2 ತಿಂಗಳ ಮಗಳ ಜೊತೆ ನಟಿ ಕಾವ್ಯಾ ಗೌಡ ಔಟಿಂಗ್ : ಕೆಂಪು ಸೀರೇಲಿ ಮಿಂಚಿಂಗ್, ಹಣೆಯಲ್ಲಿಲ್ಲ ಬೊಟ್ಟು ಎಂದ ನೆಟ್ಟಿಗರು
ಕನ್ನಡ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರಾದ ನಟಿ ಕಾವ್ಯಾ ಗೌಡ ತಮ್ಮ ಎರಡು ತಿಂಗಳ ಮಗಳ ಜೊತೆ ಮೊದಲ ಬಾರಿಗೆ ಔಟಿಂಗ್ ಮಾಡಿದ್ದು, ಈ ಸಂದರ್ಭದಲ್ಲಿ ತೆಗೆದ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಮಿಂಚಿದ ನಟಿ ಕಾವ್ಯಾ ಗೌಡ (Kavya Gowda), ಇವರು ಗಾಂಧಾರಿ, ರಾಧಾ ರಮಣ ಮತ್ತು ಶುಭ ವಿವಾಹ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಮನೆಮಾತಾಗಿದ್ದರು.
2021 ರಲ್ಲಿ ಕಾವ್ಯಾ ಗೌಡ, ಬ್ಯುಸಿನೆಸ್ ಮೆನ್ ಆಗಿರುವ ಸೋಮಶೇಖರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಇದೇ ವರ್ಷ ಜನವರಿ 22 ರಂದು ಅಂದರೆ ಆಯೋಧ್ಯಾ ರಾಮ ಪ್ರತಿಷ್ಟಾಪನೆಯ ದಿನ ಮಗಳು ಜನಿಸಿದ್ದಳು.
ಕಾವ್ಯಾ ಗೌಡ, ತನ್ನ ಮುದ್ದಿನ ಮಗಳಿಗೆ ಸಿಯಾ ಎಂದು ಹೆಸರಿಟ್ಟಿದ್ದು, ಅದ್ಧೂರಿಯಾಗಿ ತೊಟ್ಟಿಲ ಶಾಸ್ತ್ರ ಕೂಡ ಮಾಡಿದ್ದರು, ಇದೀಗ ಮಗಳಿಗೆ 2 ತಿಂಗಳು ತುಂಬಿದ್ದು, ಪುಟ್ಟದಾಗಿ ಕೇಕ್ ಕತ್ತರಿಸಿ ಸಂಭ್ರಮಿಸಿದ ಫೋಟೋಗಳನ್ನ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
ತಮ್ಮ 2 ತಿಂಗಳ ಪುಟ್ಟ ಮಗಳು ಸಿಯಾ, ಪತಿ ಸೋಮಶೇಖರ್ (Somashekhar)ಮತ್ತು ತಮ್ಮ ಅಕ್ಕನ ಮಗಳ ಜೊತೆ ಔಟಿಂಗ್ ಮಾಡಿರುವ ಕಾವ್ಯಾಗೌಡ, ಔಟಿಂಗ್ ನ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಮಗಳ ಜೊತೆ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಕ್ವಾಲಿಟಿ ಸಮಯ ಕಳೆದಿದ್ದು, ಅಲ್ಲಿಯೇ ತಮ್ಮ ಮಗಳ ಎರಡನೇ ತಿಂಗಳು ಪೂರ್ತಿಯಾದ ಸಂಭ್ರಮವನ್ನು ಹಂಚಿಕೊಂಡಿದ್ದು, ನಮ್ಮ ಜೀವನವನ್ನು ಕಂಪ್ಲೀಟ್ ಮಾಡಿ 2 ತಿಂಗಳು ಆಯ್ತು ಎಂದು ಬರೆದುಕೊಂಡಿದ್ದಾರೆ.
ಬೆಡ್ ಮಧ್ಯದಲ್ಲಿ ಮಗಳು ಸಿಯಾಳನ್ನು ಮಲಗಿಸಿ, ಹಿಂಭಾಗದಲ್ಲಿ ಕೆಂಪು ಬಲೂನ್ ನಿಂದ ಅಲಂಕರಿಸಿದ್ದಾರೆ. ಕಾವ್ಯಾ, ಸೊಮಶೇಖರ್ ಮತ್ತು ಪುತ್ರಿ ಮೂರು ಜನ ಬಿಳಿ ಬಟ್ಟೆ ಧರಿಸಿದ್ದು, ಪುಟ್ಟ ಬಿಳಿ ಕೇಕ್ ಮೇಲೆ ಹ್ಯಾಪಿ 2 ಮಂತ್ಸ್ ಎಂದು ಬರೆದಿದ್ದಾರೆ. ಆ ಮೂಲಕ ಮಗಳ 2ನೇ ತಿಂಗಳನ್ನು ಸೆಲೆಬ್ರೇಟ್ ಮಾಡಿದ್ದಾರೆ.
ಇನ್ನು ಸೋಶಿಯಲ್ ಮಿಡಿಯಾದಲ್ಲಿ ಕಾವ್ಯಾ ಗೌಡ ಅವರ ಕೆಂಪು ಸೀರೆಯಲ್ಲಿನ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ನಿಧಿಕ ಶೇಖರ್ ಅವರ ಸುಂದರವಾದ ಕೆಂಪು ಡಿಸೈನರ್ ಸೀರೆಯ ಜೊತೆ ಡೈಮಂಡ್ ಕುಂದನ್ ನೆಕ್ಲೆಸ್ ಧರಿಸಿರುವ ಕಾವ್ಯಾ ಗೌಡ ಅಪ್ಸರೆಯಂತೆ ಕಾಣಿಸ್ತಿದ್ದಾರೆ.
ಕೆಂಪು ಬಣ್ಣದ ಸೀರೆಯಲ್ಲಿ ನಿಮ್ಮ ಅಂದ ಮತ್ತಷ್ಟು ಚೆನ್ನಾಗಿ ಕಾಣಿಸ್ತಿದೆ, ಮುದ್ದು ಮುದ್ದು ದೇವತೆ ನೀವು, ಹಣೆ ಮೇಲೆ ಒಂದು ಬೊಟ್ಟು ಇಟ್ಟಿದ್ರೆ ಇನ್ನೂ ಚೆನ್ನಾಗಿ ಕಾಣಿಸ್ತಿತ್ತು, ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.