ಸತ್ಯ ಪಾತ್ರ ಮಾಡಿ, ಹೆಣ್ತನ ಮಿಸ್ ಮಾಡಿಕೊಂಡೆ: Ayesha
ಸೂಪರ್ ಕ್ವೀನ್ ರಿಯಾಲಿಟಿ ಶೋಗೆ ಆಯ್ಕೆ ಆದ ಸತ್ಯ ಧಾರಾವಾಹಿ ನಟಿ. ಫಿಸಿಕಲ್ ಮತ್ತು ಮೆಂಟಲ್ ಟೆಸ್ಟ್ ನಡೆದ ನಂತರವೇ ಈ ಕಿರೀಟ.
ತಮಿಳು ಜನಪ್ರಿಯ ಸತ್ಯ ಧಾರಾವಾಹಿಯಲ್ಲಿ ನಟಿಸುತ್ತಿರುವ ಆಯೇಷಾ ಇದೀಗ ಸೂಪರ್ ಕ್ವೀನ್ ರಿಯಾಲಿಟಿ ಶೋಗೆ ಆಯ್ಕೆ ಆಗಿದ್ದಾರೆ. ಈ ಸತ್ಯ ಧಾರಾವಾಹಿಯನ್ನು ಕನ್ನಡದಲ್ಲೂ ಸತ್ಯ ಎಂದು ರಿಮೇಕ್ ಮಾಡಲಾಗಿದ್ದು, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.
'ನಾನು ನಿಜ ಜೀವನಲ್ಲೂ girlish ವ್ಯಕ್ತಿ ಅಲ್ಲ. ನಾನು ಸದಾ 'pull up the sleeves ಎನ್ನುವ ಕ್ಯಾರೆಕ್ಟರ್ ಇರುವ ಹುಡುಗಿ. ಹೀಗಾಗಿ ನನಗೆ ಸತ್ಯ ಧಾರಾವಾಹಿ ಇಷ್ಟವಾಯ್ತು,' ಎಂದು ಇ-ಟೈಮ್ಸ್ ಜೊತೆ ಮಾತನಾಡಿದ್ದಾರೆ.
'ಹುಡುಗರ ಟೀ- ಶರ್ಟ್, ಪ್ಯಾಂಟ್,ಶಾರ್ಟ್ ಕೂದಲು ಹಾಗೂ ಸತ್ಯನ ಸ್ಟೈಲಿನಿಂದ ನನ್ನ ನಿಜವಾದ Feminine touch ಕಳೆದುಕೊಳ್ಳಲು ಶುರು ಮಾಡಿದೆ'
'ಸುಮಾರು 11 ಮಂದಿ ಜೊತೆಗೆ ಸ್ಪರ್ಧಿಸಿ ನಾನು ಸೂಪರ್ ಕ್ವೀನ್ ಆಗಲು ಹೊರಟಿರುವೆ. ಮುಖ್ಯವಾದ ಉದ್ದೇಶ ಹೇಗೆ ಬೇರೆಯವರು ವರ್ತಿಸುತ್ತಾರೆ, ಅವರನ್ನ ಅವರು ಹೇಗೆ ಕ್ಯಾರಿ ಮಾಡುತ್ತಾರೆಂದು ತಿಳಿದುಕೊಳ್ಳುದಾಗಿತ್ತು,' ಎಂದಿದ್ದಾರೆ.
ತಮಗೆ ಆತ್ಮೀಯವಾಗಿರುವರನ್ನು ಕರೆದುಕೊಂಡು, ಸೂಪರ್ ಕ್ವೀನ್‌ನಲ್ಲಿ ಪರಿಚಯಿಸಬೇಕಿತ್ತು. ಧಾರಾವಾಹಿಯಲ್ಲಿ ತನಗೆ ಡಬ್ಬಿಂಗ್ ಮಾಡುವ ಅಕ್ಷತಾ ಅವರನ್ನು ಕರೆದುಕೊಂಡು ಬಂದಿದ್ದು ಎಲ್ಲರಿಗೂ ಶಾಕಿಂಗ್.
'ಸುಮಾರು 35 ಜನರನ್ನು ಡಬ್ಬಿಂಗ್‌ಗೆಂದು ಆಡಿಷನ್ ಮಾಡಲಾಗಿತ್ತು. ಆದರೆ ಕೇವಲ ಫೋನ್ ಕಾಲ್‌ನಲ್ಲಿ ನಮಗೆ ಸೆಲೆಕ್ಟ್ ಆಗಿದ್ದು ಅಕ್ಷಯಾ. ಮೂರು ವರ್ಷಗಳಿಂದ ನನಗೆ ಧ್ವನಿ ನೀಡುತ್ತಿದ್ದಾರೆ. ನನ್ನ ಬಗ್ಗೆ ಇವರಿಗಿಂತ ಬೇರೆ ಯಾರಿಗೂ ಚೆನ್ನಾಗಿ ಗೊತ್ತಿರುವುದಿಲ್ಲ.
'ಫಿಸಿಕಲ್ ಟಾಸ್ಕ್‌ಗಿಂತ ನನಗೆ ಬ್ರೈನ್ ಟಾಸ್ಕ್ ಹೆಚ್ಚಿನ ಕೆಲಸ ಕೊಡುತ್ತದೆ. ಐಶ್ವರ್ಯಾ ರೀತಿ ಸ್ಪರ್ಧಿ ಇದ್ದಾಗ, ದೇಹದ ಶ್ರಮ ಅಗತ್ಯ. ನನ್ನ ಪ್ರಕಾರ ಫಿಟ್ನೆಸ್ ಅಂದ್ರೆ ಬರೀ ಜಿಮ್ ಅಥವಾ ಓಡುವುದಲ್ಲ. ಅದು ನಮ್ಮ ಮೆಂಟಲ್ ಸ್ಟ್ರೆಂತ್,' ಎಂದು ಆಯೇಷಾ ಮಾತನಾಡಿದ್ದಾರೆ.