ಲಕ್ಷ್ಮೀ ನಿವಾಸದ ಮುದ್ದು ಹುಡುಗಿ ಜಾನ್ವಿ ಆಲಿಯಾಸ್ ಚಂದನಾ ಬಗ್ಗೆ ನಿಮಗೆಷ್ಟು ಗೊತ್ತು?
ಚಂದನ ಅನಂತಕೃಷ್ಣ ಕಳೆದ ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಹೆಸರು. ಇವತ್ತು ಅಂದ್ರೆ ಜೂನ್ 26ರಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ನಟಿಯ ಕುರಿತು ಇಮ್ಟ್ರೆಸ್ಟಿಂಗ್ ವಿಷ್ಯಗಳನ್ನು ತಿಳಿಯೋಣ.
ಕನ್ನಡದ ಕಲರ್ಸ್ ಸೂಪರ್ ಚಾನೆಲ್‍ನಲ್ಲಿ ಪ್ರಸಾರವಾಗುತ್ತಿದ್ದ ಧರಣಿ ರಮೇಶ ನಿರ್ದೇಶನದ ರಾಜಾ ರಾಣಿ ಧಾರಾವಾಹಿಯ ಮೂಲಕ ಕನ್ನಡ ಕಿರುತರೆಗೆ ಎಂಟ್ರಿ ಕೊಟ್ಟ ನಟಿ ಚಂದನ ಅನಂತಕೃಷ್ಣ (Chandana Ananthakrishna). ಆ ಧಾರಾವಾಹಿಯಲ್ಲಿ ಚುಕ್ಕಿ ಪಾತ್ರದ ಮೂಲಕ ರಾಜ್ಯದ ಮನೆಮಾತಾದರು ಈ ಬೆಡಗಿ.
ಎಡವಟ್ಟು ರಾಣಿ ಚುಕ್ಕಿಯಾಗಿ, ವಟ ವಟ ಎಂದು ದಿನವಿಡೀ ಮಾತನಾಡುತ್ತಲೇ ಇರುವ ಅವರ ಪಾತ್ರ ಕನ್ನಡಿಗರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಆ ಧಾರಾವಾಹಿ ಬಳಿಕ ಹೂಮಳೆ ಸೀರಿಯಲ್ ನಲ್ಲಿ ಲಹರಿ ಎಂಬ ಪ್ರೌಢ, ಮದುವೆಗೆ ಮುನ್ನವೇ ಗರ್ಭಿಣಿಯಾಗೋ ಮಹಿಳೆಯ ಪಾತ್ರದಲ್ಲೂ ಅದ್ಭುತವಾಗಿ ನಟಿಸಿದ್ದರು ಚಂದನ.
ರಿಯಾಲಿಟಿ ಶೋಗಳಲ್ಲೂ ಗುರುತಿಸಿಕೊಂಡಿರುವ ನಟಿ ಸದ್ಯಕ್ಕಂತೂ ಲಕ್ಷ್ಮೀ ನಿವಾಸದ (Lakshmi Nivasa) ಮುದ್ದಿನ ಮಗಳು ಜಾಹ್ನವಿಯಾಗಿ, ಸೈಕೋ ಪಾತ್ ಪತಿ ಜಯಂತ್ ನ ಹೆಂಡ್ತಿ ಚಿನ್ನುಮರಿಯಾಗಿ ಅದ್ಭುತವಾಗಿ ನಟಿಸುತ್ತಿದ್ದಾರೆ ಚಂದನ ಅನಂತಕೃಷ್ಣ.
ಕನ್ನಡ ಕಿರುತೆರೆ ಮಾತ್ರವಲ್ಲ, ತೆಲುಗು ಕಿರುತೆರೆಯಲ್ಲೂ ಚಂದನಾ ಗುರುತಿಸಿಕೊಂಡಿದ್ದಾರೆ. ತೆಲುಗಿನ ವರುಧಿನಿ ಪರಿಣಯಂ ಧಾರಾವಾಹಿಯಲ್ಲಿ ನಟಿಸಿದ್ದರು, ಬಿಗ್ ಬಾಸ್ ಸೀಸನ್ 7 (Bigg Boss Kannada season 7) ರಸ್ಪರ್ಧಿಯೂ ಆಗಿದ್ದರು. ಅಷ್ಟೇ ಅಲ್ಲ ಡ್ಯಾನ್ಸಿಂಗ್ ಚಾಂಪಿಯನ್ ನಲ್ಲೂ ಭಾಗಿಯಾಗಿದ್ದರು. ಜೊತೆಗೆ ಹಾಡು ಕರ್ನಾಟಕ ಸಿಂಗಿಂಗ್ ರಿಯಾಲಿಟಿ ಶೋ ನಿರೂಪಕರೂ ಆಗಿದ್ದರು ಚಂದನಾ.
ತುಮಕೂರಿನ ಹುಡುಗಿಯಾಗಿರುವ ಚಂದನಾ ತುಮಕೂರಿನ ಟಿವಿಎಸ್ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ, ಪದವಿಪೂರ್ವ ಶಿಕ್ಷಣವನ್ನು ಆಳ್ವಾಸ್ ಕಾಲೇಜು ಮೂಡುಬಿದಿರೆಯಲ್ಲಿ, ಪದವಿ ಶಿಕ್ಷಣವನ್ನು ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಮುಗಿಸಿದರು. ಇದೀಗ ಪರ್ಫಾರ್ಮಿಂಗ್ ಆರ್ಟ್ ನಲ್ಲಿ ಸ್ನಾತ್ತಕೋತರ ಪದವಿ ಕೂಡ ಪಡೆದಿರುತ್ತಾರೆ.
ಕಿರುತರೆ ನಟಿ,ರಂಗಭೂಮಿ ಕಲಾವಿದೆ, ಗಾಯಕಿ ಹಾಗೂ ಭರತನಾಟ್ಯ ಕಲಾವಿದೆಯೂ ಆಗಿರುವ ಮಲ್ಟಿ ಟ್ಯಾಲೆಂಟೆಡ್ ನಟಿ ಚಂದನ ಇನ್ನೇನು ಸಿನಿಮಾಗೂ ಎಂಟ್ರಿಕೊಡಲಿದ್ದಾರೆ. ಇದರ ನಡುವೆಯೂ ನಟಿ ತಮ್ಮ ಪ್ಯಾಷನ್ ಆಗಿರುವ ಭರತನಾಟ್ಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಇತ್ತೀಚೆಗಷ್ಟೇ ತಮ್ಮ ಭರತನಾಟ್ಯ ರಂಗಪ್ರವೇಶ ಮಾಡಿರುವ ಚಂದನಾ ಅಪಾರ ಮೆಚ್ಚುಗೆಯನ್ನೂ ಪಡೆದಿದ್ದರು. ಇಂದು ಅಂದ್ರೆ ಜೂನ್ 26 ರಂದು ತಮ್ಮ 26 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಕನ್ನಡ ಕಿರುತೆರೆಯ ಮಲ್ಟಿ ಟ್ಯಾಲೆಂಟ್ ಹುಡುಗಿಗೆ ನಮ್ ಕಡೆಯಿಂದಲೂ ಹ್ಯಾಪಿ ಬರ್ತ್ ಡೇ.