ಲಕ್ಷ್ಮೀ ನಿವಾಸ ಧಾರಾವಾಹಿಯ ಮುದ್ದು ಹುಡುಗಿ ಖುಷಿ ಪಾತ್ರಧಾರಿ ಬದಲಾವಣೆ… ಕಾರಣ ಏನು?
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಖುಷಿ ಪಾತ್ರದಲ್ಲಿ ನಟಿಸುತ್ತಿದ್ದ ಬಾಲ ನಟಿ ನಿಶಿತಾ ಸೀರಿಯಲ್ ನಿಂದ ಹೊರ ನಡೆದಿದ್ದು, ಆ ಪಾತ್ರಕ್ಕೆ ಇನ್ನೊಬ್ಬ ಬಾಲನಟಿ ಎಂಟ್ರಿಯಾಗಿದೆ.

ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ಒಂದೊಂದು ತಿರುವು ಸಿಗುತ್ತಿದೆ. ಜಾನು -ಜಯಂತ್ ಬಾಳಲ್ಲಿ ಒಂದು ರೀತಿಯ ಖುಷಿ ಇದ್ರೆ, ಲಕ್ಷ್ಮೀ ನಿವಾಸದ ಮನೆಯಲ್ಲಿ ಮತ್ತೊಂದು ದೊಡ್ಡದಾಗಿ ಜಗಳ ಆಗಿದೆ, ವೆಂಕಿ ಮನೆ ಬಿಟ್ಟು ಹೊರ ನಡೆವಂತಾಗಿದೆ.
ಇನ್ನೊಂದು ವಿಷ್ಯ ಅಂದ್ರೆ ಇಲ್ಲಿವರೆಗೆ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಭಾವನಾಳ ಸಾಕುಮಗಳು ಖುಷಿ ಪಾತ್ರದಲ್ಲಿ ಬಾಲನಟಿ (Child Artist) ನಿಶಿತಾ ನಟಿಸುತ್ತಿದ್ದರು. ಇದೀಗ ಪಾತ್ರಧಾರಿಯ ಬದಲಾವಣೆಯಾಗಿದೆ.
ಹೊಸ ಪ್ರೊಮೋದಲ್ಲಿ ತೋರಿಸಿರುವಂತೆ, ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಇನ್ನು ಮುಂದೆ ಖುಷಿ ಪಾತ್ರದ ಬದಲಾವಣೆ ಆಗಲಿದೆ, ಈಕೆಗೂ ಮೊದಲಿನಷ್ಟೇ ಪ್ರೀತಿ ಕೊಟ್ಟು ಹರಸಿ ಎಂದು ಹೊಸ ನಟಿಯ ಪರಿಚಯ ಮಾಡಿಕೊಟ್ಟಿದ್ದಾರೆ.
ನಿಶಿತಾ ಯಾವ ಕಾರಣಕ್ಕೆ ಸೀರಿಯಲ್ ನಿಂದ ಹೊರನಡೆದಿದ್ದಾರೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಇತ್ತೀಚೆಗಷ್ಟೇ ನಿಶಿತಾ, 2 ಮಿಲಿಯನ್ ಯೂಟ್ಯೂಬ್ ಸಬ್ ಸ್ಕ್ರೈಬರ್ ಹಾಗೂ 1 ಮಿಲಿಯನ್ ಇನ್’ಸ್ಟಾಗ್ರಾಂ ಫಾಲೋವರ್ಸ್ ಆದ ಸಂಭ್ರಮವನ್ನು ಸೆಲೆಬ್ರೇಟ್ ಮಾಡಿದ್ದರು.
ಖುಷಿ ಪಾತ್ರ ಬದಲಾವಣೆ ಬಗ್ಗೆ ವೀಕ್ಷಕರು ಕೂಡ ಮಿಶ್ರ ಅಭಿಪ್ರಾಯ ವ್ಯಕ್ತ ಪಡಿಸಿದ್ದು, ಕೆಲವರು ಹೊಸ ಪಾತ್ರವನ್ನು ಇಷ್ಟ ಪಟ್ಟರೆ, ಇನ್ನೂ ಕೆಲವರು ಹೊಸ ಪಾತ್ರಕ್ಕಿಂತ ಹಳೆಯ ಪಾತ್ರವೇ ಚೆನ್ನಾಗಿತ್ತು ಎಂದಿದ್ದಾರೆ.
ಒಬ್ಬರು ಆ ಖುಷಿಗಿಂತ ಈ ಖುಷಿನೇ ಚೆನ್ನಾಗಿದ್ದಾಳೆ. ಮೊದಲಿನ ಖುಷಿ ಮುದ್ದಾಗಿದ್ದಳು, ಆದ್ರೆ ಆಕೆಗೆ ಭಾವನ ಅಮ್ಮ ಅನ್ನೋದು ಬಿಟ್ಟು ಬೇರೇನು ನಟಿಸೋಕೆ ಬರುತ್ತಿರಲಿಲ್ಲ. ಆಕೆಗೆ ಹೋಲಿಕೆ ಮಾಡಿದ್ರೆ, ಈ ಮಗು ಚೆನ್ನಾಗಿ ಮಾಡ್ತಿದೆ ಎಂದಿದ್ದಾರೆ. ಇನ್ನೂ ಕೆಲವರು ಮೊದಲಿನ ಖುಷಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.