Drustibottu : ದೃಷ್ಟಿ ಮೇಲೆ ಕಣ್ಣಿಟ್ಟಿರೋ ಕಿರಾತಕ ಪೊಲೀಸ್ ಆಫೀಸರ್ ಚಂದನವನ ಖ್ಯಾತ ನಟ, ನಿರ್ದೇಶಕರೂ ಹೌದು !
ದೃಷ್ಟಿ ಬೊಟ್ಟು ಧಾರಾವಾಹಿ ಇತ್ತೀಚೆಗೆ ಆರಂಭವಾಗಿ ಭಾರಿ ಸದ್ದು ಮಾಡುತ್ತಿದೆ. ಧಾರಾವಾಹಿಯಲ್ಲಿ ಪೊಲೀಸ್ ಆಫೀಸರ್ ನಟನೆ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟಕ್ಕೂ ಈ ಪೊಲೀಸ್ ಆಫೀಸರ್ ಯಾರ್ ಗೊತ್ತಾ?
ವಿಜಯ್ ಸೂರ್ಯ (Vijay Suriya) ಮತ್ತು ಅರ್ಪಿತಾ ಮೊಹಿತೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ದೃಷ್ಟಿಬೊಟ್ಟು ಸೀರಿಯಲ್ ತನ್ನ ವಿಭಿನ್ನ ಕಥೆಯ ಮೂಲಕ ವೀಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ರೌಡಿ ದತ್ತಭಾಯ್ ಆಗಿ ವಿಜಯ್ ಸೂರ್ಯ ಹಾಗೂ ದೃಷ್ಟಿಯಾಗಿ ಅರ್ಪಿತಾ ನಟಿಸುತ್ತಿದ್ದು, ಹುಡುಗಿಯರು ಬೆಳ್ಳಗಿದ್ದರೆ ಸಮಾಜದಲ್ಲಿ ಎಷ್ಟೊಂದು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತೆ ಅನ್ನೋದೆ ಕಥೆ. ಈ ಸೀರಿಯಲ್ ನಲ್ಲಿ ಮತ್ತೊಂದು ಪ್ರಮುಖ ಪಾತ್ರ ಪೊಲೀಸ್ ಆಫೀಸರದ್ದು.
ದಂತದ ಗೊಂಬೆಯಂತಿರುವ ದೃಷ್ಟಿಯನ್ನು ಬಾಲ್ಯದಲ್ಲಿಯೇ ಆಕೆಯ ಅಮ್ಮ, ಮುಖ ಮೈಗೆಲ್ಲಾ ಕಪ್ಪು ಬಣ್ಣವನ್ನು ಹಚ್ಚಿ ಬೆಳೆಸುತ್ತಾಳೆ. ಕಾರಣ, ಅವರಿರುವ ಸ್ಲಮ್ ನಂತಹ ಪ್ರದೇಶದಲ್ಲಿ ಸುಂದರವಾಗಿರುವ ಹೆಣ್ಣಿನ ಯಾವಾಗ ಬೇಕಿದ್ರೂ ಯಾರ ಕಣ್ಣು ಸಹ ಬೀಳುತ್ತೆ. ಹಾಗಾಗಿ ಇಡೀ ಸಮಾಜದ ಕಣ್ಣಿಂದ ದೃಷ್ಟಿಯ ಅಂದವನ್ನು ಮುಚ್ಚಿಟ್ಟಿದ್ದಳು ಅವಳ ಅಮ್ಮ.
ಬಡವರಿಗೆ ಹಣ ಕೊಟ್ರೆ ಏನ್ ಬೇಕಾದ್ರೂ ಮಾಡ್ತಾರೆ ಎನ್ನುವ ಮನಸ್ಥಿತಿ ಇರುವ ಧನ, ಕಾಮಪಿಶಾಚಿಯಾಗಿರುವ ಕಿರಾತಕ ಪೊಲೀಸ್ ದೃಷ್ಟಿಯನ್ನು ಸ್ವಾಮಿಜಿಯೊಬ್ಬರ ಕೆಲಸಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ ಜೋರಾಗಿ ಮಳೆ ಬಂದಿದ್ದರಂತೆ, ದೃಷ್ಟಿಯ ಅಂದದ ಅನಾವರಣವಾಗಿದೆ. ಆವಾಗಿನಿಂದ ಪೊಲೀಸ್ ಆಫೀಸರ್ (police officer) ಕಣ್ಣು ದೃಷ್ಟಿ ಮೇಲೆ ಬಿದ್ದಿದೆ. ದೃಷ್ಟಿಯ ಕಪ್ಪು ಬಣ್ಣವನ್ನು ಹಂಗಿಸುತ್ತಿದ್ದ ಅದೇ ಪೊಲೀಸ್ ಈಗ ದೃಷ್ಟಿಯ ಅಂದಕ್ಕೆ ಸೋತು ಆಕೆಯ ಹಿಂದೆ ಬಿದ್ದಿದ್ದಾರೆ.
