- Home
- Entertainment
- TV Talk
- 'ಲಕ್ಷ್ಮೀ ನಿವಾಸ' ಧಾರಾವಾಹಿ ನಟ ಅಜಯ್ ರಾಜ್ ಪತ್ನಿ ಪದ್ಮಿನಿ ದೇವನಹಳ್ಳಿ ಸೀಮಂತದ ಫೋಟೋಗಳು!
'ಲಕ್ಷ್ಮೀ ನಿವಾಸ' ಧಾರಾವಾಹಿ ನಟ ಅಜಯ್ ರಾಜ್ ಪತ್ನಿ ಪದ್ಮಿನಿ ದೇವನಹಳ್ಳಿ ಸೀಮಂತದ ಫೋಟೋಗಳು!
ಲಕ್ಷ್ಮೀ ನಿವಾಸ ಧಾರಾವಾಹಿ ನಟ ಅಜಯ್ ರಾಜ್ ಪತ್ನಿ ಪದ್ಮಿನಿ ದೇವನಹಳ್ಳಿ ಅವರೀಗ ಗಂಡು ಮಗುವಿನ ತಾಯಿ. ಈ ಹಿಂದೆ ಅವರು ಅದ್ದೂರಿಯಾಗಿ ಸೀಮಂತ ಆಚರಿಸಿಕೊಂಡಿದ್ದರು. ಈ ಫೋಟೋಗಳು ಇಲ್ಲಿವೆ.

ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಆಕ್ಟಿವ್ ಆಗಿರುವ ನಟ ಅಜಯ್ ರಾಜ್ (Ajay Raj) ಅವರು ಕೆಲವು ತಿಂಗಳುಗಳ ಹಿಂದೆಯೇ ತಂದೆಯೇ ಆಗಿದ್ದಾರೆ. ಈಗ ಅವರ ಪತ್ನಿ, ನಟಿ ಪದ್ಮಿನಿ ದೇವನಹಳ್ಳಿ ಅವರು ಸೀಮಂತದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಪದ್ಮಿನಿ ದೇವನಹಳ್ಳಿ ಕೂಡ ನಟಿ. ಈಗಾಗಲೇ ʼಹಿಟ್ಲರ್ ಕಲ್ಯಾಣʼ, ʼಮಹಾದೇವಿʼ ಧಾರಾವಾಹಿಯಲ್ಲಿ ಅವರು ನಟಿಸಿದ್ದರು. ಈ ಸೀರಿಯಲ್‌ಗಳಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತ್ತು.

ಸದ್ಯ ಅಜಯ್ ರಾವ್ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಲಕ್ಷ್ಮೀ ಮತ್ತು ಶ್ರೀನಿವಾಸ್ ಅವರ ಕಿರಿಯ ಪುತ್ರ ಹರೀಶನ ಪಾತ್ರದಲ್ಲಿ ಇವರು ನಟಿಸುತ್ತಿದ್ದಾರೆ.
ಕಳೆದ ಏಪ್ರಿಲ್ 15ರಂದು ಪದ್ಮಿನಿ ದೇವನಹಳ್ಳಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ವಿಷಯವನ್ನು ಅಜಯ್ ರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ನಟಿ ಪದ್ಮಿನಿ ದೇವನಹಳ್ಳಿ ಅವರ ತಂದೆ ಕಲಾಗಂಗೋತ್ರಿ ಮಂಜು ಕೂಡ ನಟ, ನಿರ್ದೇಶಕ. ಈ ಹಿಂದೆ ಅವರು ʼಸೀತಾರಾಮʼ ಧಾರಾವಾಹಿಯಲ್ಲಿ ನಟಿಸಿದ್ದರು. ಅಂದಹಾಗೆ ʼಸಂಕೀರ್ತನʼ ಎನ್ನುವ ಸಿನಿಮಾಕ್ಕೆ ಅವರು ನಿರ್ದೇಶನ ಮಾಡುತ್ತಿದ್ದಾರೆ.
ಸದ್ಯ ಪದ್ಮಿನಿ ದೇವನಹಳ್ಳಿ ಅವರು ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಜೊತೆಗೆ ಬೇರೆ ಭಾಷೆಯಲ್ಲಿಯೂ ನಟಿಸಿರುವ ಅವರು ಯಾವಾಗ ಕಂಬ್ಯಾಕ್ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.
ಒಟ್ಟಿನಲ್ಲಿ ಪದ್ಮಿನಿ ದೇವನಹಳ್ಳಿ ಅವರದ್ದು ಕಲಾ ಸೇವೆ ಮಾಡಿಕೊಂಡು ಬರುತ್ತಿರುವ ಕುಟುಂಬ.