- Home
- Entertainment
- TV Talk
- ಜಿಮ್ ಸೀನನಾಗಿ ವೀಕ್ಷಕರ ಮನಗೆದ್ದ ಅಣ್ಣಯ್ಯ ಧಾರಾವಾಹಿ ನಟನ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ
ಜಿಮ್ ಸೀನನಾಗಿ ವೀಕ್ಷಕರ ಮನಗೆದ್ದ ಅಣ್ಣಯ್ಯ ಧಾರಾವಾಹಿ ನಟನ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ
ಅಣ್ಣಯ್ಯ ಧಾರಾವಾಹಿಯಲ್ಲಿ ಜಿಮ್ ಸೀನಾ ಪಾತ್ರದ ಮೂಲಕ ಕನ್ನಡಿಗರ ಮನಸ್ಸು ಗೆದ್ದ ನಟ ಸುಷ್ಮಿತ್ ಜೈನ್. ಇವರ ರಿಯಲ್ ಲೈಫ್ ಕುರಿತು ಒಂದಿಷ್ಟು ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ.

ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಅಣ್ಣಯ್ಯ ಸೀರಿಯಲ್, ಸದ್ಯ ಜನರಿಂದ ಮೆಚ್ಚುಗೆ ಪಡೆದಂತಹ ಧಾರಾವಾಹಿಯಾಗಿದೆ. ಈ ಧಾರಾವಾಹಿಯ ಪ್ರತಿಯೊಂದು ಪಾತ್ರಗಳನ್ನು ಜನರು ಇಷ್ಟಪಡುತ್ತಿದ್ದಾರೆ. ಅದರಲ್ಲೂ ಜಿಮ್ ಸೀನಾ ಪಾತ್ರ ಅಂದ್ರಂತೂ ವೀಕ್ಷಕರು ಇಷ್ಟಪಟ್ಟು ನೋಡ್ತಾರೆ.
ಆರಂಭದಿಂದಲೂ ಜಿಮ್ ಸೀನಾ ಅಂದ್ರೆ ಶ್ರೀನಿವಾಸ ಹಾಗೂ ಗುಂಡಮ್ಮ ರಶ್ಮಿಗೆ ಹೊಂದಾಣಿಕೆನೆ ಆಗಲ್ಲ. ಇಬ್ಬರ ನಡುವೆ ಪ್ರತಿ ವಿಷಯಕ್ಕೂ ಜಗಳ ತಪ್ಪಿದ್ದಲ್ಲ, ಇಬ್ಬರು ಜೋಡಿಯಾದ್ರೆ ಎಷ್ಟು ಚೆಂದ ಎಂದೇ ಜನ ಬಯಸಿದ್ದರು. ಅದರಂತೆ ಇದೀಗ ಜಿಮ್ ಸೀನಾ ಹಾಗೂ ಗುಂಡಮ್ಮ ಮದುವೆಯಾಗಿದ್ದಾರೆ. ಆದರೆ ಇಬ್ಬರ ನಡುವಿನ ಕಿತ್ತಾಟ ಮಾತ್ರ ಮುಗಿದಿಲ್ಲ. ಫಸ್ಟ್ ನೈಟ್ ನಲ್ಲೂ ಈ ಜೋಡಿ ಕಿತ್ತಾಡಿ ಮಂಚ ಮುರಿದು ಹಾಕಿದೆ.
ಈ ಜಿಮ್ ಸೀನಾ (Gym Seena) ಪಾತ್ರವನ್ನು ಕನ್ನಡಿಗರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಈ ಪಾತ್ರವನ್ನು ಅಷ್ಟೆ ಅದ್ಭುತವಾಗಿ ನಿರ್ವಹಿಸುತ್ತಿರುವವರು ಸುಷ್ಮಿತ್ ಜೈನ್. ಇವರಿಗೆ ನಟನೆ ಹೊಸದಲ್ಲ. ಕಳೆದ ಕೆಲವು ವರ್ಷಗಳಿಂದ ನಟನಾ ಜಗತ್ತಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಸುಷ್ಮಿತ್. ಇವರ ಕುರಿತು ಒಂದಿಷ್ಟು ಇಂಟ್ರೆಸ್ಟಿಂಗ್ ವಿಷ್ಯಗಳನ್ನು ತಿಳಿಯೋಣ ಬನ್ನಿ.
ಮೈಸೂರಿನ ಹುಡುಗನಾಗಿರುವ ಸುಷ್ಮಿತ್ ಜೈನ್ ಮೆಕ್ಯಾನಿಕ್ ಇಂಜಿನಿಯರಿಂಗ್ ಮಾಡಿದ್ದಾರೆ. ಕನ್ನಡ ಕಿರುತೆರೆಗೆ ಕಾಲಿಟ್ಟದ್ದು ಸತ್ಯಂ ಶಿವಂ ಸುಂದರಂ ಧಾರಾವಾಹಿಯ ಸ್ಯಾಂಡಿ, ಆಲಿಯಾಸ್ ಸುಂದರನಾಗಿ. ಈ ಧಾರಾವಾಹಿಯ ನಂತರ ಹಲವು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು ಸುಷ್ಮಿತ್ ಜೈನ್.
