ಅದ್ಧೂರಿಯಾಗಿ ಮೊದಲನೇ ಆನಿವರ್ಸರಿ ಸಂಭ್ರಮಿಸಿದ Lakshmi Nivasa ನಟಿ ಮಾನಸ
Lakshmi Nivasa ನಟಿ ಮಾನಸ ಮನೋಹರ್ ಅವರು ತಮ್ಮ ಎರಡನೇ ಮದುವೆಯ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು, ತಮ್ಮ ಫ್ಯಾಮಿಲಿ ಜೊತೆ ಅದ್ಧೂರಿಯಾಗಿ ಆನಿವರ್ಸರಿಯನ್ನು ಸಂಭ್ರಮಿಸಿದ್ದು, ಫೋಟೊಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟಿ ಮಾನಸ ಮನೋಹರ್
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಅವರ ಪಿಎ ಮೀರಾ ಪಾತ್ರದ ಮೂಲಕ ಕರ್ನಾಟಕದ ಮನೆಮಾತಾದ ಬೆಡಗಿ ಮಾನಸ ಮನೋಹರ್. ಇದೀಗ ಲಕ್ಷ್ಮೀ ನಿವಾಸದಲ್ಲಿ ನಟಿಸುತ್ತಿರುವ ಮಾನಸ ತಮ್ಮ ಮೊದಲನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
ವಿವಾಹ ವಾರ್ಷಿಕೋತ್ಸವ
ಮಾನಸ ಮನೋಹರ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ತಮ್ಮ ಸೀರಿಯಲ್ ತಂಡದ ಜೊತೆ ಸೇರಿ ಒಂದಲ್ಲ ಒಂದು ಕಾಮಿಡಿ ರೀಲ್ಸ್ ಮಾಡುತ್ತ ಅಪ್ ಲೋಡ್ ಮಾಡುತ್ತಿರುತ್ತಾರೆ. ಇದೀಗ ತಮ್ಮ ವಿವಾಹ ವಾರ್ಷಿಕೋತ್ಸವದ ಸ್ಪೆಷಲ್ ವಿಡಿಯೋ ಶೇರ್ ಮಾಡಿದ್ದಾರೆ.
ಫ್ಯಾಮಿಲಿ ಜೊತೆ ಸೆಲೆಬ್ರೇಶನ್
ಮಾನಸ ಮನೋಹರ್ ತಮ್ಮ ಎರಡನೇ ಮದುವೆಯ ಮೊದಲನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ. ಮಾನಸ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಪ್ರೀತಂ ಚಂದ್ರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಫುಟ್ ಬಾಲ್ ಪ್ಲೇಯರ್ ಪತಿ
ಪ್ರೀತಂ ಚಂದ್ರ ಅವರು ಫುಟ್ ಬಾಲ್ ಪ್ಲೇಯರ್ ಆಗಿದ್ದು, ಫುಟ್ ಬಾಲ್ ಅಕಾಡೆಮಿಯನ್ನು ನಡೆಸುತ್ತಿದ್ದಾರೆ ಅನ್ನೋದು ಇವರ ಸೋಶಿಯಲ್ ಮೀಡಿಯಾದಿಂದ ತಿಳಿದು ಬಂದಿದೆ. ಡೇಟಿಂಗ್ ಆಪ್ ಮೂಲಕ ಈ ಜೋಡಿ ಭೇಟಿಯಾಗಿ, ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಾನಸ ಮತ್ತು ಪ್ರೀತಂ ಪ್ರೇಮ ಎನ್ನುವ ಹೆಸರಿರುವ ಕೇಕ್ ಕತ್ತರಿಸಿ ತಮ್ಮ ಮನೆಮಂದಿ ಜೊತೆ ಸೆಲೆಬ್ರೇಶನ್ ಮಾಡಿದ್ದಾರೆ.
ನಟಿ ಹೇಳಿದ್ದೇನು?
ತಮ್ಮ ಆನಿವರ್ಸರಿ ದಿನ ಪತಿಗೆ ವಿಶ್ ಮಾಡುತ್ತಾ, ಈ 12 ತಿಂಗಳುಗಳಲ್ಲಿ, ನಾವು ವಿಪರೀತ ಸಂತೋಷ ಮತ್ತು ವಿಪರೀತ ದುಃಖ, ಎಲ್ಲಾ ಕಾಳಜಿ ಮತ್ತು ಎಲ್ಲಾ ಅವ್ಯವಸ್ಥೆ, ಎಲ್ಲಾ ಆಚರಣೆಗಳು ಮತ್ತು ಎಲ್ಲಾ ನಿಶ್ಯಬ್ದತೆಯನ್ನು ಏಕಕಾಲದಲ್ಲಿ ಅನುಭವಿಸಿದ್ದೇವೆ, ಆದರೆ ಎಲ್ಲದರಲ್ಲೂ ನಾವು ಪರಸ್ಪರ ಜೊತೆಯಾಗಿರಲು ಆರಿಸಿಕೊಂಡಿದ್ದೇವೆ…
ಅತ್ಯಂತ ಸುಂದರವಾದ ವರ್ಷ ಇದು
ನನ್ನ ಇಲ್ಲಿಯವರೆಗಿನ ಇಡೀ ಅಸ್ತಿತ್ವದ ಅತ್ಯಂತ ಸುಂದರವಾದ ವರ್ಷ ಇದು ಎಂದು ನಾನು ಒಪ್ಪಿಕೊಳ್ಳಲೇಬೇಕು, ನಾನು ಅಸ್ತಿತ್ವದಲ್ಲಿರುವುದನ್ನು ನಿಲ್ಲಿಸಿ ಬದುಕಲು ಪ್ರಾರಂಭಿಸಿದ್ದಕ್ಕೆ ನೀವೇ ಕಾರಣ, ಅದಕ್ಕಾಗಿ ಧನ್ಯವಾದಗಳು ಮತ್ತು ನಿಮ್ಮೊಂದಿಗೆ ಶಾಶ್ವತವಾಗಿ ಬದುಕಲು ಎದುರು ನೋಡುತ್ತಿದ್ದೇನೆ, ನನ್ನ ಸೋಲ್ ಮೆಟ್ ನ್ನು ಕೊನೆಗೂ ಕಂಡುಕೊಂಡಿದ್ದಕ್ಕೆ ನಾನು ತುಂಬಾ ಸಂತೋಷವಾಗಿದ್ದೇನೆ ಮತ್ತು ಥ್ಯಾಂಕ್ಯೂ ಯುನಿವರ್ಸ್ ಎಂದಿದ್ದಾರೆ ಮಾನಸ.
ಮಾನಸ ನಟಿಸಿರುವ ಧಾರಾವಾಹಿಗಳು
ಇನ್ನು ಮಾನಸ ಮನೋಹರ್ ನಟನೆ ಬಗ್ಗೆ ಹೇಳೋದಾದರೆ ಸದ್ಯ ನಟಿ ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ಸಿದ್ದೇಗೌಡ್ರ ಅತ್ತಿಗೆ ನೀಲಾಂಬರಿಯಾಗಿ ನಟಿಸುತ್ತಿದ್ದಾರೆ, ಇದು ನೆಗೆಟೀವ್ ಶೇಡ್ ನ ಪಾತ್ರವಾಗಿದೆ. ಅಷ್ಟೇ ಅಲ್ಲ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಶಾಂಭವಿ ಧಾರಾವಾಹಿಯಲ್ಲಿ ಶಿವಗಾಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