ್ನವಿ ಬದುಕಿದ್ದಾಳೆ ಎಂದು ವಿಶ್ವ ಸೈಕೋ ಜಯಂತ್‌ಗೆ ಸವಾಲು ಹಾಕಿದ್ದಾನೆ. ಇದರಿಂದ ಕೋಪಗೊಂಡ ಜಯಂತ್, ಜಾಹ್ನವಿಯನ್ನು ಹುಡುಕಿ ಆಕೆಯ ಮುಂದೆಯೇ ವಿಶ್ವನನ್ನು ಮುಗಿಸಲು ಭಯಾನಕ ಸಂಚು ರೂಪಿಸಿದ್ದಾನೆ. ಈ ಅನಿರೀಕ್ಷಿತ ತಿರುವು ಕಥೆಗೆ ಹೊಸ ರೋಚಕತೆಯನ್ನು ತಂದಿದೆ.

ವಿಶ್ವನ ಪ್ರಾಣಕ್ಕೆ ಕಂಟಕ
ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ನಲ್ಲಿ ಈಗ ವಿಶ್ವನ ಪ್ರಾಣಕ್ಕೆ ಕಂಟಕ ಎದುರಾಗಿದೆ. ಹೋಗಿ ಹೋಗಿ ಸೈಕೋ ಜಯಂತ್ ಮುಂದೆ ಚಿನ್ನುಮರಿಯನ್ನು ಹುಡುಕು ಎನ್ನುವ ಚಾಲೆಂಜ್ ಹಾಕಿ ಹೋಗಿದ್ದಾನೆ ವಿಶ್ವ.
ಚಾಲೆಂಜ್ಗೆ ಕೋಪ
ಜಾಹ್ನವಿ ಬದುಕಿದ್ದಾಳೆ. ನಿನಗೆ ತಾಕತ್ತು ಇದ್ದರೆ ಅವಳನ್ನು ಹುಡುಕು ಎಂದಿದ್ದಾನೆ. ಇದನ್ನು ಕೇಳಿ ಜಯಂತ್‌ಗೆ ಉರಿದು ಹೋಗಿದೆ. ಜಾಹ್ನವಿ ಪಾತಾಳದಲ್ಲಿ ಇದ್ದರೂ ಹುಡುಕಿ ಬರುವ ತಾಕತ್ತು ಇದೆ ಎಂದಿರೋ ಜಯಂತ್, ಆ ಬಗ್ಗೆ ಶಾಂತಮ್ಮನಲ್ಲಿ ಎಲ್ಲಾ ವಿವರಿಸುತ್ತಿದ್ದಾನೆ.
ವೈಯಕ್ತಿಕ ವಿಷಯ
ತನ್ನ ವೈಯಕ್ತಿಕ ವಿಷಯವನ್ನು ವಿಶ್ವನ ಮುಂದೆ ಹೇಳಿಕೊಂಡಿರುವ ಜಾಹ್ನವಿ ಬಗ್ಗೆ ಜಯಂತ್‌ಗೆ ಕೋಪ ಬಂದರೂ, ಆ ತಪ್ಪನ್ನೂ ಅವನು ವಿಶ್ವನ ಮೇಲೆ ಹಾಕುತ್ತಿದ್ದಾನೆ. ನನ್ನ ಚಿನ್ನುಮರಿಗೆ ವಿಶ್ವ ತೊಂದರೆ ಕೊಡುತ್ತಿದ್ದಾನೆ ಎಂದು ಹೇಳಿದ್ದಾನೆ.
ಭಯಾನಕ ಪ್ಲ್ಯಾನ್
ಆದರೆ ಭಯಾನಕ ಪ್ಲ್ಯಾನ್ ಹಾಕಿದ್ದಾನೆ. ಜಾಹ್ನವಿಯನ್ನು ಹುಡುಕಿ ವಿಶ್ವನ ಮುಂದೆ ತಂದು ನಿಲ್ಲಿಸಿ, ಆಕೆಯ ಎದುರೇ ವಿಶ್ವನನ್ನು ಮುಗಿಸುತ್ತೇನೆ ಎಂದಿದ್ದಾನೆ. ಇದನ್ನು ಕೇಳಿ ಶಾಂತಮ್ಮ ಗಡಗಡ ನಡುಗಿ ಹೋಗಿದ್ದಾಳೆ.
ಗೊಂದಲದಲ್ಲಿ ವೀಕ್ಷಕರು
ಮುಂದೇನು ಆಗಬಹುದು ಎನ್ನುವುದನ್ನು ಯಾರೂ ಊಹಿಸಲಾಗದ ಟ್ವಿಸ್ಟ್ ಈ ಸೀರಿಯಲ್ ಪಡೆದುಕೊಂಡಿದೆ. ಚಿನ್ನುಮರಿ ಜಯಂತ್‌ಗೆ ಸಿಗಬೇಕೋ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ ವೀಕ್ಷಕರು.
ಸಿಕ್ಕರೂ ಕಷ್ಟ, ಸಿಗದಿದ್ದರೂ ಕಷ್ಟ
ಜಾಹ್ನವಿ ಜಯಂತ್‌ಗೆ ಸಿಕ್ಕರೂ ಕಷ್ಟ, ಸಿಗದೇ ಹೋದರೂ ಕಷ್ಟ. ಸದ್ಯ ಹೀಗಿದೆ ಪರಿಸ್ಥಿತಿ. ಸಿಕ್ಕರೆ ಜಾಹ್ನವಿ ಪಾಡು ಯಾರಿಗೂ ಬೇಡ. ಇನ್ನು ಸಿಗದೇ ಹೋದರೆ ಈ ಸೈಕೋ ಜಯಂತ್ ಯಾರಿಗೆ ಏನು ಮಾಡ್ತಾನೋ ಹೇಳದ ಸ್ಥಿತಿ. ಒಟ್ಟಿನಲ್ಲಿ ಈ ಸ್ಟೋರಿ ಊಹಿಸದ ತಿರುವು ಪಡೆದುಕೊಳ್ಳುತ್ತಾ ಸಾಗಿದೆ.