ಕೆಬಿಸಿ-16ರಲ್ಲಿ 1 ಕೋಟಿ ರೂ ಪ್ರಶ್ನೆ ಎದುರಿಸುತ್ತಿರುವ ಈ ಯುವತಿ ಯಾರು?
ರಾಜಸ್ಥಾನದ ನರೇಶಿ ಮೀನಾ ಕೆಬಿಸಿ ಸೀಸನ್ 16 ರಲ್ಲಿ ಒಂದು ಕೋಟಿ ರೂಪಾಯಿಯ ಪ್ರಶ್ನೆಯನ್ನು ತಲುಪಿದ ಮೊದಲ ಸ್ಪರ್ಧಿಯಾಗಿದ್ದಾರೆ. ಬ್ರೈನ್ ಟ್ಯುಮರ್ ಎಂಬ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೂ ನರೇಶಿ ಈ ಸಾಧನೆ ಮಾಡಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್‌ಪತಿಯ 16ನೇ ಸೀಸನ್ ಆರಂಭವಾಗಿದೆ. ಅಮಿತಾಬ್ ಬಚ್ಚನ್ ಈ ಶೋ ನಡೆಸಿಕೊಡುತ್ತಾರೆ.
ಇದೀಗ ಕೆಬಿಸಿ ಸೀಸನ್ 16 ರಲ್ಲಿ ಒಂದು ಕೋಟಿ ರೂಪಾಯಿಗಳ ಪ್ರಶ್ನೆಯನ್ನು ತಲುಪಿದ ಮೊದಲ ಸ್ಪರ್ಧಿ ನರೇಶಿ ಮೀನಾ. ಇವರು ರಾಜಸ್ಥಾನ ಮೂಲದವರಾಗಿದ್ದಾರೆ.
ಈ ಹಿಂದೆ ನರೇಶಿ ಆಡಿಷನ್‌ಗಳನ್ನು ನೀಡಿದ್ದರು ಆದರೆ ಯಶಸ್ಸು ಸಿಕ್ಕಿರಲಿಲ್ಲ. ಈಗ ಕೆಬಿಸಿ ಸೀಸನ್ 16 ರಲ್ಲಿ ಒಂದು ಕೋಟಿ ರೂಪಾಯಿ ಪ್ರಶ್ನೆಯನ್ನು ತಲುಪಿದ ಮೊದಲ ಸ್ಪರ್ಧಿಯಾಗಿದ್ದಾರೆ.
ನರೇಶಿ ಮೀನಾ ಮೂಲತಃ ರಾಜಸ್ಥಾನದ ಸವಾಯಿ ಮಾಧೋಪುರದವರು. ನರೇಶಿ ಬ್ರೈನ್ ಟ್ಯುಮರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. 2017ರಿಂದಲೂ ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಭಾಗವಹಿಸಲು ನರೇಶಿ ಮೀನಾ ಪ್ರಯತ್ನಿಸುತ್ತಿದ್ದರು.
ಕೆಬಿಸಿಯಲ್ಲಿ ಭಾಗವಹಿಸಲು ಬಂದಾಗ ಅಮಿತಾಭ್ ಬಚ್ಚನ್ ಅವರನ್ನು ನರೇಶ್ ಎಂದು ಕರೆದರು. ಈ ಕಾರ್ಯಕ್ರಮದಲ್ಲಿ ನರೇಶಿ ಅವರು ಅಮಿತಾಭ್ ಅವರನ್ನು ಸವಾಯಿ ಮಾಧೋಪುರಕ್ಕೆ ಆಹ್ವಾನಿಸಿದ್ದಾರೆ.
ನರೇಶಿ ಮೀನಾ ರಾಜಸ್ಥಾನದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮೇಲ್ವಿಚಾರಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಅವರು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ.
ನನಗೆ ಬ್ರೈನ್ ಟ್ಯುಮರ್ ಇತ್ತು ಎಂದು ನರೇಶಿ ಹೇಳುತ್ತಾರೆ. 2019 ರಲ್ಲಿ ಅವರು ಅದಕ್ಕೆ ಚಿಕಿತ್ಸೆ ಪಡೆದರು, ಆದರೆ ಅವರು ಸಂಪೂರ್ಣವಾಗಿ ಗುಣಮುಖರಾಗಿಲ್ಲ. ನರೇಶಿ ಕಾಯಿಲೆಯೊಂದಿಗೆ ಬದುಕಲು ಕಲಿತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.