PHOTOS: ಮದುವೆಯಾಗ್ತಿದ್ದಂತೆ ಕೇರಳಕ್ಕೆ ಹಾರಿದ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ವಿಧಿ
'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ವಿಧಿ ಫಾತ್ರದಲ್ಲಿ ನಟಿ ಲಾವಣ್ಯಾ ಹಿರೇಮಠ ಅವರು ನಟಿಸುತ್ತಿದ್ದಾರೆ. ವೃತ್ತಿಯಲ್ಲಿ ಡೆಂಟಿಸ್ಟ್ ಆಗಿರೋ ಲಾವಣ್ಯಾಗೆ ಈಗಾಗಲೇ ರಿಯಲ್ ಆಗಿ ಕೂಡ ಮದುವೆಯಾಗಿದೆ. ಈಗ ಅವರು ಧಾರಾವಾಹಿಯಲ್ಲಿ ಕೂಡ ಮದುವೆ ಆಗಿದ್ದಾರೆ. ಇನ್ನು ಕೇರಳದ ಟ್ರಿಪ್ ಫೋಟೋಗಳು ಇಲ್ಲಿವೆ.
16

ಲಕ್ಷ್ಮೀ ಬಾರಮ್ಮ ಹಾಗೂ ನನ್ನರಸಿ ರಾಧೆ ಧಾರಾವಾಹಿಯಲ್ಲಿ ನಟಿ ಲಾವಣ್ಯಾ ಹಿರೇಮಠ ಅವರು ನಟಿಸುತ್ತಿದ್ದಾರೆ. ಈಗ ಅವರು ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ವಿಧಿ ಎನ್ನುವ ಪಾತ್ರ ಮಾಡುತ್ತಿದ್ದಾರೆ.
26
ಕನ್ನಡ ನಟಿ ಲಾವಣ್ಯಾ ಹಿರೇಮಠ ಅವರು ಉತ್ತರ ಕರ್ನಾಟಕದವರು. ಈಗ ಅವರು ನಟನೆ ಜೊತೆಗೆ ಡೆಂಟಿಸ್ಟ್ ಆಗಿಯೂ ಕೆಲಸ ಮಾಡುತ್ತಿದ್ದಾರೆ.
36
ಕನ್ನಡ ನಟಿ ಲಾವಣ್ಯಾ ಹಿರೇಮಠ ಹಾಗೂ ಇವರ ಪತಿ ಆಕರ್ಷ್ ಒಟ್ಟಾಗಿ ಸೇರಿ ಬೆಂಗಳೂರಿನಲ್ಲಿಯೇ ಒಂದು ಕ್ಲಿನಿಕ್ ಆರಂಭಿಸಿದ್ದಾರೆ.
46
ಲಾವಣ್ಯಾ ಅವರು ಆಕರ್ಷ್ ಆಚಾರ್ ಎನ್ನುವವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಕುಟುಂಬಸ್ಥರು, ಸ್ನೇಹಿತರು ಈ ಮದುವೆಗೆ ಸಾಕ್ಷಿಯಾಗಿದ್ದರು.
56
ಲಾವಣ್ಯಾ ಅವರು ಪ್ರವಾಸ ಮಾಡಲು ಇಷ್ಟಪಡುತ್ತಾರೆ. ಸಮಯ ಸಿಕ್ಕಾಗ ಲಾವಣ್ಯಾ ಅವರು ಟ್ರಾವೆಲ್ ಮಾಡುತ್ತಾರೆ. ಈಗ ಅವರು ಕೇರಳಕ್ಕೆ ಭೇಟಿ ಕೊಟ್ಟಿದ್ದಾರೆ.
66
ನಟಿ ಲಾವಣ್ಯಾ ಹೀರೆಮಠ ಅವರು ಸೋಶಿಯಲ್ ಮೀಡಿಯಾದಲ್ಲಿ ಕೇರಳದ ಟ್ರಿಪ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅನೇಕರು ಈ ಫೋಟೋಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ.
Latest Videos