ತನ್ನ ಕೆಟ್ಟತನದಿಂದಲೇ ದೃಷ್ಟಿ ಮತ್ತು ಆಕೆಯ ಮನೆಯವರಿಗೆ ಹಿಂಸೆ ಕೊಡುತ್ತಾ, ತಾನು ದೃಷ್ಟಿಯನ್ನು ಮದುವೆಯಾಗ್ತೀನಿ ಎನ್ನುತ್ತಾ, ಆಕೆಯ ಕರೆದುಕೊಂಡು ಸಿನಿಮಾಕ್ಕೆ ತೆರಳಿ, ಆಕೆಯ ಜೊತೆ ಕೆಟ್ಟದಾಗಿ ವರ್ತಿಸುತ್ತಾ, ವೀಕ್ಷಕರಿಗೆ ಸಿಕ್ಕಾಪಟ್ಟೆ ಬೈಗುಳ ತಿನ್ನುವಷ್ಟು ಕೆಟ್ಟವನಾಗಿ ನಟಿಸುತ್ತಿರುವ ಆ ಪೊಲೀಸ್ ಆಫೀಸರ್ ನಿಜವಾದ ಹೆಸರು ರಘು ಶಿವಮೊಗ್ಗ.
ಯಾರಿವರು ರಘು ಶಿವಮೊಗ್ಗ? (Raghu Shivamogga) ಮೊದಲು ಎಲ್ಲಿದ್ದವರು ಎಂದು ಕೇಳೋದಾದ್ರೆ… ಇಲ್ಲಿದೆ ಅವರ ಬಗ್ಗೆ ಪೂರ್ತಿ ಡಿಟೇಲ್ಸ್. ರಘು ಮೂಲತಃ ರಂಗಭೂಮಿ ಕಲಾವಿದ. ಶಿವಮೊಗ್ಗದ ಗೋಪಾಳದವರಾಗಿರುವ ರಘು ಮಿಮಿಕ್ರಿ ಮಾಡುತ್ತಿದ್ದರು, ನಂತರ ನೀನಾಸಂ ಸೇರಿಕೊಂಡು ಅಲ್ಲಿ ಅಭಿನಯವನ್ನು ಕಲಿತರು. ನಂತರ ನಟನಾಗಿ, ನಿರ್ದೇಶಕನಾಗಿ, ಬರಹಗಾರನಾಗಿ ಗುರುತಿಸಿಕೊಂಡರು ರಘು ಶಿವಮೊಗ್ಗ.
ಜನಪ್ರಿಯ ಕಿರುತೆರೆ ಧಾರಾವಾಹಿ ಮುಕ್ತದಲ್ಲಿ ನಟಿಸುವ ಮೂಲಕ ನಟನಾ ಕ್ಯಾಮೆರಾ ಎದುರಿಸಿದ ರಘು ಶಿವಮೊಗ್ಗ, ನಂತರ ಮಕ್ಕಳ ರಂಗಭೂಮಿ ಎನ್ನುವ ಕಿರುಚಿತ್ರ ನಿರ್ದೇಶಿಸಿದರು. ಚೂರಿಕಟ್ಟೆ ಎನ್ನುವ ಸಿನಿಮಾದ ನಿರ್ದೇಶಕರೂ ಕೂಡ ಇವರು. ಅಷ್ಟೇ ಅಲ್ಲ ಇತ್ತೀಚೆಗೆ ಬಿಡುಗಡೆಯಾದ ಭೀಮಾ (Bheema), ಹೊಯ್ಸಳ, ಕೈವಾ, ಡಿಡಿಡಿ ಚಿತ್ರದಲ್ಲೂ ಪೊಲೀಸ್ ಆಫೀಸರ್ ಆಗಿದ್ದ ರಘು, ದೃಷ್ಟಿಬೊಟ್ಟು ಧಾರಾವಾಹಿಯಲ್ಲೂ ಪೊಲೀಸ್ ಆಗಿದ್ದಾರೆ.
ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬೇನಾಮಿ ಕರೆಯ ಸುಳಿಯ ಕಥೆ ಹೊಂದಿದ್ದ 'ಚೌಕ ಬಾರ' ಎನ್ನುವ ಕಿರುಚಿತ್ರ ನಿರ್ದೇಶಿಸಿದ ರಘು ಶಿವಮೊಗ್ಗ, ಈ ಚಿತ್ರವನ್ನು ಥಿಯೇಟರ್ ಗಳಲ್ಲೂ ರಿಲೀಸ್ ಮಾಡಿ ಯಶಸ್ವಿಯಾಗಿದ್ದರು. ಈ ಸಿನಿಮಾದ ರಾಜ್ಯ ಪ್ರಶಸ್ತಿ ಕೂಡ ಬಂದಿತ್ತು. ಸದ್ಯ ದೃಷ್ಟಿ ಬೊಟ್ಟು ಧಾರಾವಾಹಿಗೆ ಜೀವ ತುಂಬುತ್ತಿರುವ ರಘು ಶಿವಮೊಗ್ಗ ಇವರ ನಟನೆಗೆ ಅಪಾರ ಮೆಚ್ಚುಗೆ ಲಭಿಸಿದೆ.