ಇವರು ನಾಯಕನಾಗಿ ಭಡ್ತಿ ಪಡೆದದ್ದು, ಭೂಮಿ ತಾಯಾಣೆ ಧಾರಾವಾಹಿ ಮೂಲಕ. ಬಳಿಕ ಮನಸೆಲ್ಲಾ ನೀನೆ ಧಾರಾವಾಹಿಯಲ್ಲಿ ಖಳ ನಾಯಕನಾಗಿ ಅಬ್ಬರಿಸಿದರು. ಖಳನಾಯಕನಿದ್ದರೆ ಮಾತ್ರ ನಾಯಕನಿಗೆ ಪ್ರಾಮುಖ್ಯತೆ ಸಿಗೋದು ಎನ್ನುವ ಸುಷ್ಮಿತ್ ಗೆ ವಿಲನ್ ಆಗೋದು ಅಂದ್ರೆ ಇಷ್ಟವಂತೆ.
ನಂತರ ದೊರೆಸಾನಿ ಎನ್ನುವ ಸೀರಿಯಲ್ ನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಅದಾದ ಬಳಿಕ ಕನ್ಯಾದಾನ ಎನ್ನುವ ಧಾರಾವಾಹಿಯಲ್ಲೂ ಒಂದು ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು ಸುಷ್ಮಿತ್ ಜೈನ್. ಅದರಲ್ಲಿ ನಾಯಕನ ಪಾತ್ರದಲ್ಲಿ ಮಿಂಚಿದ್ದರು.
ಅಷ್ಟೇ ಅಲ್ಲ ಸುಷ್ಮಿತ್ ಜೈನ್ ಕಿರುಚಿತ್ರವೊಂದರಲ್ಲಿ ಕೂಡ ನಟಿಸಿದ್ದಾರೆ. ರಘು ಚರಣ್ ನಿರ್ದೇಶನ ಮಾಡಿರುವ ವರ್ಜಿನ್ ಎನ್ನುವ ಕನ್ನಡ ಕಿರುಚಿತ್ರದಲ್ಲಿ ಇವರು ನಟಿಸಿದ್ದರು. ಆದರೆ ಸುಷ್ಮಿತ್ ಗೆ ಹೆಚ್ಚಿನ ಜನಪ್ರಿಯತೆ ಕೊಟ್ಟಿದ್ದು ಅಣ್ಣಯ್ಯ ಧಾರಾವಾಹಿಯ ಜಿಮ್ ಸೀನನ ಪಾತ್ರ.
ವಿಭಿನ್ನ ಪಾತ್ರಗಳನ್ನು ಮಾಡಲು ಇಷ್ಟಪಡುವ ಸುಷ್ಮಿತ್, ಆರಂಭದಲ್ಲಿ ಜಿಮ್ ಸೀನಾ ಪಾತ್ರ ಬಂದಾಗ ನನಗೆ ಇದನ್ನ ಮಾಡಲು ಸಾಧ್ಯವೇ ಎನ್ನುವ ಭಯ ಇತ್ತಂತೆ. ಬಳಿಕ ನಿರ್ದೇಶಕರು ನೀಡಿದ ಸ್ವತಂತ್ರ ಹಾಗೂ ಸಹಾಯದಿಂದಾಗಿ, ಆ ಮಜವಾದ ಪಾತ್ರವನ್ನು ಮಾಡೋದು ಸುಲಭವಾಯಿತು ಎನ್ನುತ್ತಾರೆ ಸುಷ್ಮಿತ್.
ಸೀರಿಯಲ್ ಆರಂಭವಾದಾಗ ಈ ಕಾಮಿಡಿ ಪಾತ್ರವನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಭಯ ಇತ್ತಂತೆ. ಆದರೆ ಜನರಿಗೆ ಪಾತ್ರ ಇಷ್ಟವಾಗಿ ಹೊಗಳ ತೊಡಗಿದಾಗ ತುಂಬಾನೆ ಖುಷಿ ಆಗಿತ್ತಂತೆ ಸುಷ್ಮಿತ್ ಜೈನ್ ಅವರಿಗೆ. ಇನ್ನು ಸೀರಿಯಲ್ ನಲ್ಲಿ ಹೆಸರಿಗೆ ಮಾತ್ರವಲ್ಲ, ನಿಜಜೀವನದಲ್ಲೂ ಇವರು ಜಿಮ್ ಮಾಡಿ ಕಟ್ಟು ಮಸ್ತಾದ ಬಾಡಿ ಬಿಲ್ಡ್ ಮಾಡಿದ್ದಾರೆ.